1990ರ ಅಂತರ್ಯುದ್ಧದ ಶಿಯಾ ನಾಯಕನ ಪ್ರತಿಮೆ ಧ್ವಂಸಗೊಳಿಸಿದ ತಾಲಿಬಾನ್
1990ರ ಅಫ್ಘಾನಿಸ್ತಾನದ ಅಂತರ್ಯುದ್ಧದ ಸಮಯದಲ್ಲಿ ತಮ್ಮ ವಿರುದ್ಧ ಹೋರಾಡಿದ ಶಿಯಾ ಮಿಲಿಟಿಯ ನಾಯಕನ ಪ್ರತಿಮೆಯನ್ನು ತಾಲಿಬಾನ್ ಸ್ಫೋಟಿಸಿರುವ ಫೋಟೋಗಳು ಬುಧವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಕಾಬೂಲ್: 1990ರ ಅಫ್ಘಾನಿಸ್ತಾನದ ಅಂತರ್ಯುದ್ಧದ ಸಮಯದಲ್ಲಿ ತಮ್ಮ ವಿರುದ್ಧ ಹೋರಾಡಿದ ಶಿಯಾ ಮಿಲಿಟಿಯ ನಾಯಕನ ಪ್ರತಿಮೆಯನ್ನು ತಾಲಿಬಾನ್ ಸ್ಫೋಟಿಸಿರುವ ಫೋಟೋಗಳು ಬುಧವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
1996 ರಲ್ಲಿ ತಾಲಿಬಾನ್ ನಿಂದ ಕೊಲ್ಲಲ್ಪಟ್ಟ ಮಿಲಿಟಿಯ ನಾಯಕ ಅಬ್ದುಲ್ ಅಲಿ ಮಜಾರಿ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ.
ಮಜಾರಿ ಅಫ್ಘಾನಿಸ್ತಾನದ ಜನಾಂಗೀಯ ಹಜಾರ ಅಲ್ಪಸಂಖ್ಯಾತರ ಚಾಂಪಿಯನ್ ಆಗಿದ್ದರು. ಸುನ್ನಿ ತಾಲಿಬಾನ್ ನ ಹಿಂದಿನ ಆಡಳಿತದಲ್ಲಿ ಶಿಯಾಗಳಿಗೆ ಕಿರುಕುಳ ನೀಡಲಾಗಿತ್ತು.
ಈ ಪ್ರತಿಮೆ ಮಧ್ಯ ಬಾಮ್ಯಾನ್ ಪ್ರಾಂತ್ಯದಲ್ಲಿದ್ದು, ಇಲ್ಲಿ ಕುಖ್ಯಾತವಾಗಿದ್ದ ತಾಲಿಬಾನ್ 1,500 ವರ್ಷಗಳಷ್ಟು ಹಳೆಯದಾದ ಎರಡು ಬೃಹತ್ ಬುದ್ಧನ ಪ್ರತಿಮೆಗಳನ್ನು ಧ್ವಂಸಗೊಳಿಸಿದೆ. ಬುದ್ಧರು ಇಸ್ಲಾಂನ ವಿಗ್ರಹಾರಾಧನೆಯ ಮೇಲಿನ ನಿಷೇಧವನ್ನು ಉಲ್ಲಂಘಿಸಿದ್ದಾರೆ ಎಂದು ತಾಲಿಬಾನ್ ಹೇಳಿಕೊಂಡಿದೆ.
ತಾಲಿಬಾನ್ ಅಫ್ಘಾನಿಸ್ತಾನವನ್ನು ಸಂಪೂರ್ಣ ವಶಪಡಿಸಿಕೊಂಡಿದ್ದು, 20 ವರ್ಷಗಳ ನಂತರ ವಿದೇಶಿ ಸೇನೆಯನ್ನು ಹಿಮ್ಮೆಟ್ಟಿಸಿದ್ದೇವೆ. ಆಂತರಿಕವಾಗಿ, ಬಾಹ್ಯವಾಗಿ ಯಾವುದೇ ಶತೃತ್ವವನ್ನು ನಾವು ಬಯಸುವುದಿಲ್ಲ. ಮಹಿಳೆಯರ ಹಕ್ಕುಗಳಿಗೆ ಯಾವುದೇ ಭಂಗ ತರುವುದಿಲ್ಲ ಎಂದು ಹೇಳಿದ್ದಾರೆ.
ನಾವು ಎಲ್ಲರನ್ನೂ ಕ್ಷಮಿಸಿದ್ದೇವೆ ಯಾರ ವಿರುದ್ಧವೂ ಪ್ರತೀಕಾರ ಕೈಗೊಳ್ಳುವುದಿಲ್ಲ. ನಾಗರೀಕರ ಮನೆಗಳ ಮೇಲೆ ಯಾವುದೇ ದಾಳಿ, ಶೋಧ ನಡೆಸುವುದಿಲ್ಲ ಎಂದು ತಾಲಿಬಾನ್ ಸ್ಪಷ್ಟಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


