tariffs

ರಷ್ಯಾದಿಂದ ಕಚ್ಚಾ ತೈಲ ಆಮದು: ಭಾರತ ಸೇರಿ ಇತರ ದೇಶಗಳ ಮೇಲೆ ಶೇ.100ರಷ್ಟು ಸುಂಕ; ಅಮೆರಿಕ ಸಂಸತ್ತಿನಲ್ಲಿ ಮಸೂದೆ
ರಷ್ಯಾ ಮೇಲಿನ ನಿರ್ಬಂಧಗಳ ಮಸೂದೆ ಸೇರಿದಂತೆ ಹಲವು ಶಾಸನಗಳಿಗೆ ಮುಂದಿನ ಹಂತಕ್ಕೆ ಕೊಂಡೊಯ್ಯಲು 214-211 ಮತಗಳ ಅಂತರದಲ್ಲಿ ಅನುಮೋದನೆ ದೊರೆಯಿತು. ಈ ಫಲಿತಾಂಶವು ಹೌಸ್ನ ಡೆಮಾಕ್ರಟಿಕ್ ನಾಯಕತ್ವಕ್ಕೆ ಅಚ್ಚರಿ ಮೂಡಿಸಿದೆ.

ಹೊಸ ಸುಂಕ ನೀತಿಗೆ ಅಮೆರಿಕದಲ್ಲೇ ಭಾರಿ ವಿರೋಧ: ಭಾರತ ಸೇರಿ 59 ದೇಶಗಳ ಪರ ನಿಂತ 25 ರಾಜ್ಯಗಳು; ಟ್ರಂಪ್ ಸರ್ಕಾರಕ್ಕೆ ಕಾನೂನು ಸಂಕಷ್ಟ..!
ಕಳೆದ ತಿಂಗಳು ಅಮೆರಿಕ ಭಾರತ ಸೇರಿದಂತೆ 59 ರಾಷ್ಟ್ರಗಳು ಹಾಗೂ ಯುರೋಪಿಯನ್ ಒಕ್ಕೂಟದ ಮೇಲೆ ಶೇ.10 ರಿಂದ ಶೇ.12.5ರವರೆಗೆ ಹೊಸ ಆಮದು ಸುಂಕವನ್ನು ವಿಧಿಸಿತ್ತು.

Generic ಔಷಧಿಗಳ ಮೇಲೆ ಟ್ರಂಪ್ ಶೇ.200ರಷ್ಟು ಸುಂಕ ಘೋಷಣೆ: ಭಾರತದ ಫಾರ್ಮಾ ಕ್ಷೇತ್ರಕ್ಕೆ ಕೋಟ್ಯಾಂತರ ಡಾಲರ್ ನಷ್ಟದ ಆತಂಕ..!
2026ರ ಆಗಸ್ಟ್ 1ರಿಂದ ಎರಡು ವರ್ಷಗಳ ಕಾಲ ಜೆನೆರಿಕ್ ಔಷಧಗಳ ಮೇಲೆ ಯಾವುದೇ ಸುಂಕ (0%) ವಿಧಿಸಲಾಗುವುದಿಲ್ಲ. ಆದರೆ, 2028ರ ಆಗಸ್ಟ್ನಿಂದ ಒಂದು ವರ್ಷದ ಅವಧಿಗೆ ಶೇ.100ರಷ್ಟು ಸುಂಕ ಹಾಗೂ ನಂತರದ ವರ್ಷಗಳಿಂದ ಶೇ.200ರಷ್ಟು ಸುಂಕ ಜಾರಿಗೆ ಬರಲಿದೆ.

Gold Tariffs: ಚಿನ್ನ ಖರೀದಿಸಬೇಡಿ ಎಂದು ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಕೇಂದ್ರ ಕ್ರಮ; ಚಿನ್ನ-ಬೆಳ್ಳಿ ಆಮದು ಸುಂಕ ಶೇ.15ಕ್ಕೆ ಏರಿಕೆ
ಹೆಚ್ಚಿದ ಸುಂಕವು ಜಗತ್ತಿನ ಎರಡನೇ ಅತಿ ದೊಡ್ಡ ಅಮೂಲ್ಯ ಲೋಹ ಬಳಕೆದಾರ ದೇಶವಾದ ಭಾರತದಲ್ಲಿ ಚಿನ್ನದ ಬೇಡಿಕೆಯನ್ನು ಕುಗ್ಗಿಸಬಹುದು.

ಫ್ರಾನ್ಸ್ ಜೊತೆಗೂ Donald Trump ಗಲಾಟೆ; ಶೇ.200ರಷ್ಟು ಸುಂಕ ಹೇರಿಕೆ? ಖಾಸಗಿ ಮೆಸೇಜ್ ವೈರಲ್!
ಫ್ರೆಂಚ್ ವೈನ್ ಮತ್ತು ಷಾಂಪೇನ್ ಮೇಲೆ ಶೇ.200 ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.

ಗ್ರೀನ್ಲ್ಯಾಂಡ್ ಮೇಲೆ ಅಮೆರಿಕಾ ನಿಯಂತ್ರಣ: ಬೆಂಬಲ ನೀಡದ ರಾಷ್ಟ್ರಗಳಿಗೆ ಹೆಚ್ಚಿನ ತೆರಿಗೆ; ಟ್ರಂಪ್ ಎಚ್ಚರಿಕೆ
ಗ್ರೀನ್ಲ್ಯಾಂಡ್ ಮೇಲೆ ಅಮೆರಿಕದ ನಿಯಂತ್ರಣಕ್ಕೆ ಬೆಂಬಲ ನೀಡದ ದೇಶಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಬಹುದು. ಏಕೆಂದರೆ ನಮಗೆ ರಾಷ್ಟ್ರೀಯ ಭದ್ರತೆಗಾಗಿ ಗ್ರೀನ್ಲ್ಯಾಂಡ್ ಅಗತ್ಯವಿದೆ.

ಇರಾನ್ ಜೊತೆ ವ್ಯಾಪಾರ ಮಾಡುವ ದೇಶಗಳ ಮೇಲೆ ಶೇ. 25 ರಷ್ಟು ಅಮೆರಿಕ ಸುಂಕ: ಭಾರತದ ಮೇಲೆ ಆಗುವ ಪರಿಣಾಮ ಏನು?
ಇರಾನ್ ನಲ್ಲಿ ಬೃಹತ್ ಸರ್ಕಾರಿ ವಿರೋಧಿ ಪ್ರತಿಭಟನೆಗಳು ಮುಂದುವರೆದಂತೆ, ಇರಾನ್ ಜೊತೆ ವ್ಯಾಪಾರ ಹೊಂದಿರುವ ದೇಶಗಳ ಮೇಲೆ ಶೇಕಡಾ 25 ರಷ್ಟು ಸುಂಕ ವಿಧಿಸಲಾಗುವುದು, ಅದು ತಕ್ಷಣವೇ ಜಾರಿಗೆ ಬರಲಿದೆ ಎಂದು ಟ್ರಂಪ್ ತಿಳಿಸಿದ್ದರು.

'ಭಾರತ ಮೇಲೆ ಶೇ.50 ಸುಂಕ ರದ್ದು ಮಾಡಿ, ಇದರಿಂದ ನಮ್ಮ ದೇಶಕ್ಕೇ ನಷ್ಟ': Donald Trump ಗೆ ಸೆನೆಟ್ ಸದಸ್ಯರ ಬೇಡಿಕೆ, ನಿರ್ಣಯ ಮಂಡನೆ
ಪ್ರತಿನಿಧಿಗಳಾದ ಡೆಬೊರಾ ರಾಸ್, ಮಾರ್ಕ್ ವೀಸಿ ಮತ್ತು ರಾಜಾ ಕೃಷ್ಣಮೂರ್ತಿ ನೇತೃತ್ವದ ಈ ನಿರ್ಣಯವು, ಬ್ರೆಜಿಲ್ ಮೇಲಿನ ಇದೇ ರೀತಿಯ ಸುಂಕಗಳನ್ನು ರದ್ದು ಮಾಡಲು ಮತ್ತು ಆಮದು ಸುಂಕಗಳನ್ನು ಹೆಚ್ಚಿಸಲು ಅಧ್ಯಕ್ಷರು ತುರ್ತು ಅಧಿಕಾರಗಳನ್ನು ಬಳಸುವುದನ್ನು ತಡೆಯಲು ದ್ವಿಪಕ್ಷೀಯ ಸೆನೆಟ್ ಕ್ರಮವಾಗಿದೆ.

ಅಮೆರಿಕ ಆಯ್ತು, ಈಗ ಮೆಕ್ಸಿಕೋದಿಂದಲೂ ಭಾರತದ ಮೇಲೆ ಶೇ. 50 ರಷ್ಟು ಹೆಚ್ಚುವರಿ ಸುಂಕದ ಘೋಷಣೆ!
ಮಸೂದೆ ಪರವಾಗಿ 76 ಮತಗಳು ವಿರುದ್ಧವಾಗಿ 5 ಮತಗಳು ಬಿದ್ದಿದ್ದು, 35 ಮಂದಿ ಗೈರು ಹಾಜರಿಯೊಂದಿಗೆ ಸೆನೆಟ್ ಮಸೂದೆಯನ್ನು ಅಂಗೀಕರಿಸಿದೆ.

