ಡಿಸೆಂಬರ್ ಹೊತ್ತಿಗೆ 'ಲವ್ ಮಾಕ್ ಟೇಲ್ 2' ಚಿತ್ರದ ಶೂಟಿಂಗ್ ಮುಗಿಸುವ ಗುರಿಯಿದೆ: ಡಾರ್ಲಿಂಗ್ ಕೃಷ್ಣ
ಲವ್ ಮಾಕ್ ಟೇಲ್ ಚಿತ್ರದ ಯಶಸ್ಸಿನ ನಂತರ ಅದರ ಸರಣಿಯನ್ನು ತಯಾರಿಸುತ್ತಿರುವ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಮೊದಲ ದೃಶ್ಯದ ನೋಟವನ್ನು ಬಹಿರಂಗಪಡಿಸಿದ್ದಾರೆ. ಗಡ್ಡದ ಲುಕ್ ನಲ್ಲಿ ಆದಿತ್ಯ ಪಾತ್ರದ ಪೋಸ್ಟರ್ ಇದ್ದು ಅದರಲ್ಲಿ ನಾಯಕ ನಟ ಸಂಪೂರ್ಣ ಭಾವಪರವಶರಾಗಿದ್ದಾರೆ.

ಲವ್ ಮಾಕ್ ಟೇಲ್ ಚಿತ್ರದ ಯಶಸ್ಸಿನ ನಂತರ ಅದರ ಸರಣಿಯನ್ನು ತಯಾರಿಸುತ್ತಿರುವ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಮೊದಲ ದೃಶ್ಯದ ನೋಟವನ್ನು ಬಹಿರಂಗಪಡಿಸಿದ್ದಾರೆ. ಗಡ್ಡದ ಲುಕ್ ನಲ್ಲಿ ಆದಿತ್ಯ ಪಾತ್ರದ ಪೋಸ್ಟರ್ ಇದ್ದು ಅದರಲ್ಲಿ ನಾಯಕ ನಟ ಸಂಪೂರ್ಣ ಭಾವಪರವಶರಾಗಿದ್ದಾರೆ.
ಲವ್ ಮಾಕ್ ಟೇಲ್ 2 ಚಿತ್ರದ ಶೂಟಿಂಗ್ ಸದ್ದಿಲ್ಲದೆ ಲಾಕ್ ಡೌನ್ ಸಡಿಲಿಕೆಯಾದ ನಂತರ ಆರಂಭವಾಗಿದ್ದು ಮೊದಲ ಶೆಡ್ಯೂಲ್ ಕೂಡ ಮುಗಿದಿದೆ. ಗಡ್ಡದ ಲುಕ್ ನ ಶೂಟಿಂಗ್ ಮುಗಿದಿದೆ. ಇದೀಗ ಮತ್ತೆ ಕ್ಲೀನ್ ಶೇವ್ ಮಾಡಿದ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಬೆಂಗಳೂರಿನಲ್ಲಿ ಮೊದಲ ಶೆಡ್ಯೂಲ್ ಮುಗಿದಿದೆ. ಡಿಸೆಂಬರ್ ಹೊತ್ತಿಗೆ ಶೂಟಿಂಗ್ ಮುಗಿದರೆ ಮುಂದಿನ ವರ್ಷದ ಆರಂಭದಲ್ಲಿ ಚಿತ್ರವನ್ನು ತೆರೆಗೆ ತರುವ ಉದ್ದೇಶ ಹೊಂದಿದ್ದೇನೆ ಎನ್ನುತ್ತಾರೆ ಡಾರ್ಲಿಂಗ್ ಕೃಷ್ಣ.
ಲವ್ ಮಾಕ್ ಟೇಲ್ ನಂತೆ ಸರಣಿಯಲ್ಲಿ ತೀವ್ರ ಭಾವಸನ್ನಿವೇಶವಿರುವುದಿಲ್ಲ, ಬದಲಿಗೆ ಹೆಚ್ಚು ಹಾಸ್ಯಕ್ಕೆ ಒತ್ತು ನೀಡಲಾಗಿದೆ ಎಂದರು.
ಚಿತ್ರತಂಡ ಇನ್ನೂ ಲವ್ ಮಾಕ್ ಟೇಲ್ 2ನಲ್ಲಿ ಯಾರೆಲ್ಲಾ ಕಲಾವಿದರಿದ್ದಾರೆ ಎಂದು ಬಹಿರಂಗಪಡಿಸಿಲ್ಲ.ಸರಣಿ ಚಿತ್ರಕ್ಕೆ ಸಹ ರಘು ದೀಕ್ಷಿತ್ ಸಂಗೀತ, ಕ್ರೇಜಿ ಮೈಂಡ್ಸ್ ಅವರ ಛಾಯಾಗ್ರಹಣವಿರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


