'ಇರಾನ್ ಅಪಾಯಕಾರಿ ದೇಶ, ಏನಾದರೂ ದೊಡ್ಡ ನಿರ್ಧಾರ ಕೈಗೊಳ್ಳಬೇಕು': ಡೊನಾಲ್ಡ್ ಟ್ರಂಪ್; Video
ಗುರುವಾರ ಇರಾನ್ ಜೊತೆಗೆ ಮೂರನೇ ಸುತ್ತಿನ ಮಾತುಕತೆ ನಡೆದಿದ್ದು, ಮತ್ತೊಂದು ಸುತ್ತಿನ ಮಾತುಕತೆ ನಿವಾರ(ಫೆ. 28) ಜಿನೀವಾದಲ್ಲಿ ನಡೆಯಲಿದೆ.

ವಾಷಿಂಗ್ಟನ್: ಇರಾನ್ ಅತ್ಯಂತ ಕಠಿಣ ಮತ್ತು ಅಪಾಯಕಾರಿ ದೇಶವಾಗಿದ್ದು, ಪರಮಾಣು ಒಪ್ಪಂದ ಕುರಿತ ಮಾತುಕತೆಗೆ ಸಂಬಂಧಿಸಿದಂತೆ ಮುಂದಿನ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಅಮೆರಿಕ ಅಧ್ಯಕ್ಷ್ಯ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಗುರುವಾರ ಇರಾನ್ ಜೊತೆಗೆ ಮೂರನೇ ಸುತ್ತಿನ ಮಾತುಕತೆ ನಡೆದಿದ್ದು, ಮತ್ತೊಂದು ಸುತ್ತಿನ ಮಾತುಕತೆ ಶನಿವಾರ(ಫೆ. 28) ಜಿನೀವಾದಲ್ಲಿ ನಡೆಯಲಿದೆ. ಈ ಸಂಬಂಧ ಟೆಕ್ಸಾಸ್ನಲ್ಲಿ ಮಾತನಾಡಿರುವ ಟ್ರಂಪ್, ಸದ್ಯ ಪಶ್ಚಿಮ ಏಷ್ಯಾದಲ್ಲಿನ ಮಿಲಿಟರಿ ಸಂಘರ್ಷದ ಬದಲಿಗೆ ಶಾಂತಿ ಮಾರ್ಗದಲ್ಲಿ ಒಪ್ಪಂದಕ್ಕೆ ಬರುವುದು ನಮ್ಮ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.
'ನಾವು ಒಂದು ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಆದರೆ, ಅದು ಅಷ್ಟು ಸುಲಭವಲ್ಲ. 47 ವರ್ಷಗಳಿಂದ ಆ ದೇಶ ಜನರನ್ನು ಹಿಂಸಿಸುತ್ತಿದೆ. ಹಡಗುಗಳನ್ನು ಹೊಡೆದುರುಳಿಸುತ್ತಿದೆ. ಜನರನ್ನು ಕೊಲ್ಲುತ್ತಿದ್ದಾರೆ.
ಅಮೆರಿಕನ್ನರನ್ನು ಮಾತ್ರವಲ್ಲ, ಹಲವು ದೇಶಗಳ ಜನರನ್ನು ಕೊಂದಿದ್ದಾರೆ’ಎಂದು ಟ್ರಂಪ್ ಹೇಳಿದರು. ಅಂತೆಯೇ ಇರಾನ್ ಜೊತೆಗಿನ ಮಾತುಕತೆಯಲ್ಲಿ ಅಮೆರಿಕವು ದೊಡ್ಡ ನಿರ್ಧಾರ ಕೈಗೊಳ್ಳುವ ಹಾದಿಯಲ್ಲಿದೆ ಎಂದ ಟ್ರಂಪ್, ಇರಾನ್ ಜೊತೆಗಿನ ಯಾವುದೇ ಒಪ್ಪಂದವು ಅರ್ಥಪೂರ್ಣವಾಗಿರಬೇಕು ಎಂದು ಹೇಳಿದ್ದಾರೆ.
‘ನಿಮಗೆ ತಿಳಿದಿರುವಂತೆ, ನಾವು ಇರಾನ್ ಮೇಲೆ ಬಿ2 ಬಾಂಬರ್ಗಳಿಂದ ದಾಳಿ ಮಾಡಿದ್ದೇವೆ. ಇತ್ತೀಚೆಗೆ ಅವರ ಪರಮಾಣು ಸೌಲಭ್ಯವನ್ನು ಹೊಡೆದುರುಳಿಸಿದ್ದೇವೆ. ಆದರೆ, ನಾನು ಅವರ ಜೊತೆಗಿನ ಒಪ್ಪಂದವನ್ನು ಶಾಂತಿಯುತ ರೀತಿಯಲ್ಲಿ ಮಾಡಲು ಬಯಸುತ್ತೇನೆ, ಆದರೆ, ಅವರ ಜೊತೆ ಮಾತುಕತೆ ತುಂಬಾ ಕಷ್ಟವೆನಿಸುತ್ತಿದೆ. ಅವರು ತುಂಬಾ ಅಪಾಯಕಾರಿ ಜನರು. ಕಳೆದ ಎರಡು ಮೂರು ತಿಂಗಳುಗಳಲ್ಲಿ ಇರಾನ್ನಲ್ಲಿ 32,000 ಜನರು ಕೊಲ್ಲಲ್ಪಟ್ಟಿದ್ದಾರೆ. ಅದು ಅತ್ಯಂತ ಭಯಾನಕ’ ಎಂದು ಟ್ರಂಪ್ ಹೇಳಿದರು.
ಅಮೆರಿಕ ಮತ್ತು ಇರಾನ್ ನಡುವಿನ ಪರಮಾಣು ಒಪ್ಪಂದ ಕುರಿತು ಹಲವು ಸುತ್ತಿನ ಮಾತುಕತೆ ನಡೆದಿದ್ದು, ಇದರ ಜೊತೆಗೆ ಪಶ್ಚಿಮ ಏಷ್ಯಾದಲ್ಲಿ ಅಮೆರಿಕವು ಮಿಲಿಟರಿ ಜಮಾವಣೆ ಮಾಡಿರುವುದರಿಂದ ದಾಳಿ ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಹಲವು ದೇಶಗಳು ಇರಾನ್ನಿಂದ ಹೊರಡುವಂತೆ ತಮ್ಮ ನಾಗರಿಕರಿಗೆ ಸೂಚಿಸಿವೆ.

ಇರಾನ್ ಮೇಲೆ ಇಸ್ರೇಲ್ ದಾಳಿ: ರಾಜಧಾನಿ ಟೆಹ್ರಾನ್ ನಲ್ಲಿ IDF ಮಿಸೈಲ್ ಸ್ಟ್ರೈಕ್, ತುರ್ತು ಪರಿಸ್ಥಿತಿ ಘೋಷಣೆ! Video
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


