ಸಿನಿಮಾ ಸುದ್ದಿ

'ಕೆಜಿಎಫ್' ಕೇವಲ ಕನಸಲ್ಲ, ಹಠ, ಸ್ವಾಭಿಮಾನ: ಮೇಕಿಂಗ್ ನಲ್ಲಿ ರಾಕಿಂಗ್ ಸ್ಟಾರ್ ಮನದಾಳ

ಕೆಜಿಎಫ್ ಚಿತ್ರ ಕೇವಲ ನಮ್ಮ ಕನಸಲ್ಲ.. ಅದು ನಮ್ಮ ಹಠ ಮತ್ತು ಕನ್ನಡದ ಸ್ವಾಭಿಮಾನ... ಕನ್ನಡ ಚಿತ್ರರಂಗ ಎಂದರೆ ನಕಾರಾತ್ಮಕವಾಗಿ ಮಾತನಾಡುತ್ತಿದ್ದರು, ಆದರೆ ಈಗ ಕಾಲ ಬದಲಾಗಿದೆ, ನಮ್ಮ ತಾಕತ್ತಿನ ಪರಿಚಯವಾಗಿದೆ ಎಂದು ನಟ ಯಶ್ ಹೇಳಿದ್ದಾರೆ.

'ಕೆಜಿಎಫ್' ಕೇವಲ ಕನಸಲ್ಲ, ಹಠ, ಸ್ವಾಭಿಮಾನ: ಮೇಕಿಂಗ್ ನಲ್ಲಿ ರಾಕಿಂಗ್ ಸ್ಟಾರ್ ಮನದಾಳ
ನಟ ಯಶ್
Published On :
ಬೆಂಗಳೂರು: ಕೆಜಿಎಫ್ ಚಿತ್ರ ಕೇವಲ ನಮ್ಮ ಕನಸಲ್ಲ.. ಅದು ನಮ್ಮ ಹಠ ಮತ್ತು ಕನ್ನಡದ ಸ್ವಾಭಿಮಾನ... ಕನ್ನಡ ಚಿತ್ರರಂಗ ಎಂದರೆ ನಕಾರಾತ್ಮಕವಾಗಿ ಮಾತನಾಡುತ್ತಿದ್ದರು, ಆದರೆ ಈಗ ಕಾಲ ಬದಲಾಗಿದೆ, ನಮ್ಮ ತಾಕತ್ತಿನ ಪರಿಚಯವಾಗಿದೆ ಎಂದು ನಟ ಯಶ್ ಹೇಳಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ವಿಶ್ವಾದ್ಯಂತ ಬಿಡುಗಡೆಯಾಗಿದ್ದು, ಚಿತ್ರಕ್ಕೆ ಅಭಿಮಾನಿಗಳಿಂದ ಅಭೂತಪೂರ್ವ ಸ್ವಾಗತ ದೊರೆತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರ ಬಿಡುಗಡೆಯಾಗಿದ್ದು, ವಿಶ್ವಾದ್ಯಂತ ಸುಮಾರು 2 ಸಾವಿರ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಒಂದು ವರದಿಯ ಅನ್ವಯ ಮುಂದಿನ 4 ದಿನಗಳ ಕಾಲ ಚಿತ್ರ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದ್ದು, ಕೆಜಿಎಫ್ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುವ ಲಕ್ಷಣಗಳು ಗೋಚರಿಸುತ್ತಿದೆ.
ಇನ್ನು ಚಿತ್ರಕ್ಕೆ ಸಂಬಂಧಿಸಿದಂತೆ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿದ್ದು, ನಟ ಯಶ್ ಇಲ್ಲಿ ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, 'ಕೆಜಿಎಫ್ ಕೇವಲ ನಮ್ಮ ಕನಸಲ್ಲ. ಅದು ನಮ್ಮ ಹಠ ಮತ್ತು ಕನ್ನಡದ ಸ್ವಾಭಿಮಾನ.. ಕನ್ನಡ ಚಿತ್ರರಂಗ ಎಂದರೆ ನಕಾರಾತ್ಮಕವಾಗಿ ಮಾತನಾಡುತ್ತಿದ್ದರು, ಆದರೆ ಈಗ ಕಾಲ ಬದಲಾಗಿದೆ, ನಮ್ಮ ತಾಕತ್ತಿನ ಪರಿಚಯವಾಗಿದೆ ಎಂದು ಹೇಳಿದ್ದಾರೆ.
'ಕೆಜಿಎಫ್ ಚಿತ್ರೀಕರಣ ಅಷ್ಟು ಸುಲಭವಾಗಿರಲಿಲ್ಲ.. ಚಿತ್ರಕ್ಕೆ ಬಳಸಲಾಗಿರುವ ಚಿತ್ರೀಕರಣಗ ತಾಣ ಕೆಜಿಎಫ್ ನದ್ದು. ಅದಕ್ಕೆ ಹೆಸರೇ ಸೈನೈಡ್ ಹಿಲ್ ಎಂದು.. ಕೆಜಿಎಫ್ ಮೈನಿಂಗ್ ನಿಂದ ತಂದು ಸುರಿಯಲಾದ ತ್ಯಾಜ್ಯಗಳೇ ಬೆಟ್ಟವಾಗಿ ಮಾರ್ಪಟ್ಟಿದೆ. ಈ ಸೈನೈಡ್ ಹಿಲ್ ನಲ್ಲಿ ಚಿತ್ರೀಕರಣದ ಸೆಟ್ ನಿರ್ಮಿಸಲು ಮತ್ತು ಚಿತ್ರೀಕರಣಕ್ಕಾಗಿ ನಾವು ಹರ ಸಾಹಸ ಪಟ್ಟಿದ್ದೇವೆ. ಇಲ್ಲಿ ಗಾಳಿ ಬಂದರೆ ಸಾಮಾನ್ಯ ಗಾಳಿ ಬರುವುದಿಲ್ಲ. ಸುಂಟರಗಾಳಿ ರೀತಿಯಲ್ಲಿ ಬರುವ ಗಾಳಿ ತನ್ನೊಂದಿಗೆ ಭಾರಿ ಪ್ರಮಾಣದ ಧೂಳನ್ನು ತರುತ್ತಿತ್ತು. 
ಇದರಿಂದ ಚಿತ್ರಕರಣದ ವೇಳೆ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ. ಇಲ್ಲಿನ ಬೆಟ್ಟದ ಅಡಿಪಾಯದ ಮಣ್ಣು ಸಡಿಲವಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು. ಹೀಗಾಗಿ ಪ್ರಾಣ ಭಯದಿಂದಲೇ ಚಿತ್ರೀಕರಣ ಆರಂಭಿಸಿದ್ದೆವು. ಚಿತ್ರೀಕರಣಕ್ಕಾಗಿ ಹಾಕಲಾಗಿದ್ದೆ ಸೆಟ್ ಗಳು ಮಳೆ ಬಂದಾಗ ಮತ್ತು ಗಾಳಿ ಬಂದಾಗ ಹಾರಿ ಹೋಗುತ್ತಿತ್ತು. ಅದೃಷ್ಟವಶಾತ್ ಇಲ್ಲಿ ಸಾವು-ನೋವು ಸಂಭವಿಸಿಲ್ಲ. ಹಾಳಾದ ಸೆಟ್ ಗಳನ್ನು ಮತ್ತೆ ಮತ್ತೆ ರಿಪೇರಿ ಮಾಡಿ ಚಿತ್ರೀಕರಣ ಮಾಡುತ್ತಿದ್ದೆವು ಎಂದು ತಮ್ಮ ಚಿತ್ರೀಕರಣದಲ್ಲಾದ ರೋಚಕ ಘಟನೆಗಳನ್ನು ಯಶ್ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.