ಲಾಕ್ ಡೌನ್ ವೇಳೆ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ, ಭೂಕಬಳಿಕೆ, ಶ್ರೀಮಂತರ ಕೊಲೆ, ಅತ್ಯಾಚಾರ!
ಮಹಾಮಾರಿ ಕೊರೋನಾ ಲಾಕ್ಡೌನ್ ಸಮಯದಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಕಿರುಕುಳ ಹೆಚ್ಚಾಗಿದೆ ಎಂದು ವಿಶ್ವ ಹಿಂದೂ ಒಕ್ಕೂಟ ಆರೋಪಿಸಿದೆ.

ಗುವಾಹಟಿ: ಮಹಾಮಾರಿ ಕೊರೋನಾ ಲಾಕ್ಡೌನ್ ಸಮಯದಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಕಿರುಕುಳ ಹೆಚ್ಚಾಗಿದೆ ಎಂದು ವಿಶ್ವ ಹಿಂದೂ ಒಕ್ಕೂಟ ಆರೋಪಿಸಿದೆ.
ಕಳೆದ ತಿಂಗಳಲ್ಲಿ ಅಂಗಡಿಗಳ ಲೂಟಿ, ಉದ್ಯಮಿ ಕೊಲೆ, ಭೂಕಬಳಿಕೆ, ದೇವಾಲಯಗಳ ನೆಲಸಮ ಮತ್ತು ವಿಗ್ರಹಗಳ ಧ್ವಂಸ, ದೇಶ ತೊರೆಯುವಂತೆ ಹಿಂದೂ ಕುಟುಂಬಗಳಿಗೆ ಒತ್ತಾಯ. ಇನ್ನು ಮಹಿಳೆಯರು, ಹೆಣ್ಣು ಮಕ್ಕಳನ್ನು ಅಪಹರಿಸಿ ಅತ್ಯಾಚರಿಸುತ್ತಿದ್ದಾರೆ ಎಂದು ಫೆಡರೇಶನ್ ಗಂಭೀರ ಆರೋಪ ಮಾಡಿದೆ.
ಏಪ್ರಿಲ್ ನಲ್ಲಿ ಹಿಂದೂಗಳ 12 ಅಂಗಡಿಗಳನ್ನು ಕೊಳ್ಳೆ ಹೊಡೆದಿದ್ದಾರೆ. ಇಬ್ಬರು ಉದ್ಯಮಿಗಳ ಬರ್ಬರ ಹತ್ಯೆ, 307 ಏಕರೆಯಷ್ಟು ಹಿಂದೂಗಳ ಭೂಮಿಯನ್ನು ಸ್ಥಳೀಯ ರೌಡಿಗಳಿಂದ ಕಬ್ಜ. ಎರಡು ದೇವಾಲಯಗಳ ನೆಲಸಮ, ವಿಗ್ರಹಗಳ ಧ್ವಂಸ, 21 ಹಿಂದೂ ಕುಟಂಬಗಳನ್ನು ಬಲವಂತವಾಗಿ ದೇಶದಿಂದ ಹೊರದಬ್ಬಲಾಗಿದೆ ಮತ್ತು 14 ಕುಟುಂಬಸ್ಥರು ದೇಶವನ್ನು ತೊರೆದಿದ್ದಾರೆ ಎಂದು ಫೆಡರೇಶನ್ ಆರೋಪಿಸಿದೆ.
ಏಪ್ರಿಲ್ ನಲ್ಲಿ ನಾಲ್ಕು ಹಿಂದೂ ಹುಡುಗಿಯರನ್ನು ಅಪಹರಿಸಲಾಗಿದ್ದು ಇತರ ಆರು ಹಿಂದೂ ಹುಡುಗಿಯರು ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ಮಾಡಲಾಗಿದೆ. ಹತ್ತು ಮಂದಿಯನ್ನು ಅತ್ಯಾಚಾರಕ್ಕೆ ಯತ್ನಿಸಲಾಗಿದ್ದು ಮೂವರು ಹಿಂದೂ ಹುಡುಗಿಯರನ್ನು ಇಸ್ಲಾಂಗೆ ಮತಾಂತರಗೊಳಿಸಲಾಗಿದೆ ಎಂದು ಹೇಳಿದೆ.
ಬಾಂಗ್ಲಾದೇಶದಲ್ಲಿ ದಿನದಿಂದ ದಿನಕ್ಕೆ ಮಾನವ ಹಕ್ಕುಗಳ ಪರಿಸ್ಥಿತಿ ಹದಗೆಡುತ್ತಿದೆ ಆದರೆ ದುರದೃಷ್ಟವಶಾತ್ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ಫೆಡರೇಶನ್ ವಿಷಾದ ವ್ಯಕ್ತಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


