ಸಾಗರ್ ಪುರಾಣಿಕ್ ನಿರ್ದೇಶನದ 'ವೆಂಕ್ಯ' ಚಿತ್ರದ ಮೂಲಕ ರೂಪಾಲಿ ಸೂದ್ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ
ಸಾಗರ್ ಪುರಾಣಿಕ್ ನಿರ್ದೇಶನದ ವೆಂಕ್ಯ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ರೂಪಾಲಿ ಸೂದ್ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ಸಾಗರ್ ಪುರಾಣಿಕ್ ಅವರು ನಿರ್ದೇಶನದೊಂದಿಗೆ ತಾವೇ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಸಾಗರ್ ಪುರಾಣಿಕ್ ನಿರ್ದೇಶನದ ವೆಂಕ್ಯ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ರೂಪಾಲಿ ಸೂದ್ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ಸಾಗರ್ ಪುರಾಣಿಕ್ ಅವರು ನಿರ್ದೇಶನದೊಂದಿಗೆ ತಾವೇ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಶಿಮ್ಲಾದಲ್ಲಿ ಬೆಳೆದು ಅಬುಧಾಬಿ ಮತ್ತು ನೋಯ್ಡಾದಲ್ಲಿ ನೆಲೆಸಿರುವ ರೂಪಾಲಿ, ಕಾಲೇಜು ದಿನಗಳಿಂದಲೂ ಮಾಡೆಲಿಂಗ್ ಮಾಡುತ್ತಿದ್ದಾರೆ. ಅವರು ಹಾರ್ಡಿ ಸಂಧು ಅವರೊಂದಿಗಿನ ಹಿಟ್ ಹಾಡು 'ಹಾರ್ನ್ ಬ್ಲೋ' ಸೇರಿದಂತೆ ಹಲವಾರು ಹಾಡುಗಳ ಭಾಗವಾಗಿದ್ದಾರೆ. ಈ ಹಾಡನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.
'ನಾನು ಯಾವಾಗಲೂ ನಟಿಯಾಗಿರಲು ಬಯಸುತ್ತೇನೆ. ನಾನು ಐಟಿಯಲ್ಲಿ ಎಂಬಿಎ ಮಾಡಿದ್ದು, ಮಾರ್ಕೆಟಿಂಗ್, ಮಾಡೆಲಿಂಗ್ ಮತ್ತು ಮ್ಯೂಸಿಕ್ ವಿಡಿಯೋಗಳ ಅನುಭವದೊಂದಿಗೆ, ನಾನು ಸಿನಿಮಾ ಜಗತ್ತಿನಲ್ಲಿ ಹೊಸ ಪ್ರಯಾಣ ಆರಂಭಿಸಲು ಉತ್ಸುಕಳಾಗಿದ್ದೇನೆ. ಕನ್ನಡ ಚಿತ್ರದೊಂದಿಗೆ ದಕ್ಷಿಣ ಭಾರತದ ಸಿನಿಮಾರಂಗಕ್ಕೆ ಪ್ರವೇಶ ಪಡೆಯುತ್ತಿದ್ದೇನೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ಮಾಪಕ-ನಿರ್ದೇಶಕ ಜೋಡಿಯಾದ ಪವನ್ ಒಡೆಯರ್ ಮತ್ತು ಸಾಗರ್ ಪುರಾಣಿಕ್ ಅವರೊಂದಿಗೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ' ಎನ್ನುತ್ತಾರೆ ರೂಪಾಲಿ ಸೂದ್.

ಈಗಾಗಲೇ ಚಿತ್ರದ ಕೆಲವು ಭಾಗಗಳ ಚಿತ್ರೀಕರಣ ಪೂರ್ಣಗೊಳಿಸಿರುವ ರೂಪಾಲಿಯ ಫಸ್ಟ್ ಲುಕ್ ಅನ್ನು ಸಹ ಚಿತ್ರತಂಡ ಬಿಡುಗಡೆ ಮಾಡಿದೆ.
'ಚಿತ್ರದಲ್ಲಿ ನಾನು ಹಿಮಾಚಲದ ಪಹಾಡಿ ಯುವತಿಯಾಗಿ ನಟಿಸಿದ್ದೇನೆ. ನಾವು ಇತ್ತೀಚೆಗಷ್ಟೇ ಮನಾಲಿಯ ಮುಂದಿರುವ ಕೈಲಾಂಗ್‌ನಲ್ಲಿ ಪರ್ವತಗಳ ನಡುವೆ ಸುಂದರವಾದ ಸ್ಥಳದಲ್ಲಿ ಚಿತ್ರದ ಕೆಲವು ಭಾಗಗಳ ಚಿತ್ರೀಕರಣ ಮಾಡಿದ್ದೇವೆ. ಇದು ನನ್ನ ಸಿನಿಮಾ ವೃತ್ತಿಜೀವನಕ್ಕೆ ಅದ್ಭುತ ಆರಂಭ' ಎಂದು ಅವರು ಹಂಚಿಕೊಂಡಿದ್ದಾರೆ.
ವೆಂಕ್ಯ ಸಿನಿಮಾವನ್ನು ಅವಿನಾಶ್ ವಿ ರೈ ಮತ್ತು ಮೋಹನ್ ಲಾಲ್ ಮೆನನ್ ಜೊತೆಗೆ ಒಡೆಯರ್ ಫಿಲ್ಮ್ಸ್ ನಿರ್ಮಿಸಿದ್ದು, ಇದು ಸಾರ್ವತ್ರಿಕ ಥೀಮ್‌ನೊಂದಿಗೆ ಉತ್ತರ ಕರ್ನಾಟಕವನ್ನು ಆಧರಿಸಿದ ಕಥೆಯಾಗಿದೆ. ಶ್ರೀನಿಧಿ ಡಿಎಸ್ ಅವರು ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ. ಚಿತ್ರಕ್ಕೆ ಪ್ರಣವ್ ಮುಲೆ ಅವರ ಛಾಯಾಗ್ರಹಣ ಮತ್ತು ಹೇಮಂತ್ ಜೋಯಿಸ್ ಅವರ ಸಂಗೀತವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



