ವಿದೇಶ

ಆಫ್ಘನ್ ರಾಷ್ಟ್ರಧ್ವಜ ಪ್ರದರ್ಶಿಸಿದ್ದಕ್ಕೆ ತಾಲಿಬಾನ್ ನಿಂದ ಗುಂಡಿನ ದಾಳಿ: ಮೂವರ ಬಲಿ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿರುವುದು ವರದಿಯಾಗುತ್ತಿರುವುದರ ನಡುವೆಯೇ ಈ ದುರ್ಘಟನೆ ಸಂಭವಿಸಿದೆ.

ಆಫ್ಘನ್ ರಾಷ್ಟ್ರಧ್ವಜ ಪ್ರದರ್ಶಿಸಿದ್ದಕ್ಕೆ ತಾಲಿಬಾನ್ ನಿಂದ ಗುಂಡಿನ ದಾಳಿ: ಮೂವರ ಬಲಿ
ಪ್ರತಿಭಟನಾ ದೃಶ್ಯ
Published On :

ಕಾಬೂಲ್: ತಾಲಿಬಾನ್ ಅಧಿಕೃತವಾಗಿ ದೇಶವನ್ನು ಆಳುವ ಸಮಯ ಹತ್ತಿರವಾಗುತ್ತಲೇ ಆಫ್ಘನ್ ರಾಷ್ಟ್ರಧ್ವಜವನ್ನು ಪ್ರದರ್ಶಿಸಿದ ಕಾರಣಕ್ಕೆ ತಾಲಿಬಾನಿಗಳು ಮೂವರು ಆಫ್ಘನ್ನರನ್ನು ಹತ್ಯೆ ಮಾಡಿರುವ ಘಟನೆ ಜಲಾಲಾಬಾದಿನಲ್ಲಿ ನಡೆದಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿರುವುದು ವರದಿಯಾಗುತ್ತಿರುವುದರ ನಡುವೆಯೇ ಈ ದುರ್ಘಟನೆ ಸಂಭವಿಸಿದೆ. 

ತಾಲಿಬಾನಿಗಳು ನಗರದಲ್ಲಿ ಪ್ರತಿಷ್ಟಾಪಿಸಲಾಗಿದ್ದ ಆಫ್ಘನ್ ರಾಷ್ಟ್ರಧ್ವಜವನ್ನು ಕಿತ್ತು ತಾಲಿಬಾನ್ ಧ್ವಜವನ್ನು ನೆಟ್ಟಿದ್ದರು. ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾಕಾರರ ಮೇಲೆ ತಾಲಿಬಾನಿಗಳು ಗುಂಡಿನ ದಾಳೆ ನಡೆಸಿದರು ಎಂದು ತಿಳಿದುಬಂದಿದೆ. 

ಸಾವಿರಾರು ಆಫ್ಘನ್ನರು ಆಫ್ಘನ್ ಬಾವುಟವನ್ನು ಪ್ರದರ್ಶಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾನಗಳಲ್ಲಿ ಹರಿದಾಡುತ್ತಿದ್ದು ತಾಲಿಬಾನ್ ಕೆಂಗಣ್ಣು ಬೀರಿದೆ.

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.