ಒಲಿಂಪಿಕ್ಸ್ 2024: ಅಡ್ಡಿಪಡಿಸಲು ಯೋಜನೆ; ಪ್ಯಾರಿಸ್ ನಲ್ಲಿ ರಷ್ಯಾ ಗೂಢಚಾರ ಬಂಧನ
ಪ್ಯಾರಿಸ್‌ನ ಪಾಕಶಾಲೆಯೊಂದರಲ್ಲಿ ತರಬೇತಿ ಪಡೆದ ಮಾಜಿ ರಿಯಾಲಿಟಿ ಟಿವಿ ತಾರೆಯಾಗಿರುವ 40 ವರ್ಷದ ವ್ಯಕ್ತಿ ಜುಲೈ 21 ರಂದು ಬಂಧಿಸುವ ಮೊದಲು ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭವನ್ನು ಅಡ್ಡಿಪಡಿಸುವುದಾಗಿ ಹೇಳಿ ಸುದ್ದಿಯಾಗಿದ್ದ ಎಂದು ಫ್ರೆಂಚ್ ಪತ್ರಿಕೆ ಲೆ ಮಾಂಡೆ ವರದಿ ಮಾಡಿದೆ.

ಪ್ಯಾರೀಸ್: ಒಲಿಂಪಿಕ್ಸ್ 2024 ಕ್ಕೆ ಅಡಚಣೆ ಉಂಟು ಮಾಡಲು ಯೋಜಿಸಿದ್ದ ರಷ್ಯಾ ಪ್ರಜೆಯನ್ನು ಫ್ರಾನ್ಸ್ ನ ರಾಜಧಾನಿಯಲ್ಲಿ ಬಂಧಿಸಲಾಗಿದೆ.
ಬಂಧಿತ ರಷ್ಯಾ ಪ್ರಜೆ 14 ವರ್ಷಗಳಿಂದ ಪ್ಯಾರಿಸ್ ನಲ್ಲಿ ವಾಸವಿದ್ದ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಶುಕ್ರವಾರ (ಜು.26) ರಂದು ಸೀನ್ ನದಿ ದಡದಲ್ಲಿ ದೋಣಿ ಮೆರವಣಿಗೆ (boat parade) ಒಳಗೊಂಡ ಕಾರ್ಯಕ್ರಮದ ಮೂಲಕ ಒಲಂಪಿಕ್ಸ್ ಗೆ ಚಾಲನೆ ಸಿಗಲಿದೆ.
ಪ್ಯಾರಿಸ್‌ನ ಪಾಕಶಾಲೆಯೊಂದರಲ್ಲಿ ತರಬೇತಿ ಪಡೆದ ಮಾಜಿ ರಿಯಾಲಿಟಿ ಟಿವಿ ತಾರೆಯಾಗಿರುವ 40 ವರ್ಷದ ವ್ಯಕ್ತಿ ಜುಲೈ 21 ರಂದು ಬಂಧಿಸುವ ಮೊದಲು ಒಲಿಂಪಿಕ್ಸ್ ನ ಉದ್ಘಾಟನಾ ಸಮಾರಂಭವನ್ನು ಅಡ್ಡಿಪಡಿಸುವುದಾಗಿ ಹೇಳಿ ಸುದ್ದಿಯಾಗಿದ್ದ ಎಂದು ಫ್ರೆಂಚ್ ಪತ್ರಿಕೆ ಲೆ ಮಾಂಡೆ ವರದಿ ಮಾಡಿದೆ.
ಫ್ರೆಂಚ್ ಮಾಧ್ಯಮದ ಪ್ರಕಾರ, ಬಂಧಿತ ವ್ಯಕ್ತಿ ಫೆಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್‌ಎಸ್‌ಬಿ), ರಷ್ಯಾದ ಆಂತರಿಕ ಭದ್ರತೆ ಮತ್ತು ಪ್ರತಿ-ಗುಪ್ತಚರ ಸೇವೆಯ ಏಜೆಂಟ್ ಆಗಿದ್ದಾನೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



