ಪವನ್ ಒಡೆಯರ್

'ಕೆಲಸ ಮಾಡಿ ಮುಗಿಸು ಎಂದಿದ್ದರು.. ಹೋಗಿ ಬಾ ಗೀತಮ್ಮ': ನಿರ್ದೇಶಕ ಪವನ್ ಒಡೆಯರ್ ತಾಯಿ ನಿಧನ, ಭಾವುಕ ಪೋಸ್ಟ್!
ಗೀತಾ ಒಡೆಯರ್ ಮಲ್ಟಿಪಲ್ ಮೈಲೋಮಾ ಎಂಬ ಒಂದು ರೀತಿಯ ರಕ್ತದ ಕ್ಯಾನ್ಸರ್ ಹಾಗೂ ಜಿಬಿ ಸಿಂಡ್ರೋಮ್ ಎಂಬ ಅಪರೂಪದ ನರ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು.

ಶಿವರಾಜ್‌ಕುಮಾರ್ ಜೊತೆ ಸಂಜನಾ ಆನಂದ್; ಪವನ್ ಒಡೆಯರ್ ನಿರ್ದೇಶನದ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ ಸಾಥ್
ಈ ಚಿತ್ರಕ್ಕೆ ವೆಂಕಟ್ ನಾರಾಯಣ ಕೋಣಂಕಿ ನೇತೃತ್ವದ ಕೆವಿಎನ್ ಪ್ರೊಡಕ್ಷನ್ಸ್, ಒಡೆಯರ್ ಮೂವೀಸ್ ಸಹಯೋಗದೊಂದಿಗೆ ಬಂಡವಾಳ ಹೂಡಿದೆ.

ಪವನ್ ಒಡೆಯರ್-ಶಿವಣ್ಣ ಕಾಂಬಿನೇಷನ್ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್?
ಮತ್ತೊಂದು ಪ್ರಮುಖ ಪಾತ್ರಕ್ಕಾಗಿ ಪ್ರಜ್ವಲ್ ದೇವರಾಜ್ ಅವರೊಂದಿಗೆ ನಿರ್ಮಾಪಕರು ಮಾತುಕತೆ ನಡೆಸುತ್ತಿದ್ದಾರೆ ಎಂದು ಸಿನಿಮಾ ಎಕ್ಸ್‌ಪ್ರೆಸ್‌ಗೆ ಮೂಲಗಳು ತಿಳಿಸಿವೆ.

ಸಾಗರ್ ಪುರಾಣಿಕ್ ನಿರ್ದೇಶನದ 'ವೆಂಕ್ಯ' ಚಿತ್ರದ ಮೂಲಕ ರೂಪಾಲಿ ಸೂದ್ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ
ಸಾಗರ್ ಪುರಾಣಿಕ್ ನಿರ್ದೇಶನದ ವೆಂಕ್ಯ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ರೂಪಾಲಿ ಸೂದ್ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ಸಾಗರ್ ಪುರಾಣಿಕ್ ಅವರು ನಿರ್ದೇಶನದೊಂದಿಗೆ ತಾವೇ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

'ವೆಂಕ್ಯ' ಮೂಲಕ ನಟನೆಯೊಂದಿಗೆ ನಿರ್ದೇಶನದ ಹೊಣೆ ಹೊತ್ತ ಡೊಳ್ಳು ಖ್ಯಾತಿಯ ಸಾಗರ್ ಪುರಾಣಿಕ್
ಡೊಳ್ಳು ಚಿತ್ರದ ನಂತರ ಮತ್ತೊಂದು ಕುತೂಹಲಕಾರಿ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಪವನ್ ಒಡೆಯರ್ ಮತ್ತು ಸಾಗರ್ ಪುರಾಣಿಕ್ ಅವರು ಮಾರ್ಚ್ 15ರಂದು ಹುಬ್ಬಳ್ಳಿಯಲ್ಲಿ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಚಿತ್ರಕ್ಕೆ ವೆಂಕ್ಯ ಎಂಬ ಶೀರ್ಷಿಕೆಯನ್ನು ಇಡಲಾಗಿದ್ದು, ಚಿತ್ರವು ನಾಯಕನ ಜೀವನ ಪಯಣದ ಸುತ್ತ ಸುತ್ತುತ್ತದೆ.

ಮತ್ತೆ ಒಂದಾಗುತ್ತಿದೆ 'ಡೊಳ್ಳು' ಜೋಡಿ: ಪವನ್ ಒಡೆಯರ್ ಮತ್ತು ಸಾಗರ್ ಪುರಾಣಿಕ್ ಹೊಸ ಸಿನಿಮಾ!
ಗೂಗ್ಲಿ, ರಣ ವಿಕ್ರಮ ಮತ್ತು ನಟಸಾರ್ವಭೌಮ ಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕ ಪವನ್ ಒಡೆಯರ್, ನಿರ್ದೇಶಕ ಸಾಗರ್ ಪುರಾಣಿಕ್ ಅವರೊಂದಿಗೆ ಡೊಳ್ಳು ಚಿತ್ರದ ಮೂಲಕ ನಿರ್ಮಾಣಕ್ಕೆ ಪಾದಾರ್ಪಣೆ ಮಾಡಿದರು.

ಹೆಣ್ಣು ಮಗುವಿಗೆ ಜನ್ಮ ನೀಡಿದ ನಿರ್ದೇಶಕ ಪವನ್ ಒಡೆಯರ್ ಪತ್ನಿ ನಟಿ ಅಪೇಕ್ಷಾ ಪುರೋಹಿತ್
ನಿರ್ದೇಶಕ ಪವನ್ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್ ದಂಪತಿ ಬಾಳಲ್ಲಿ ಎರಡನೇ ಮಗುವಿನ ಆಗಮನವಾಗಿದೆ. ಅಪೇಕ್ಷಾ ಪುರೋಹಿತ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಕೊನೆಯ ಟೇಕ್ ತನಕ ನಾನು ವಿದ್ಯಾರ್ಥಿಯಾಗಿಯೇ ಉಳಿಯ ಬಯಸುತ್ತೇನೆ: ನಿರ್ದೇಶಕ ಪವನ್ ಒಡೆಯರ್
ಗೂಗ್ಲಿ, ರಣ ವಿಕ್ರಮ ಮತ್ತು ನಟಸಾರ್ವಭೌಮದಂತಹ ಹಿಟ್ ಸಿನಿಮಾಗಳ ನಿರ್ದೇಶಕ ಪವನ್ ಒಡೆಯರ್, ಬ್ರೇರ್ ನಂತರ ರೊಮ್ಯಾಂಟಿಕ್ ಮ್ಯೂಸಿಕಲ್ ಸಿನಿಮಾ ರೇಮೋ ಮೂಲಕ ನಿರ್ದೇಶನಕ್ಕೆ ಮರಳಿದ್ದಾರೆ. ಇಶಾನ್ ಮತ್ತು ಆಶಿಕಾ ರಂಗನಾಥ್ ಅಭಿನಯದ ಚಿತ್ರ ಈ ವಾರ ಬಿಡುಗಡೆಯಾಗಲಿದೆ.

ಪವನ್ ಒಡೆಯರ್ ನಿರ್ದೇಶನದ 'ರೆಮೋ' ಚಿತ್ರದ ಅತ್ಯುತ್ತಮ ವಿಚಾರವೆಂದರೆ ಸ್ಕ್ರಿಪ್ಟ್: ನಟಿ ಆಶಿಕಾ ರಂಗನಾಥ್
'ರೆಮೋ' ನಟಿ ಆಶಿಕಾ ರಂಗನಾಥ್ ಅವರ ಒಂಬತ್ತನೇ ಚಿತ್ರ. ಇದೇ ಮೊದಲ ಬಾರಿಗೆ ನಟ ಇಶಾನ್ ಮತ್ತು ನಿರ್ದೇಶಕ ಪವನ್ ಒಡೆಯರ್ ಅವರೊಂದಿಗೆ ಸಿನಿಮಾ ಮಾಡುತ್ತಿದ್ದಾರೆ ಆಶಿಕಾ.

