ವಿದೇಶ

ಸೌದಿ ಮಿಲಿಟರಿ ಕಾರ್ಯಾಚರಣೆಗೆ ಹೌತಿ ಬಂಡುಕೋರರ ತಿರುಗೇಟು: ರಿಯಾದ್ ವಿಮಾನ ನಿಲ್ದಾಣ, ಅರಾಮ್ಕೊ ಸಂಸ್ಕರಣಾಗಾರ ಗುರಿಯಾಗಿಸಿಕೊಂಡು ದಾಳಿ!

ದಕ್ಷಿಣ ಸೌದಿ ಅರೇಬಿಯಾದ ಮಿಲಿಟರಿ ಕಟ್ಟಡಗಳು ಮತ್ತು ಸಣ್ಣ ವಿಮಾನ ನಿಲ್ದಾಣಗಳು ಟಾರ್ಗೆಟ್ ನಲ್ಲಿ ಸೇರಿವೆ

ಸೌದಿ ಮಿಲಿಟರಿ ಕಾರ್ಯಾಚರಣೆಗೆ ಹೌತಿ ಬಂಡುಕೋರರ ತಿರುಗೇಟು: ರಿಯಾದ್ ವಿಮಾನ ನಿಲ್ದಾಣ, ಅರಾಮ್ಕೊ ಸಂಸ್ಕರಣಾಗಾರ ಗುರಿಯಾಗಿಸಿಕೊಂಡು ದಾಳಿ!
ಹೌತಿ ಬಂಡುಕೋರರ ಸಾಂದರ್ಭಿಕ ಚಿತ್ರ
Published On :

ರಿಯಾದ್: ಸೌದಿ ನೇತೃತ್ವದ ಮಿತ್ರ ಪಡೆಗಳು ದಾಳಿ ತೀವ್ರಗೊಳಿಸಿದ್ದಂತೆಯೇ ಯೆಮೆನ್‌ನ ಇರಾನ್ ಬೆಂಬಲಿತ ಹೌತಿಗಳು ತಿರುಗೇಟು ನೀಡಿದ್ದಾರೆ.

ರಿಯಾದ್ ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ರಬಿಗ್‌ನಲ್ಲಿರುವ ಅರಾಮ್ಕೊ ಸಂಸ್ಕರಣಾಗಾರ ಸೇರಿದಂತೆ ಸೌದಿ ಅರೇಬಿಯಾದಾದ್ಯಂತ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿರುವುದಾಗಿ ಹೌತಿಗಳು ಹೇಳಿಕೊಂಡಿದ್ದಾರೆ. ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿ ದಾಳಿ ಸಹ ನಡೆಸಲಾಗಿದೆ ಎಂದು ಹೌತಿ ಮಿಲಿಟರಿ ವಕ್ತಾರ ಯಾಹ್ಯಾ ಸಾರಿ ಹೇಳಿದ್ದಾರೆ.

ದಕ್ಷಿಣ ಸೌದಿ ಅರೇಬಿಯಾದ ಮಿಲಿಟರಿ ಕಟ್ಟಡಗಳು ಮತ್ತು ಸಣ್ಣ ವಿಮಾನ ನಿಲ್ದಾಣಗಳು ಟಾರ್ಗೆಟ್ ನಲ್ಲಿ ಸೇರಿವೆ. ಸೌದಿ ರಾಜಧಾನಿಯಲ್ಲಿ ಸ್ಫೋಟಗಳು ವರದಿಯಾದ ಸ್ವಲ್ಪ ಸಮಯದ ನಂತರ ಸೋಮವಾರ ತಡರಾತ್ರಿ ರಿಯಾದ್‌ನಲ್ಲಿ ಜೋರಾಗಿ ಸ್ಫೋಟಗಳು ಕೇಳಿಬಂದವು ಎಂದು AFP ವರದಿ ಮಾಡಿದೆ. ಸೌದಿ ಅಧಿಕಾರಿಗಳು ಹೌತಿ ಹೇಳಿಕೆ ಬಗ್ಗೆ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ ಅಥವಾ ದಾಳಿಯಿಂದ ಉಂಟಾದ ಹಾನಿ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಸೌದಿ ನೇತೃತ್ವದ ಒಕ್ಕೂಟವು ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರಗೊಳಿಸುತ್ತಿದ್ದಂತೆ ಹೌತಿ ಹೇಳಿಕೆಗಳು ಬಂದವು. ಯೆಮೆನ್‌ನ ಕೆಂಪು ಸಮುದ್ರ ಕರಾವಳಿಯಲ್ಲಿರುವ ಹೌತಿ ಹಿಡಿತದಲ್ಲಿರುವ ಬಂದರು ನಗರವಾದ ಹೊಡೈಡಾದಲ್ಲಿ ಸೌದಿ ನೌಕಾ ಪಡೆಗಳು "ಮಿಲಿಟರಿ ಟಾರ್ಗೆಟ್ ವಿರುದ್ಧ ದಾಳಿಗಳನ್ನು ನಡೆಸಿವೆ ಎಂದು ಒಕ್ಕೂಟದ ವಕ್ತಾರ ಟರ್ಕಿ ಅಲ್-ಮಲ್ಕಿ ಹೇಳಿದ್ದಾರೆ.

ಈ ಕಾರ್ಯಾಚರಣೆ ವೇಳೆ ಶಸ್ತ್ರಾಸ್ತ್ರಗಳ ಡಿಪೋಗಳು, ಬೂಬಿ-ಟ್ರಾಪ್ಡ್ ದೋಣಿಗಳು ಮತ್ತು ನೌಕಾ ಗಣಿಗಳನ್ನು ಹೊಂದಿರುವ ಕಟ್ಟಡಗಳನ್ನು ನಾಶಪಡಿಸಿದೆ. ಅಲ್ಲದೇ ದಕ್ಷಿಣ ಕೆಂಪು ಸಮುದ್ರದಲ್ಲಿನ ಹಡಗು ಮಾರ್ಗಗಳ ಮೇಲೆ ಯೋಜಿತ ದಾಳಿಯನ್ನು ಸಹ ತಡೆದಿದೆ ಎಂದು ಅವರು ವಿವರಿಸಿದ್ದಾರೆ.

ಸೌದಿ ಅರೇಬಿಯಾದ ಬೆಂಬಲವಿರುವ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಯೆಮೆನ್ ಸರ್ಕಾರ ನಡೆಸಿದ ಪ್ರಮುಖ ಆಕ್ರಮಣದ ನಂತರ ಈ ಉದ್ವಿಗ್ನತೆ ಹೆಚ್ಚಾಗಿದೆ. ತಾವು 1,000ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದ್ದು, ಹೌತಿಗಳ ನಿಯಂತ್ರಣದಲ್ಲಿರುವ ರಾಜಧಾನಿ ಸನಾದತ್ತ ಕಾರ್ಯಾಚರಣೆಯನ್ನು ಆರಂಭಿಸಿರುವುದಾಗಿ ಯೆಮೆನ್ ಪಡೆಗಳು ತಿಳಿಸಿವೆ. ಕಳೆದ ತಿಂಗಳು ಯೆಮೆನ್‌ನ ಕೆಂಪು ಸಮುದ್ರದ ಕರಾವಳಿ ಮತ್ತು ಬಾಬ್ ಅಲ್-ಮಂಡಬ್ ಜಲಸಂಧಿಯ ಸಮೀಪದ ವಿಶಾಲ ಪ್ರದೇಶಗಳನ್ನು ಹೌತಿಗಳು ವಶಪಡಿಸಿಕೊಂಡ ನಂತರ ಈ ಇತ್ತೀಚಿನ ಉಲ್ಬಣವು ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ, 'ಮಕ್ಕಾ ಜಂಟಿ ರಕ್ಷಣಾ ಒಪ್ಪಂದ'ದ ಅಡಿಯಲ್ಲಿ ಸೌದಿ ಅರೇಬಿಯಾವು ಪಾಕಿಸ್ತಾನ ಮತ್ತು ಟರ್ಕಿಯಿಂದ ಮಿಲಿಟರಿ ಬೆಂಬಲವನ್ನು ಪಡೆದುಕೊಂಡಿದೆ. ಸೌದಿ ಅರೇಬಿಯಾದ ಭೂಪ್ರದೇಶವನ್ನು ರಕ್ಷಿಸಲು ನೆರವಾಗುವ ನಿಟ್ಟಿನಲ್ಲಿ, ಈ ಒಪ್ಪಂದದ ಅಡಿಯಲ್ಲಿ ಅಲ್ಲಿಗೆ ತಮ್ಮ ಪಡೆಗಳನ್ನು ನಿಯೋಜಿಸಲು ಇಸ್ಲಾಮಾಬಾದ್ ಮತ್ತು ಅಂಕಾರಾ ಸಮ್ಮತಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.