ತಾಲಿಬಾನ್ ಗೆ ಒಂದು ಅವಕಾಶ ಕೊಡಿ ಎಂದ ಬ್ರಿಟನ್ ಸೇನಾ ಮುಖ್ಯಸ್ಥ
1990ರ ಕಾಲಘಟ್ಟದ ತಾಲಿಬಾನಿಗೂ ಈಗಿನ ತಾಲಿಬಾನಿಗೂ ಹೋಲಿಕೆ ಕಲ್ಪಿಸುವುದು ಸರಿಯಲ್ಲ. ಈ ಹಿಂದಿನ ಅವರ ವರ್ತನೆಗೂ ಈಗಿನ ನಡೆಗೂ ಇರುವ ಸಾಮ್ಯತೆಯನ್ನು ಗಣನೆಗೆ ತೆಗೆದುಕೊಳ್ಳದೆ ನಾವು ಸ್ವಲ್ಪ ವಿಶಾಲ ಮನೋಭಾವದೊಂದಿಗೆ ತಾಲಿಬಾನಿಗಳನ್ನು ಸ್ವಾಗತಿಸಬೇಕು.

ಲಂಡನ್: ತಾಲಿಬಾನ್ ಸರ್ಕಾರ ರಚಿಸುವ ಕುರಿತಂತೆ ಅಂತಾರಾಷ್ಟ್ರೀಯ ಸಮುದಾಯ ತಾಲಿಬಾನ್ ಗೆ ಒಂದು ಅವಕಾಶವನ್ನು ಕೊಡಬೇಕು ಎಂದು ಬ್ರಿಟನ್ ಸೇನಾ ಮುಖ್ಯಸ್ಥ ನಿಕ್ ಕಾರ್ಟರ್ ಹೇಳಿದ್ದಾರೆ. ಹಳೆಯ ಕತೆಯನ್ನು ಇಟ್ಟುಕೊಂಡು ತಾಲಿಬಾನ್ ಗೆ ಉಗ್ರಗಾಮಿ ಹಣೆಪಟ್ಟಿ ಹಚ್ಚಿ ಅವರನ್ನು ದೂಷಿಸುವುದು ಸರಿಯಲ್ಲ. ಅವರಿಗೆ ಒಂದು ಅವಕಶ ನೀಡಿದಾಗಲಷ್ಟೇ ಅವರ ತಮ್ಮನ್ನು ತಾವು ಪ್ರೂವ್ ಮಾಡಿಕೊಳ್ಳುವುದಕ್ಕೆ ವೇದಿಕೆ ನಿರ್ಮಾಣವಾಗುತ್ತದೆ. ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
1990ರ ಕಾಲಘಟ್ಟದ ತಾಲಿಬಾನಿಗೂ ಈಗಿನ ತಾಲಿಬಾನಿಗೂ ಹೋಲಿಕೆ ಕಲ್ಪಿಸುವುದು ಸರಿಯಲ್ಲ. ಈ ಹಿಂದಿನ ಅವರ ವರ್ತನೆಗೂ ಈಗಿನ ನಡೆಗೂ ಇರುವ ಸಾಮ್ಯತೆಯನ್ನು ಗಣನೆಗೆ ತೆಗೆದುಕೊಳ್ಳದೆ ನಾವು ಸ್ವಲ್ಪ ವಿಶಾಲ ಮನೋಭಾವದೊಂದಿಗೆ ತಾಲಿಬಾನಿಗಳನ್ನು ಸ್ವಾಗತಿಸಬೇಕು. ಆಗ ಮಾತ್ರ ಅವರೆಷ್ಟು ಉದಾರಿಗಳೆಂದು ಸಾಬೀತುಪಡಿಸಲ್ಲರು ಎಂದು ಕಾರ್ಟರ್ ಹೇಳಿದ್ದಾರೆ.
ತಾಲಿಬಾನಿಗಳು ಮೂಲತಃ ಬುಡಕಟ್ಟು ಜನಾಂಗದವರು. ಅವರು ಜೀವನಪೂರ್ತಿ ಸಂಪ್ರದಾಯವಾದಿಗಳಾಗಿಯೇ ಬೆಳೆದವರು. ಹಾಗೆಂದು ಅವರ ಆಚರ ವಿಚಾರಗಳನ್ನು ತಿರಸ್ಕರಿಸದೇ ಅವರಿಗೂ ಒಂದು ಅವಕಾಶವನ್ನು ನೀಡಬೇಕು ಎಂದು ಕಾರ್ಟರ್ ಮನವಿ ಮಾಡಿದ್ದಾರೆ. ಅದಕ್ಕೆ ಸಮರ್ಥನೆಯಾಗಿ ತಾಲಿಬಾನ್ ಕಳೆದ ಎರಡು ದಿನಗಳಿಂದ ನಡೆದುಕೊಳ್ಳುತ್ತಿರುವ ರೀತಿಯನ್ನು ಉದಾಹರಿಸಿದ್ದಾರೆ.
ಆದರೆ ಕಾರ್ಟರ್ ಮಾತಿಗೆ ಹಲವು ಬ್ರಿಟಿಷ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬ್ರಿಟಿಷ್ ಸೇನೆಯ ಮಾಜಿ ಮುಖ್ಯಸ್ಥ ಚಾರ್ಲಿ ಹರ್ಬರ್ಟ್ ಕಾರ್ಟರ್ ಮನವಿಯನ್ನು ನಿರಾಕರಿಸಿದ್ದಾರೆ. ತಾಲಿಬಾನ್ ಸೇನಾ ಬಲದ ಮೂಲಕ ಅಧಿಕಾರಕ್ಕೆ ಬರುತ್ತಿದೆ. ಈ ಸಮಯದಲ್ಲಿ ಅದಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಬೇಕಾಗಿದೆ. ಅದನ್ನು ಗಳಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಮಹಿಳೆಯರಿಗೆ ಪ್ರಾಧಾನ್ಯತೆ, ಅವರಿಗೆ ಉದ್ಯೋಗ ಮಾಡಲು ಅನುಮತಿ ಸೇರಿದಂತೆ ಹಲವು ಬಗೆಯಲ್ಲಿ ಮಾತನಾಡುತ್ತಿದೆ. ಅದು ಅಂತಾರಾಷ್ತ್ರೀಯ ಸಮುದಾಯವನ್ನು ದಾರಿತಪ್ಪಿಸಲು. ಹೀಗಾಗಿ ತಾಲಿಬಾನ್ ಏನೇ ಹೇಳಿದರೂ ಅದರ ಹಿಂದಿನ ಮೂಲ ಸ್ವರೂಪವನ್ನು ನಾವು ಮರೆಯಬಾರದು ಎಂದು ಮಾಜಿ ಬ್ರಿಟನ್ ಸೇನಾ ಮುಖ್ಯಸ್ಥ ಹರ್ಬರ್ಟ್ ಅಭಿಪ್ರಾಯಪಟ್ಟಿದ್ದಾರೆ.
Related Article
1990ರ ಅಂತರ್ಯುದ್ಧದ ಶಿಯಾ ನಾಯಕನ ಪ್ರತಿಮೆ ಧ್ವಂಸಗೊಳಿಸಿದ ತಾಲಿಬಾನ್
ಕಾಬೂಲಿನಿಂದ ಹೊರಟ ಕಡೆಯ ವಿಮಾನದಲ್ಲಿ ಭಾರತಕ್ಕೆ ಮರಳಿದ ಪತ್ರಕರ್ತೆಯ ರೋಚಕ ಕಥೆ
ತಾಲಿಬಾನ್ ಪರ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ಸಂಸದನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು
ಭಾರತ ಅಫ್ಘಾನಿಸ್ತಾನದಲ್ಲಿ ಆರಂಭಿಸಿರುವ ಯೋಜನೆಗಳನ್ನು ಪೂರ್ಣಗೊಳಿಸಲಿ: ತಾಲಿಬಾನ್ ವಕ್ತಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


