ಸಾರ್ವಜನಿಕ ಮೂತ್ರ ವಿಸರ್ಜನೆ; FBI ಮುಖ್ಯಸ್ಥ Kash Patel ಬಂಧನ! ಮಾನನಷ್ಟ ಮೊಕದ್ದಮೆ?
ಮದ್ಯಪಾನ ಸಂಬಂಧಿತ ಪ್ರಕರಣಗಳಲ್ಲಿ ತಾವು ಬಂಧನಕ್ಕೀಡಾದ ಬಗ್ಗೆ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಏಪ್ರಿಲ್ 24, 2026 ರಂದು 'ದಿ ಇಂಟರ್‌ಸೆಪ್ಟ್' (The Intercept) ವರದಿ ಮಾಡಿದೆ.

ವಾಷಿಂಗ್ಟನ್: ಅಮೆರಿಕದ ಹಾಲಿ FBI ನಿರ್ದೇಶಕ ಕಾಶ್ ಪಟೇಲ್ ರನ್ನು ಒಂದಲ್ಲ ಎರಡು ಬಾರಿ ಪೊಲೀಸರು ಬಂಧಿಸಿದ್ದ ವಿಚಾರ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಕಾಶ್ ಪಟೇಲ್ ತಮ್ಮ ಯೌವನದಲ್ಲಿ ನಡೆದ ಎರಡು ಮದ್ಯಪಾನ ಸಂಬಂಧಿತ ಪ್ರಕರಣಗಳಲ್ಲಿ ತಾವು ಬಂಧನಕ್ಕೀಡಾದ ಬಗ್ಗೆ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಏಪ್ರಿಲ್ 24, 2026 ರಂದು 'ದಿ ಇಂಟರ್‌ಸೆಪ್ಟ್' (The Intercept) ವರದಿ ಮಾಡಿದೆ. ಈ ವಿಷಯಗಳು ಅವರು 2005 ರಲ್ಲಿ ಫ್ಲೋರಿಡಾ ಬಾರ್ ಅಸೋಸಿಯೇಷನ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಬಹಿರಂಗವಾಗಿವೆ ಎನ್ನಲಾಗಿದೆ.
ವರದಿಯಲ್ಲಿರುವಂತೆ 2005ರಲ್ಲಿ ಪೇಸ್ ವಿಶ್ವವಿದ್ಯಾಲಯದಲ್ಲಿ ಕಾನೂನು ವಿದ್ಯಾರ್ಥಿಯಾಗಿದ್ದಾಗ, ಕಾಶ್ ಪಟೇಲ್ ನ್ಯೂಯಾರ್ಕ್ ನಗರದಲ್ಲಿ ಸ್ನೇಹಿತರೊಂದಿಗೆ ಮದ್ಯಪಾನ ಮಾಡಿ ಮನೆಗೆ ಹಿಂದಿರುಗುವಾಗ ಸಾರ್ವಜನಿಕವಾಗಿ ಮೂತ್ರ ವಿಸರ್ಜಿಸಲು ಪ್ರಯತ್ನಿಸಿದ ಕಾರಣಕ್ಕೆ ಪೊಲೀಸರು ಅವರನ್ನು ಬಂಧಿಸಿದ್ದರು ಎನ್ನಲಾಗಿದೆ.
ಮತ್ತೊಂದು ಪ್ರಕರಣದಲ್ಲಿ 2001ರಲ್ಲಿ ರಿಚ್‌ಮಂಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ, ಕಾಲೇಜು ಬಾಸ್ಕೆಟ್‌ಬಾಲ್ ಪಂದ್ಯವೊಂದರಿಂದ ಹೊರಹಾಕಲ್ಪಟ್ಟ ನಂತರ ಅಪ್ರಾಪ್ತ ವಯಸ್ಸಿನಲ್ಲಿ ಸಾರ್ವಜನಿಕ ಮದ್ಯಪಾನ ಮಾಡಿದ್ದಕ್ಕೆ ಅವರನ್ನು ಬಂಧಿಸಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹಳೇ ಘಟನೆಗಳು ಈಗೇಕೆ ವೈರಲ್?
ಈ ಹಳೆಯ ಘಟನೆಗಳು ಈಗ ಮತ್ತೆ ಮುನ್ನೆಲೆಗೆ ಬರಲು ಮುಖ್ಯ ಕಾರಣವೆಂದರೆ, ಪಟೇಲ್ ಅವರ ಪ್ರಸ್ತುತ ವರ್ತನೆಯ ಬಗ್ಗೆ ಕೇಳಿಬರುತ್ತಿರುವ ಆರೋಪಗಳು. 'ದಿ ಅಟ್ಲಾಂಟಿಕ್' ವರದಿಯ ಪ್ರಕಾರ, ಪಟೇಲ್ ಅವರ ಅತಿಯಾದ ಕುಡಿತ ಮತ್ತು ಕೆಲಸದ ಸಮಯದಲ್ಲಿ ಅನಗತ್ಯ ಗೈರುಹಾಜರಿಯು FBI ಮತ್ತು ನ್ಯಾಯಾಂಗ ಇಲಾಖೆಯ ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ ಎಂದು ಹೇಳಲಾಗಿದೆ.
ಮಾನನಷ್ಟ ಮೊಕದ್ದಮೆ ಹೂಡಿದ ಕಾಶ್ ಪಟೇಲ್
ಆದರೆ, ಕಾಶ್ ಪಟೇಲ್ ಈ ಎಲ್ಲಾ ಇತ್ತೀಚಿನ ಆರೋಪಗಳನ್ನು ನಿರಾಕರಿಸಿದ್ದು, ಮತ್ತು 'ದಿ ಅಟ್ಲಾಂಟಿಕ್' ವಿರುದ್ಧ 250 ಮಿಲಿಯನ್ ಡಾಲರ್ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಅಂತೆಯೇ ಶ್ವೇತಭವನವು ಪಟೇಲ್ ಅವರ ಮೇಲೆ ತಮಗೆ ಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ, ಪಟೇಲ್, "ನಾನು ಕೆಲಸದ ಸಮಯದಲ್ಲಿ ಎಂದಿಗೂ ಕುಡಿದಿಲ್ಲ, ಮತ್ತು ಅದಕ್ಕಾಗಿಯೇ ನಾವು $250 ಮಿಲಿಯನ್ ಮಾನನಷ್ಟ ಮೊಕದ್ದಮೆ ಹೂಡಿದ್ದೇವೆ. ಮತ್ತು ನಿಮ್ಮಲ್ಲಿ ಯಾರಾದರೂ ಭಾಗವಹಿಸಲು ಬಯಸಿದರೆ, ಅದನ್ನು ಸಲ್ಲಿಸಿ. ನಾನು ನಿಮ್ಮನ್ನು ನ್ಯಾಯಾಲಯದಲ್ಲಿ ಭೇಟಿಯಾಗುತ್ತೇನೆ" ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



