ಟೀಬಾಕ್ಸ್ ನಲ್ಲಿ ಟಾಟಾ ಹೂಡಿಕೆ
ದೇಶದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿರುವ ರತನ್ ಟಾಟಾ ಚಹಾ ಕಂಪನಿ ಟೀಬಾಕ್ಸ್ ನಲ್ಲಿ ಬಂಡವಾಳ ತೊಡಗಿಸಿದ್ದಾರೆ. ಇದರೊಂದಿಗೆ ಸ್ಟಾರ್ಟ್ ಅಪ್ ಗಳಲ್ಲಿ ಬಂಡವಾಳ ತೊಡಗಿಸುವುದನ್ನು ಅವರು ಮುಂದುವರೆಸಿದ್ದಾರೆ...

ನವದೆಹಲಿ: ದೇಶದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿರುವ ರತನ್ ಟಾಟಾ ಚಹಾ ಕಂಪನಿ ಟೀಬಾಕ್ಸ್ ನಲ್ಲಿ ಬಂಡವಾಳ ತೊಡಗಿಸಿದ್ದಾರೆ. ಇದರೊಂದಿಗೆ ಸ್ಟಾರ್ಟ್ ಅಪ್ ಗಳಲ್ಲಿ ಬಂಡವಾಳ ತೊಡಗಿಸುವುದನ್ನು ಅವರು ಮುಂದುವರೆಸಿದ್ದಾರೆ. ಹಾಗಿದ್ದರೂ ಎಷ್ಟು ಬಂಡವಾಳ ತೊಡಗಿಸಲಾಗಿದೆ ಎಂಬುದು ಬಹಿರಂಗಗೊಂಡಿಲ್ಲ.
ರತನ್ ಟಾಟಾ ಅವರಿಂದ ಬಂಡವಾಳವನ್ನು ಪಡೆಯಲಾಗಿದೆ. ಇದರಿಂದ ಪ್ರಗತಿಯಲ್ಲಿ ಸಾಗಿರುವ ಕಂಪನಿಯ ವಹಿವಾಟನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುವುದು ಎಂದು ಕಂಪನಿ ಸಿ/ಇಒ ಕೌಶಲ್ ದುಗಾರ್ ತಿಳಿಸಿದ್ದಾರೆ. ಟಾಟಾ ಅವರ ಮಾರ್ಗದರ್ಶನ, ಚಹಾ ಉದ್ಯಮದಲ್ಲಿ ಅವರು ಹೊಂದಿರುವ ಅನುಭವ ಕಂಪನಿ ಮತ್ತಷ್ಟು ಅಭಿವೃದ್ಧಿಗೆ ಖಂಡಿತ ನೆರವಿಗೆ ಬರಲಿದೆ ಎಂದಿದ್ದಾರೆ. ಟಾಟಾ ಗ್ರೂಪ್ ನ ಚೇರ್ಮನ್ ಆಗಿರುವ ರತನ್ ಟಾಟಾ ಸ್ಟಾರ್ಟ್ ಅಪ್ ಗಳಲ್ಲಿ ಹೆಚ್ಚಿನ ಬಂಡವಾಳ ತೊಡಗಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


