ಸಿನಿಮಾ ಸುದ್ದಿ

'ತಿಥಿ' ಈರೇಗೌಡ ವಿರುದ್ಧ #MeToo ಆರೋಪ, ಯುವತಿ ಬೆಂಬಲಕ್ಕೆ ನಿಂತ ಶೃತಿ ಹರಿಹರನ್!

'ತಿಥಿ' ಚಿತ್ರ ಖ್ಯಾತಿಯ ಬರಹಗಾರ ಈರೇಗೌಡ ವಿರುದ್ಧ ಕೇಳಿಬಂದಿರುವ ಗಂಭೀರ #MeToo ಆರೋಪಕ್ಕೆ ಸಂಬಂಧಿಸಿದಂತೆ ನಟಿ ಶೃತಿ ಹರಿಹರನ್ ಪ್ರತಿಕ್ರಿಯೆ ನೀಡಿದ್ದು, ಯುವತಿ ಪರವಾಗಿ ನಾವಿದ್ದೇವೆ ಎಂದು ಹೇಳಿದ್ದಾರೆ.

'ತಿಥಿ' ಈರೇಗೌಡ ವಿರುದ್ಧ #MeToo ಆರೋಪ, ಯುವತಿ ಬೆಂಬಲಕ್ಕೆ ನಿಂತ ಶೃತಿ ಹರಿಹರನ್!
ಸಂಗ್ರಹ ಚಿತ್ರ
Published On :
ಬೆಂಗಳೂರು: 'ತಿಥಿ' ಚಿತ್ರ ಖ್ಯಾತಿಯ ಬರಹಗಾರ ಈರೇಗೌಡ ವಿರುದ್ಧ ಕೇಳಿಬಂದಿರುವ ಗಂಭೀರ #MeToo ಆರೋಪಕ್ಕೆ ಸಂಬಂಧಿಸಿದಂತೆ ನಟಿ ಶೃತಿ ಹರಿಹರನ್ ಪ್ರತಿಕ್ರಿಯೆ ನೀಡಿದ್ದು, ಯುವತಿ ಪರವಾಗಿ ನಾವಿದ್ದೇವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್  ಹಾಕಿರುವ ನಟಿ ಶೃತಿ ಹರಿಹರನ್, ತಿಥಿ ಈರೇಗೌಡ ನಿನ್ನ ಸಮಯ ಬಂದಿದ್ದು, ಏಕ್ತಾ ಬೆಂಬಲಕ್ಕೆ ನಾವಿದ್ದೇವೆ. ಯಾವುದೇ ಪುರುಷನಾಗಲಿ ಮಹಿಳೆಯೊಂದಿಗೆ ಈ ರೀತಿ ವರ್ತಿಸಬಾರದು ಎಂದು ನಟಿ ಶೃತಿ ಹರಿಹರನ್ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಮೀಟೂ ಆರೋಪ ಮಾಡಿ ಪೋಸ್ಚ್ ಹಾಕಿದ್ದ ಏಕ್ತಾ ಅವರ ಫೇಸ್ ಬುಕ್ ಪೋಸ್ಟ್ ಅನ್ನು ನಟಿ ಶೃತಿ ತಮ್ಮ ಫೇಸ್ ಬುಕ್ ಟೈಮ್ ಲೈನ್ ನಲ್ಲಿ ಶೇರ್ ಮಾಡಿದ್ದಾರೆ.
ಅಲ್ಲದೆ ಏಕ್ತಾ ಬೆಂಬಲಕ್ಕೆ ಇನ್ನೂ ಮತ್ತಷ್ಟು ಮಂದಿ ಧಾವಿಸಲಿದ್ದಾರೆ ಎಂದು ಯುವತಿ ಏಕ್ತಾಗೆ ಧೈರ್ಯ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.