ರಷ್ಯಾದಿಂದ ಕಚ್ಚಾ ತೈಲ ಆಮದು: ಭಾರತ ಸೇರಿ ಇತರ ದೇಶಗಳ ಮೇಲೆ ಶೇ.100ರಷ್ಟು ಸುಂಕ; ಅಮೆರಿಕ ಸಂಸತ್ತಿನಲ್ಲಿ ಮಸೂದೆ
ರಷ್ಯಾ ಮೇಲಿನ ನಿರ್ಬಂಧಗಳ ಮಸೂದೆ ಸೇರಿದಂತೆ ಹಲವು ಶಾಸನಗಳಿಗೆ ಮುಂದಿನ ಹಂತಕ್ಕೆ ಕೊಂಡೊಯ್ಯಲು 214-211 ಮತಗಳ ಅಂತರದಲ್ಲಿ ಅನುಮೋದನೆ ದೊರೆಯಿತು. ಈ ಫಲಿತಾಂಶವು ಹೌಸ್‌ನ ಡೆಮಾಕ್ರಟಿಕ್ ನಾಯಕತ್ವಕ್ಕೆ ಅಚ್ಚರಿ ಮೂಡಿಸಿದೆ.

ರಷ್ಯಾದಿಂದ ತೈಲ ಮತ್ತು ಅನಿಲ ಖರೀದಿಸುವ ಭಾರತ ಸೇರಿದಂತೆ ಇತರ ದೇಶಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಧಿಕಾರ ನೀಡುವ ಹಾಗೂ ಇರಾನ್ ಮೇಲಿನ ಅಸ್ತಿತ್ವದಲ್ಲಿರುವ ನಿರ್ಬಂಧಗಳನ್ನು ವಿಸ್ತರಿಸುವ ಮಸೂದೆಗೆ ಅಮೆರಿಕದ ಪ್ರತಿನಿಧಿಗಳ ಸಭೆ (House of Representatives) ಮುನ್ನಡೆ ನೀಡಿದೆ.
‘ಲಿಂಡ್ಸೆ ಓ. ಗ್ರಹಾಂ ಸ್ಯಾಂಕ್ಷನಿಂಗ್ ರಷ್ಯಾ ಆ್ಯಂಡ್ ಇರಾನ್ ಆ್ಯಕ್ಟ್ ಆಫ್ 2026’ ಮಸೂದೆ ನಿನ್ನೆ ಮಂಗಳವಾರ ಸಾಯಂಕಾಲ ಪ್ರತಿನಿಧಿಗಳ ಸಭೆಯಲ್ಲಿ ಕಾರ್ಯವಿಧಾನ ಹಂತವನ್ನು ದಾಟಿ ಇಬ್ಬರು ಡೆಮಾಕ್ರಟಿಕ್ ಪಕ್ಷದ ಸಂಸದರು ಪಕ್ಷದ ನಿಲುವಿಗೆ ವಿರುದ್ಧವಾಗಿ ರಿಪಬ್ಲಿಕನ್ ಸದಸ್ಯರೊಂದಿಗೆ ಸೇರಿ ಮಸೂದೆ ಪರ ಮತ ಚಲಾಯಿಸಿದರು.
ರಷ್ಯಾ ಮೇಲಿನ ನಿರ್ಬಂಧಗಳ ಮಸೂದೆ ಸೇರಿದಂತೆ ಹಲವು ಶಾಸನಗಳಿಗೆ ಮುಂದಿನ ಹಂತಕ್ಕೆ ಕೊಂಡೊಯ್ಯಲು 214-211 ಮತಗಳ ಅಂತರದಲ್ಲಿ ಅನುಮೋದನೆ ದೊರೆಯಿತು. ಈ ಫಲಿತಾಂಶವು ಹೌಸ್‌ನ ಡೆಮಾಕ್ರಟಿಕ್ ನಾಯಕತ್ವಕ್ಕೆ ಅಚ್ಚರಿ ಮೂಡಿಸಿದೆ.
ಮಸೂದೆಯ ಅಂತಿಮ ಮತದಾನ ಇಂದು ಪ್ರತಿನಿಧಿಗಳ ಸಭೆಯಲ್ಲಿ ನಡೆಯುವ ನಿರೀಕ್ಷೆಯಿದೆ.
ಹೌಸ್ ವಿದೇಶಾಂಗ ವ್ಯವಹಾರಗಳ ಸಮಿತಿಯ ಹಿರಿಯ ಸದಸ್ಯ ರ‍್ಯಾಂಕಿಂಗ್ ಮೆಂಬರ್ ಡೆಮಾಕ್ರಟಿಕ್ ಸಂಸದ ಗ್ರೆಗೊರಿ ಮೀಕ್ಸ್ ರಷ್ಯಾ ನಿರ್ಬಂಧಗಳ ಮಸೂದೆಯನ್ನು ವಿರೋಧಿಸಿದ್ದರು. ಈ ಮಸೂದೆ ಯಾವುದೇ ನಿಯಂತ್ರಣ ಅಥವಾ ಮಿತಿಗಳಿಲ್ಲದೆ ಸುಂಕ ವಿಧಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅನಿಯಂತ್ರಿತ ಅಧಿಕಾರ ನೀಡಲಿದೆ ಎಂದು ಅವರು ವಾದಿಸಿದ್ದರು.
ಕಳೆದ ತಿಂಗಳು ಅಮೆರಿಕದ ಸೆನೆಟ್‌ನಲ್ಲಿ ಈ ಮಸೂದೆ 86-11ರ ಭಾರಿ ಬಹುಮತದಿಂದ ಅಂಗೀಕಾರಗೊಂಡಿತ್ತು.
ಈ ಮಸೂದೆಯು ರಷ್ಯಾದ ನಾಯಕತ್ವ ಮತ್ತು ಇಂಧನ ವಲಯದ ಮೇಲೆ ಮಾತ್ರವಲ್ಲದೆ, ತೈಲ ಸಾಗಣೆಯ ಮೇಲಿನ ನಿರ್ಬಂಧಗಳನ್ನು ತಪ್ಪಿಸಿಕೊಳ್ಳಲು ರಷ್ಯಾಗೆ ನೆರವಾಗುವ ಹಡಗುಗಳ ‘ಶ್ಯಾಡೋ ಫ್ಲೀಟ್’ ಮೇಲೂ ನಿರ್ಬಂಧ ವಿಧಿಸಲು ಉದ್ದೇಶಿಸಿದೆ.
ಉಕ್ರೇನ್ ಪರ ಗುಂಪುಗಳು ತಮ್ಮ ನಿಲುವಿಗೆ ಬೆಂಬಲ ಹೆಚ್ಚಿಸಲು ಲಾಬಿ ನಡೆಸುತ್ತಿರುವ ಸಮಯದಲ್ಲೇ ಈ ಮಸೂದೆ ಮೇಲೆ ಮತದಾನ ನಡೆಯುತ್ತಿದೆ. ‘ಅಮೆರಿಕನ್ ಕೊಲಿಷನ್ ಫಾರ್ ಉಕ್ರೇನ್’ ಆಯೋಜಿಸಿರುವ ‘ಉಕ್ರೇನ್ ಆ್ಯಕ್ಷನ್ ಸಮಿಟ್’ ನಲ್ಲಿ ಉಕ್ರೇನ್ ನಿರಂತರ ಬೆಂಬಲ ನೀಡುವಂತೆ ಅಮೆರಿಕದ ಸಂಸದರನ್ನು ಮನವೊಲಿಸುವ ಪ್ರಯತ್ನ ನಡೆಸಲಾಗುತ್ತಿದೆ.
ರಷ್ಯಾದ ಕಚ್ಚಾ ತೈಲ ವ್ಯಾಪಾರವು ಉಕ್ರೇನ್ ವಿರುದ್ಧದ ಯುದ್ಧಕ್ಕೆ ಹಣಕಾಸು ಒದಗಿಸುತ್ತಿದೆ ಎಂದು ಅಮೆರಿಕ ನಂಬಿದೆ.
ರಷ್ಯಾದ ಪ್ರಮುಖ ತೈಲ ಖರೀದಿದಾರ ರಾಷ್ಟ್ರಗಳಾದ ಚೀನಾ ಮತ್ತು ಭಾರತ ಸೇರಿದಂತೆ ದೇಶಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಧಿಕಾರ ನೀಡುವುದೂ ಈ ಮಸೂದೆಯ ಉದ್ದೇಶವಾಗಿದೆ.
ಆಗಸ್ಟ್ 7ರಂದು ಅಮೆರಿಕದ ಸೆನೆಟ್ ಅಂಗೀಕರಿಸಿದ ಮಸೂದೆಯಲ್ಲಿ ರಷ್ಯಾದ ವ್ಯಾಪಾರ ಪಾಲುದಾರ ದೇಶಗಳ ಹೆಸರನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ. ಆದರೆ ಪ್ರಮಾಣದ ಆಧಾರದ ಮೇಲೆ ತೈಲ ಮತ್ತು ಅನಿಲದ ಅತಿದೊಡ್ಡ ಐದು ಆಮದುದಾರ ರಾಷ್ಟ್ರಗಳನ್ನು ಉಲ್ಲೇಖಿಸಲಾಗಿದೆ. ಮಸೂದೆ ಅಧ್ಯಕ್ಷರ ಸಹಿಗಾಗಿ ಕಳುಹಿಸುವ ಮೊದಲು ಪ್ರತಿನಿಧಿಗಳ ಸಭೆಯಲ್ಲಿ ಅಂಗೀಕಾರಗೊಳ್ಳಬೇಕಿದೆ.
ನಾಳೆಯಿಂದ ಪ್ರತಿನಿಧಿಗಳ ಸಭೆ ಮುಂಗಡ ವಿರಾಮಕ್ಕೆ ತೆರಳಲಿದ್ದು, ಮಧ್ಯಂತರ ಚುನಾವಣೆಗಳ ಬಳಿಕ ನವೆಂಬರ್ 9ರಂದು ಮತ್ತೆ ಸಭೆ ಸೇರುವ ನಿರೀಕ್ಷೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



