ಕರ್ನಾಟಕ

ಸರ್ಕಾರದ ಬೊಕ್ಕಸಕ್ಕೆ ಕಿಕ್ ಕೊಟ್ಟ ಮದ್ಯ ಪ್ರಿಯರು: ಮಾರಾಟ ಶೇ.41ರಷ್ಟು ಹೆಚ್ಚಳ, ಅಬಕಾರಿ ಆದಾಯ ಭಾರೀ ಏರಿಕೆ..!
ಒಟ್ಟಾರೆ ಅಬಕಾರಿ ಆದಾಯ ಸಂಗ್ರಹದಲ್ಲೂ ಶೇ.13.39ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ರೂ.19,570.23 ಕೋಟಿ ಆದಾಯ ಸಂಗ್ರಹವಾಗಿದ್ದರೆ, ಈ ವರ್ಷ ಇದೇ ಅವಧಿಯಲ್ಲಿ ರೂ.22,191.63 ಕೋಟಿ ಸಂಗ್ರಹವಾಗಿದೆ.

ರಾಜ್ಯದಲ್ಲಿ ಮಳೆ ಮತ್ತೆ ಚುರುಕು: ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ 7 ದಿನಗಳ ಕಾಲ ಮಳೆ ಸಾಧ್ಯತೆ..!
ಕರಾವಳಿ ಕರ್ನಾಟಕದಲ್ಲಿ ಮಂಗಳವಾರ ಹಲವು ಕಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಬುಧವಾರದಿಂದ ಶನಿವಾರದವರೆಗೆ ಕೆಲವೆಡೆ ಮಳೆಯಾಗಬಹುದು.

ಕ್ರೀಡಾ ಸಾಧಕರಿಗೆ ಸಿಹಿ ಸುದ್ದಿ; ಸರ್ಕಾರಿ ಉದ್ಯೋಗದಲ್ಲಿ ಕ್ರೀಡಾಪಟುಗಳಿಗೆ ಶೇ. 2ರಷ್ಟು ಮೀಸಲಾತಿ: ಪರಮೇಶ್ವರ್
ಕರ್ನಾಟಕದ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ರಾಜ್ಯದ ಕೀರ್ತಿಯನ್ನು ನಿರಂತರವಾಗಿ ಹೆಚ್ಚಿಸುತ್ತಿದ್ದಾರೆ. ಅವರ ಪ್ರತಿಭೆಯನ್ನು ಗುರುತಿಸಿ, ಸಾಧನೆಗೆ ಪ್ರೋತ್ಸಾಹ ನೀಡುವುದು ಹಾಗೂ ಕ್ರೀಡಾ ಬದುಕಿನ ನಂತರವೂ...

ರಾಜ್ಯದ 177 ಬರಪೀಡಿತ ತಾಲೂಕುಗಳಲ್ಲಿ ಬರದಿಂದ 46,000 ಕೋಟಿ ರೂ ನಷ್ಟ, GST ಸಂಗ್ರಹ ಮೇಲೆ ಪರಿಣಾಮ: DCM ಡಾ ಪರಮೇಶ್ವರ್; Video
ಕರ್ನಾಟಕ ಹಿಂದೆಂದೂ ಕಂಡಿರದಂತಹ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇದರ ಪರಿಣಾಮ ಜಿಎಸ್‌ಟಿ ಸಂಗ್ರಹ ಸೇರಿದಂತೆ ಎಲ್ಲ ಕ್ಷೇತ್ರಗಳ ಮೇಲೂ ಖಂಡಿತವಾಗಿಯೂ ಕಂಡುಬರಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ: ರಿಸರ್ವ್ ಸ್ಪರ್ಧಿಯಾಗಿದ್ದ ನನಗೆ ಓಡಲು ಅವಕಾಶ ಸಿಕ್ಕಿದ್ದೇ ರೋಚಕ- ಕನ್ನಡತಿ ಸ್ನೇಹಾ ಗೌಡ!
ಏಷ್ಯನ್ ಗೇಮ್ಸ್‌ನ ಮಿಶ್ರ 4x100 ಮೀಟರ್ ರಿಲೇಯಲ್ಲಿ ಕೊಪ್ಪದ ಸ್ನೇಹಾ ಸತ್ಯನಾರಾಯಣ ಶಾನುವಳ್ಳಿ ಗೌಡ ತಂಡ 3ನೇ ಸ್ಥಾನ ಗಳಿಸುವ ಮೂಲಕ ಕಂಚಿನ ಪದಕಕ್ಕೆ ಮುತ್ತಿಟ್ಟರು. ಇನ್ನು ಸ್ನೇಹಾ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯಾಗಿದ್ದಾಗಿನಿಂದಲೇ ತಮ್ಮ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕುತ್ತಾ ಬಂದಿದ್ದಾರೆ.

ಬರ ಪರಿಹಾರ ಸಾಕಾಗದು, ಪ್ರತಿ ಎಕರೆಗೆ 50 ಸಾವಿರ ರೂ ನೀಡಿ: ಸರ್ಕಾರಕ್ಕೆ ಬಿ.ವೈ ವಿಜಯೇಂದ್ರ ಆಗ್ರಹ
ಸರ್ಕಾರ ಪ್ರತಿ ಹೆಕ್ಟೇರ್‌ಗೆ ಕೇವಲ ರೂ.2,500 ಇನ್‌ಪುಟ್ ಸಬ್ಸಿಡಿ ರೂಪದಲ್ಲಿ ಪರಿಹಾರ ಘೋಷಿಸಿದೆ. ಇದು ರೈತರಿಗೆ ಯಾವುದೇ ರೀತಿಯಲ್ಲೂ ಸಾಕಾಗುವುದಿಲ್ಲ. ಬರದಿಂದ ಬಾಧಿತ ರೈತರಿಗೆ ಪ್ರತಿ ಎಕರೆಗೆ ರೂ.50 ಸಾವಿರ ಪರಿಹಾರ ನೀಡಬೇಕು.

'ಹಿಂದೂಗಳಲ್ಲ, ಮುಸ್ಲಿಮರೇ ಕಳ್ಳ ವೋಟು ಹಾಕೋದು': ಬಸನಗೌಡ ಪಾಟೀಲ್ ಯತ್ನಾಳ್ ಹೊಸಬಾಂಬ್; Video
ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮತದಾರರ ಪಟ್ಟಿಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂಬ ಆರೋಪಗಳ ಕುರಿತು ಮಾತನಾಡಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, 'ನಕಲಿ ಮತದಾನದ ವಿಚಾರದಲ್ಲಿ ಹಿಂದೂ..

ರೋಮ್ ಹೊತ್ತಿ ಉರಿಯುವಾಗ ಪಿಟೀಲು ಬಾರಿಸಿದಂತಿದೆ; 'ಬೆಂಗಳೂರು ಜಾತ್ರೆ' ಯಾರು ಕೇಳಿದ್ರು ಸ್ವಾಮಿ..?
ಬರಗೆಟ್ಟ ಆಡಳಿತ ನಡೆಸುತ್ತಿರುವ ಸರ್ಕಾರ, ಟೀಕೆಗೆ ಗುರಿಯಾಗಿರುವ ತನ್ನ ನೂರು ದಿನಗಳ ಕಾರ್ಯಕ್ಕೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿದೆ. ಇದೀಗ ಬೆಂಗಳೂರು ಜಾತ್ರೆ ಹೆಸರಿನಲ್ಲಿ ಕೋಟಿ ಕೋಟಿ ಹಣ ಖರ್ಚು ಮಾಡಲು ಹೊರಟಿದೆ.

ಪ್ರವಾಸಿಗರಿಗೆ ಗುಣಮಟ್ಟದ ಆಹಾರ ಒದಗಿಸಲು KSTDC ಮಾಸ್ಟರ್‌ಪ್ಲಾನ್: ನವೆಂಬರ್‌ನಿಂದ 'ಮಯೂರ ರುಚಿ ಆನ್ ವೀಲ್ಸ್' ಸೇವೆ ಆರಂಭ..!
ಲೈವ್ ಕಿಚನ್ ಹೊಂದಿರುವ, ವಿಶೇಷವಾಗಿ ವಿನ್ಯಾಸಗೊಳಿಸಲಾದ ವಾಹನಗಳನ್ನು ನಿರ್ವಹಿಸಲು ಈ ಕ್ಷೇತ್ರದಲ್ಲಿ ಉತ್ತಮ ಅನುಭವ ಹೊಂದಿರುವವರನ್ನು ಆಯ್ಕೆ ಮಾಡಲಾಗುತ್ತದೆ. ಆಹಾರ ವ್ಯರ್ಥವಾಗದಂತೆ ನೋಡಿಕೊಳ್ಳುವುದರ ಜತೆಗೆ ತ್ವರಿತ ಸೇವೆ ನೀಡುವುದು ಉದ್ದೇಶ.

