ಧೈರ್ಯ ಇಲ್ಲ ಅಂದ್ರೆ ಮನೇಲಿ ಕುಳಿತುಕೊಳ್ಳಿ, #ಮೀಟೂ ಬಂದ ಮೇಲೆ ನಿಮಗೆಲ್ಲಾ ರೆಕ್ಕೆ ಪುಕ್ಕ ಬಂತಾ: ನಟ ರಾಜೇಶ್ ಆಕ್ರೋಶ
ನಟ ಹಾಗೂ ತಮ್ಮ ಅಳಿಯ ಅರ್ಜುನ್ ಸರ್ಜಾ ಅವರ ಬೆಂಬಲಕ್ಕೆ ಮತ್ತೊಮ್ಮೆ ಹಿರಿಯ ನಟ ರಾಜೇಶ್ ನಿಂತಿದ್ದು, ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿದ್ದ ಗೃಹಿಣಿಯ ವಿರುದ್ಧ ಕಿಡಿಕಾರಿದ್ದಾರೆ.

Published On :
ಬೆಂಗಳೂರು: ನಟ ಹಾಗೂ ತಮ್ಮ ಅಳಿಯ ಅರ್ಜುನ್ ಸರ್ಜಾ ಅವರ ಬೆಂಬಲಕ್ಕೆ ಮತ್ತೊಮ್ಮೆ ಹಿರಿಯ ನಟ ರಾಜೇಶ್ ನಿಂತಿದ್ದು, ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿದ್ದ ಗೃಹಿಣಿಯ ವಿರುದ್ಧ ಕಿಡಿಕಾರಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿದ್ದ ಮಹಿಳೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ನಟ ರಾಜೇಶ್, 15 ವರ್ಷ ಈ ಘಟನೆ ನಡೆದಿದೆ. ಆಗ ಪೊಲೀಸರಿಗೆ, ಕಲಾವಿದರ ಸಂಘದವರಿಗೆ ಮತ್ತು ಚೇಂಬರಿಗೆ ದೂರು ಕೊಡಬಹುದಿತ್ತು. ಆಗ ಯಾಕೆ ದೂರು ಕೊಟ್ಟಿಲ್ಲ ಎಂದು ಪ್ರಶ್ನೆ ಕೇಳಿದ್ದಾರೆ.
'ಶೂಟಿಂಗ್ ನಲ್ಲಿ ನಿರ್ದೇಶಕರು, ನಿರ್ಮಾಪಕರು ಇರುತ್ತಾರೆ. ಅವರ ಬಳಿ ಹೋಗಿ ನನ್ನ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ದೂರ ಕೊಡಬೇಕಿತ್ತು ಎಂದರು. ಈ ವೇಳೆ ಗೃಹಿಣಿ ಆಗ ನನಗೆ ಧೈರ್ಯ ಇರಲಿಲ್ಲ ಎಂದು ಹೇಳಿದರು. ಈ ವೇಳೆ ಗೃಹಿಣಿ ವಿರುದ್ಧ ಗರಂ ಆದ ರಾಜೇಶ್ ಅವರು ಧೈರ್ಯ ಇಲ್ಲ ಎಂದ ಮೇಲೆ ಚಿತ್ರರಂಗಕ್ಕೆ ಯಾಕೆ ಬಂದ್ರಿ, ಮನೆಯಲ್ಲಿ ಇರಬೇಕು. #ಮೀಟೂ ಬಂದ ಮೇಲೆ ನಿಮಗೆಲ್ಲಾ ರೆಕ್ಕೆ ಪುಕ್ಕ ಬಂತಾ. ಇದಕ್ಕೆ ಮುಂಚೆ ಎಲ್ಲಿ ಹೋಗಿತ್ತು ನಿಮ್ಮ ರೆಕ್ಕೆ ಪುಕ್ಕ. #ಮೀಟೂ ಬಂದು ಅವಕಾಶ ಕಲ್ಪಿಸಿಕೊಟ್ಟಿದೆ. ಇದಕ್ಕೆ ಮುಂಚೆ ಎಲ್ಲಿ ಹೋಗಿತ್ತು ಎಂದು ಗೃಹಿಯ ವಿರುದ್ಧ ಗುಡುಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruarjun sarjaಅರ್ಜುನ್ ಸರ್ಜಾSandalwoodಸ್ಯಾಂಡಲ್ ವುಡ್Sruthi Hariharanಶೃತಿ ಹರಿಹರನ್ಮೀಟೂ ಅಭಿಯಾನMeToo CampaighnActor Rajeshನಟ ರಾಜೇಶ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


