ಕದನ ವಿರಾಮ: ಹಮಾಸ್ ಬಂಡುಕೋರರಿಂದ ಮೂವರು ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆ
ಕೇಂದ್ರ ಪಟ್ಟಣವಾದ ನುಸೈರಾತ್‌ನಲ್ಲಿ ನೂರಾರು ಪ್ಯಾಲೆಸ್ಟೇನಿಯರ ಮುಂಭಾಗ ವೇದಿಕೆಯ ಮೇಲೆ ಮುಖವಾಡ ಧರಿಸಿದ, ಶಸ್ತ್ರಸಜ್ಜಿತ ಹಮಾಸ್ ಬಂಡಕೋರರು ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರು.

ನುಸೈರಾತ್: ಕದನ ವಿರಾಮ ಒಪ್ಪಂದದ ಭಾಗವಾಗಿ ಹಮಾಸ್ ಬಂಡುಕೋರರು ಮೂವರು ಇಸ್ರೇಲ್ ಒತ್ತೆಯಾಳುಗಳನ್ನು ರೆಡ್ ಕ್ರಾಸ್ ಗೆ ಹಸ್ತಾಂತರಿಸಿದೆ. 20 ವರ್ಷದ ಓಮರ್ ವೆಂಕರ್ಟ್, ಒಮರ್ ಶೆಮ್ ಟೋವ್ ಮತ್ತು ಎಲಿಯಾ ಕೊಹೆನ್ ಅವರನ್ನು ಹಮಸ್ ಹಸ್ತಾಂತರಿಸಿದೆ.
ಕೇಂದ್ರ ಪಟ್ಟಣವಾದ ನುಸೈರಾತ್‌ನಲ್ಲಿ ನೂರಾರು ಪ್ಯಾಲೆಸ್ಟೇನಿಯರ ಮುಂಭಾಗ ವೇದಿಕೆಯ ಮೇಲೆ ಮುಖವಾಡ ಧರಿಸಿದ, ಶಸ್ತ್ರಸಜ್ಜಿತ ಹಮಾಸ್ ಬಂಡಕೋರರು ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಅವರ ಕುಟುಂಬಸ್ಥರು, ಸ್ನೇಹಿತರು ಘೋಷಣೆ ಕೂಗಿ ಸಂಭ್ರಮ ಪಟ್ಟರು. ಅವರೆಲ್ಲರನ್ನೂ ಅಪಹರಿಸಲಾಗಿತ್ತು. ನಂತರ ಅವರನ್ನು ರೆಡ್ ಕ್ರಾಸ್ ವಾಹನದಲ್ಲಿ ಇಸ್ರೇಲ್ ಗೆ ಕರೆದೊಯ್ಯಲಾಯಿತು.
ಇದಕ್ಕೂ ಮುನ್ನಾ ದಕ್ಷಿಣ ಗಾಜಾ ನಗರವಾದ ರಫಾದಲ್ಲಿ ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಯಿತು. ಆರನೇ ಒತ್ತೆಯಾಳು 36 ವರ್ಷದ ಹೆಶಮ್ ಅಲ್-ಸಯೀದ್ ಕೂಡ ಶನಿವಾರ ಬಿಡುಗಡೆಯಾಗಲಿದ್ದಾರೆ. ಅಕ್ಟೋಬರ್ 7, 2023 ರಂದು ಗಾಜಾದಲ್ಲಿ ನೋವಾ ಸಂಗೀತ ಉತ್ಸವದಲ್ಲಿಈ ಮೂವರನ್ನು ಹಮಾಸ್ ಹೋರಾಟಗಾರರು ಅಪಹರಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



