ವಿದೇಶ

'ವೈಟ್ ಹೌಸ್ ಶೂಟೌಟ್ ಘಟನೆ ಇರಾನ್ ಯುದ್ಧ ಗೆಲ್ಲುವುದಕ್ಕೆ ನಮ್ಮನ್ನು ತಡೆಯುವುದಿಲ್ಲ': ಡೊನಾಲ್ಡ್ ಟ್ರಂಪ್

ಈ ಶೂಟೌಟ್ ಗೂ ಇರಾನ್ ಮೇಲಿನ ಯುದ್ಧಕ್ಕೂ ಯಾವುದೇ ಸಂಬಂಧವಿದೆ ಎಂಬುದು ನನಗೆ ಗೊತ್ತಿಲ್ಲ, ಆದರೆ ನಮಗೆ ತಿಳಿದ ಮಾಹಿತಿಯ ಆಧಾರದ ಮೇಲೆ ಹಾಗಿಲ್ಲವೆಂದು ನಾನು ಭಾವಿಸುತ್ತೇನೆ ಎಂದು ವೈಟ್ ಹೌಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಟ್ರಂಪ್ ಪತ್ರಕರ್ತರಿಗೆ ತಿಳಿಸಿದ್ದಾರೆ.

'ವೈಟ್ ಹೌಸ್ ಶೂಟೌಟ್ ಘಟನೆ ಇರಾನ್ ಯುದ್ಧ ಗೆಲ್ಲುವುದಕ್ಕೆ ನಮ್ಮನ್ನು ತಡೆಯುವುದಿಲ್ಲ': ಡೊನಾಲ್ಡ್ ಟ್ರಂಪ್
ವೈಟ್ ಹೌಸ್ ಮೇಲಿನ ದಾಳಿ ಬಗ್ಗೆ ಡೊನಾಲ್ಡ್ ಟ್ರಂಪ್ ಮಾತು
Published On :

ಅಮೆರಿಕ ವೈಟ್ ಹೌಸ್ ವರದಿಗಾರರ ಸಂಘದ ಔತಣಕೂಟದಲ್ಲಿ ನಡೆದ ಗುಂಡಿನ ದಾಳಿ ತನ್ನನ್ನು ಇರಾನ್ ಮೇಲಿನ ಯುದ್ಧದಿಂದ ತಡೆಯುವುದಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಘಟನೆ ಯುದ್ಧಕ್ಕೆ ಸಂಬಂಧಿಸಿದೆ ಎಂದು ನನಗೆ ಅನಿಸುತ್ತಿಲ್ಲ ಎಂದಿದ್ದಾರೆ.

ಇದು ನನ್ನನ್ನು ಇರಾನ್ ಯುದ್ಧದಲ್ಲಿ ಗೆಲ್ಲುವುದರಿಂದ ತಡೆಯುವುದಿಲ್ಲ. ಈ ಶೂಟೌಟ್ ಗೂ ಇರಾನ್ ಮೇಲಿನ ಯುದ್ಧಕ್ಕೂ ಯಾವುದೇ ಸಂಬಂಧವಿದೆ ಎಂಬುದು ನನಗೆ ಗೊತ್ತಿಲ್ಲ, ಆದರೆ ನಮಗೆ ತಿಳಿದ ಮಾಹಿತಿಯ ಆಧಾರದ ಮೇಲೆ ಹಾಗಿಲ್ಲವೆಂದು ನಾನು ಭಾವಿಸುತ್ತೇನೆ ಎಂದು ವೈಟ್ ಹೌಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಟ್ರಂಪ್ ಪತ್ರಕರ್ತರಿಗೆ ತಿಳಿಸಿದ್ದಾರೆ.

ಟ್ರಂಪ್ ಅವರು ಟ್ರೂತ್ ಸೋಶಿಯಲ್‌ ಮೀಡಿಯಾದಲ್ಲಿ ಘಟನೆಯ ಒಂದು ವಿಡಿಯೊ ಹಂಚಿಕೊಂಡಿದ್ದು, ಅದರಲ್ಲಿ ಶಂಕಿತ ವ್ಯಕ್ತಿ ಭದ್ರತಾ ತಪಾಸಣಾ ಕೇಂದ್ರದ ಮೂಲಕ ಓಡುತ್ತಿರುವುದು ಹಾಗೂ ನಂತರ ಬಂಧಿಸಲ್ಪಡುವುದು ಕಾಣುತ್ತದೆ. ಒಬ್ಬ ವ್ಯಕ್ತಿ ಹಲವಾರು ಶಸ್ತ್ರಾಸ್ತ್ರಗಳೊಂದಿಗೆ ಭದ್ರತಾ ತಪಾಸಣಾ ಕೇಂದ್ರದತ್ತ ದೌಡಾಯಿಸಿದ್ದಾನೆ. ಧೈರ್ಯಶಾಲಿ ಸೀಕ್ರೆಟ್ ಸರ್ವಿಸ್ ಸಿಬ್ಬಂದಿ ಅವನನ್ನು ಕಟ್ಟಿ ಹಾಕಿದರು, ಒಬ್ಬ ಅಧಿಕಾರಿ ಮೇಲೆ ಗುಂಡು ತಾಗಿದರೂ ಕೂಡ ಜೀವರಕ್ಷಕ ಜಾಕೆಟ್ ಜೀವ ಉಳಿಸಿದೆ. ನಾನು ಅವರೊಂದಿಗೆ ಮಾತನಾಡಿದ್ದೇನೆ, ಅವರು ಚೆನ್ನಾಗಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರು ಬಂಧಿತನ ಚಿತ್ರಗಳನ್ನೂ ಹಂಚಿಕೊಂಡಿದ್ದು, ಅವನನ್ನು ನೆಲಕ್ಕೆ ಬೀಳಿಸಿ ಕಾನೂನು ಜಾರಿಗೆ ಸಂಬಂಧಿಸಿದ ಅಧಿಕಾರಿಗಳು ಹಿಡಿದಿರುವುದು ಕಾಣುತ್ತದೆ. ಶಂಕಿತನನ್ನು ಕ್ಯಾಲಿಫೋರ್ನಿಯಾದ ಟೋರನ್ಸ್‌ನ 31 ವರ್ಷದ ಕೋಲ್ ಟೋಮಾಸ್ ಆಲೆನ್ ಎಂದು ಗುರುತಿಸಲಾಗಿದೆ.

ಅಮೆರಿಕದ ಅಟಾರ್ನಿ ಜೀನಿನ್ ಪಿರೋ ಅವರು ಆರೋಪಿ ಮೇಲೆ ಶಸ್ತ್ರಾಸ್ತ್ರ ಬಳಕೆ ಮತ್ತು ದಾಳಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಎಫ್‌ಬಿಐ ಕೂಡ ಶಂಕಿತನು ಬಂಧನದಲ್ಲಿದ್ದಾನೆ ಎಂದು ದೃಢಪಡಿಸಿದೆ.

ವಾಷಿಂಗ್ಟನ್ ಮೇಯರ್ ಮ್ಯೂರಿಯಲ್ ಬೌಸರ್, ಈ ಸಮಯದಲ್ಲಿ ದಾಳಿಯಲ್ಲಿ ಮತ್ತೊಬ್ಬರು ಭಾಗಿಯಾಗಿದ್ದಾರೆ ಎಂಬುದಕ್ಕೆ ಯಾವುದೇ ಕಾರಣ ನಮ್ಮಲ್ಲಿ ಇಲ್ಲ ಎಂದು ತಿಳಿಸಿದ್ದು ಸಾರ್ವಜನಿಕರಿಗೆ ಯಾವುದೇ ಅಪಾಯ ಇಲ್ಲವೆಂದು ಹೇಳಿದ್ದಾರೆ.

ಟ್ರಂಪ್ ಪತ್ರಕರ್ತರಿಗೆ ಮಾಹಿತಿ ನೀಡಿ, ನನ್ನ ಅಭಿಪ್ರಾಯದಲ್ಲಿ, ಅವನು ಒಂಟಿ ದಾಳಿಕೋರ ಹುಚ್ಚನಂತೆ ವರ್ತಿಸಿದ್ದಾನೆ, ಇರಾನ್ ಯುದ್ಧಕ್ಕೂ ಇದಕ್ಕೂ ಸಂಬಂಧವಿದೆ ಎಂದು ಅನಿಸುವುದಿಲ್ಲ ಎಂದಿದ್ದಾರೆ.

ಇರಾನ್ ಜೊತೆ ಶಾಂತಿ ಮಾತುಕತೆಗಾಗಿ ಪಾಕಿಸ್ತಾನಕ್ಕೆ ಕಳುಹಿಸಬೇಕಿದ್ದ ಪ್ರತಿನಿಧಿಗಳ ಭೇಟಿಯನ್ನು ಟ್ರಂಪ್ ರದ್ದುಗೊಳಿಸಿದ್ದಾರೆ.

Story image

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.