ವಿದೇಶ

ಪಾಕಿಸ್ತಾನ ಇಬ್ಭಾಗಕ್ಕೆ ಸೇನಾ ಮುಖ್ಯಸ್ಥನ ಮಾಸ್ಟರ್‌ಪ್ಲ್ಯಾನ್‌? 4 ಪ್ರಾಂತ್ಯಗಳನ್ನ 15 ಸಣ್ಣ ಭಾಗಗಳಾಗಿ ವಿಭಜಿಸಲು ಅಸಿಮ್ ಮುನೀರ್ ರಹಸ್ಯ ಸ್ಕೆಚ್!

ಪಾಕಿಸ್ತಾನದ ಸರ್ವಾಧಿಕಾರಿಯಾಗಲು ವ್ಯವಸ್ಥಿತ ಪ್ಲಾನ್ ರೂಪಿಸುತ್ತಿರುವ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ದೇಶದ ಪ್ರಸ್ತುತ ಇರುವ 4 ಪ್ರಮುಖ ಪ್ರಾಂತ್ಯಗಳನ್ನು ವಿಭಜಿಸಿ 12 ರಿಂದ 15 ಸಣ್ಣ ಆಡಳಿತ ಘಟಕಗಳನ್ನಾಗಿ ಮರುಸಂಘಟಿಸುವ ಯೋಜನೆ ನಡೆಸುತ್ತಿದ್ದಾನೆ. ಆ ಕುರಿತ ವರದಿ ಇಲ್ಲಿದೆ:

ಪಾಕಿಸ್ತಾನ ಇಬ್ಭಾಗಕ್ಕೆ ಸೇನಾ ಮುಖ್ಯಸ್ಥನ ಮಾಸ್ಟರ್‌ಪ್ಲ್ಯಾನ್‌? 4 ಪ್ರಾಂತ್ಯಗಳನ್ನ 15 ಸಣ್ಣ ಭಾಗಗಳಾಗಿ ವಿಭಜಿಸಲು ಅಸಿಮ್ ಮುನೀರ್ ರಹಸ್ಯ ಸ್ಕೆಚ್!
ಪಾಕಿಸ್ತಾನವನ್ನ 15 ಸಣ್ಣ ಭಾಗಗಳಾಗಿ ವಿಭಜಿಸಲು ಅಸಿಮ್ ಮುನೀರ್ ರಹಸ್ಯ ಸ್ಕೆಚ್! — AI Image
Published On :

ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನದ ಸರ್ವಾಧಿಕಾರಿಯಾಗಲು ವ್ಯವಸ್ಥಿತ ಪ್ಲಾನ್ ರೂಪಿಸುತ್ತಿರುವ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ದೇಶದ ಪ್ರಸ್ತುತ ಇರುವ 4 ಪ್ರಮುಖ ಪ್ರಾಂತ್ಯಗಳನ್ನು ವಿಭಜಿಸಿ 12 ರಿಂದ 15 ಸಣ್ಣ ಆಡಳಿತ ಘಟಕಗಳನ್ನಾಗಿ ಮರುಸಂಘಟಿಸುವ ಮಹಾಯೋಜನೆಯ ಮೂಲಕ, ಇಡೀ ದೇಶ ಸಂಪೂರ್ಣವಾಗಿ ಸೇನೆಯ ಕೈಗೊಂಬೆಯಾಗಿಸಲು ಕಸರತ್ತು ನಡೆಸುತ್ತಿದ್ದಾನೆ. ಆ ಕುರಿತ ವರದಿ ಇಲ್ಲಿದೆ:

ಬ್ರಿಟಿಷರ ವಿಭಜಿಸಿ ಮತ್ತು ಆಳುವ ನೀತಿಯಂತೆ ಅಸಿಮ್ ಮುನೀರ, ಈ ಪ್ಲ್ಯಾನ್ ಮಾಡುತ್ತಿದ್ದು, 28ನೇ ಸಂವಿಧಾನ ತಿದ್ದುಪಡಿಯ ಮೂಲಕ ಈ ಬದಲಾವಣೆಯ ಮೂಲಕ, ಸದ್ಯ ಪಾಕಿಸ್ತಾನದಲ್ಲಿ ಪಂಜಾಬ್, ಸಿಂಧ್, ಖೈಬರ್ ಪಖ್ತುಂಖ್ವಾ ಮತ್ತು ಬಲೂಚಿಸ್ತಾನ್ ಎಂಬ 4 ಪ್ರಮುಖ ಪ್ರಾಂತ್ಯಗಳನ್ನು 12 ರಿಂದ 15 ಸಣ್ಣ ಆಡಳಿತಾತ್ಮಕ ಘಟಕಗಳಾಗಿ ಮರುಸಂಘಟಿಸುವ ಅಥವಾ ವಿಭಜಿಸುವ ಉದ್ದೇಶವಿದಾಗಿದೆ. ಅದರಂತೆ,

  • ಪಂಜಾಬ್ ಪ್ರಾಂತ್ಯ: ಪಶ್ಚಿಮ ಪಂಜಾಬ್, ದಕ್ಷಿಣ ಪಂಜಾಬ್, ಬಹಾವಲ್ಪುರ್ ಮತ್ತು ಪೋಟೋಹಾರ್

  • ಸಿಂಧ್ ಪ್ರಾಂತ್ಯ: ಕರಾಚಿ/ಕೆಳ ಸಿಂಧ್, ಮೇಲ್ ಸಿಂಧ್ ಮತ್ತು ಮೆಹ್ರಾನ್

  • ಬಲೂಚಿಸ್ತಾನ್ ಪ್ರಾಂತ್ಯ: ಬಲೂಚಿಸ್ತಾನ್ ಮತ್ತು ಮಕ್ರಾನ್

  • ಖೈಬರ್ ಪಖ್ತುಂಖ್ವಾ (KPK): ಖೈಬರ್, ದಕ್ಷಿಣ KPK, ಹಜಾರಾ ಮತ್ತು ಕೋಹಿಸ್ತಾನ್

ವಿಭಜನೆಗೆ ಕಾರಣವೇನು?

  • ಆಡಳಿತಾತ್ಮಕ ಅಸಮತೋಲನ: ಪಾಕಿಸ್ತಾನದ ಪ್ರಾಂತ್ಯಗಳು ಗಾತ್ರ ಮತ್ತು ಜನಸಂಖ್ಯೆಯಲ್ಲಿ ಭಾರಿ ವ್ಯತ್ಯಾಸ ಹೊಂದಿವೆ. ಉದಾಹರಣೆಗೆ, ಪಂಜಾಬ್ ಒಂದರಲ್ಲೇ 12.8 ಕೋಟಿ ಜನಸಂಖ್ಯೆ ಇದ್ದು, ಇದು ದೇಶದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆಯಾಗಿದೆ. ಮತ್ತೊಂದೆಡೆ ಬಲೂಚಿಸ್ತಾನ್ ವಿಸ್ತೀರ್ಣದಲ್ಲಿ ದೊಡ್ಡದಾಗಿದ್ದರೂ ಕೇವಲ 1.5 ಕೋಟಿ ಜನಸಂಖ್ಯೆ ಹೊಂದಿದೆ.

  • ಸೇವೆಯ ಕೊರತೆ: ಪ್ರಾಂತ್ಯಗಳು ದೊಡ್ಡದಾಗಿರುವುದರಿಂದ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು, ಶಿಕ್ಷಣದಂತಹ ಕನಿಷ್ಠ ಸೌಲಭ್ಯಗಳೂ ಸಿಗುತ್ತಿಲ್ಲ ಹಾಗೂ ಸರ್ಕಾರಿ ಕೆಲಸಗಳಿಗಾಗಿ ಗಂಟೆಗಟ್ಟಲೆ ಪ್ರಯಾಣಿಸಬೇಕಾಗಿದೆ. ಸಣ್ಣ ಪ್ರಾಂತ್ಯಗಳಿಂದ ಆಡಳಿತ ಸುಲಭವಾಗುತ್ತದೆ ಎಂಬುದು ಸೇನೆಯ ವಾದ.

ಮುಂದುವರೆದು, ಈ ವಿಭಜನೆಯ ನಿಜವಾದ ಉದ್ದೇಶ ಆಡಳಿತ ಸುಧಾರಣೆಯಲ್ಲ, ಬದಲಿಗೆ ಪ್ರಾದೇಶಿಕ ರಾಜಕೀಯ ಪಕ್ಷಗಳ ಬಲವನ್ನು ಕುಗ್ಗಿಸುವುದು ಎಂದು ವಿಶ್ಲೇಷಕರು ಶಂಕಿಸಿದ್ದಾರೆ. ಅದರಂತೆ, ಪಂಜಾಬ್‌ನಲ್ಲಿ ನವಾಜ್ ಷರೀಫ್ ಅವರ PML(N) ಮತ್ತು ಸಿಂಧ್‌ನಲ್ಲಿ ಭುಟ್ಟೋ ಕುಟುಂಬದ PPP ಪಕ್ಷಗಳು ಬಲವಾದ ಹಿಡಿತ ಹೊಂದಿವೆ. ಅದರಂತೆ, ಪ್ರಾಂತ್ಯಗಳು ಸಣ್ಣದಾದರೆ ಈ ರಾಜಕೀಯ ಶಕ್ತಿ ಕೇಂದ್ರಗಳು ದುರ್ಬಲಗೊಂಡು, ಇಡೀ ದೇಶ ಸಂಪೂರ್ಣವಾಗಿ ಸೇನೆಯ ಕೈಗೊಂಬೆಯಾಗಲಿದೆ ಎಂಬ ಆತಂಕವಿದೆ.

ಆದರೆ, ಪಾಕಿಸ್ತಾನದ ಸಂವಿಧಾನದ ಆರ್ಟಿಕಲ್ 239ರ ಪ್ರಕಾರ, ಯಾವುದೇ ಪ್ರಾಂತ್ಯದ ಗಡಿಯನ್ನು ಬದಲಾಯಿಸಬೇಕಾದರೆ ರಾಷ್ಟ್ರೀಯ ಅಸೆಂಬ್ಲಿ ಹಾಗೂ ಸೆನೆಟ್‌ನಲ್ಲಿ 2/3 ಬಹುಮತದ ಜೊತೆಗೆ ಸಂಬಂಧಪಟ್ಟ ಪ್ರಾಂತ್ಯದ ಅಸೆಂಬ್ಲಿಯಲ್ಲೂ 2/3 ರಷ್ಟು ಒಪ್ಪಿಗೆ ಅಗತ್ಯ. ಈಗಾಗಲೇ ಸೆಪ್ಟೆಂಬರ್ 3 ರಂದು ಸಿಂಧ್ ಅಸೆಂಬ್ಲಿಯು ತನ್ನ ಪ್ರಾಂತ್ಯದ ವಿಭಜನೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.