'ಮೋದಿಗೆ ಅಮೆರಿಕ ಬೇಕಿಲ್ಲ, ಆದರೆ ಅಮೆರಿಕಕ್ಕೆ ಮೋದಿ ಬೇಕು; ನಿಮ್ಮನ್ನು ಬಳಸಿಕೊಂಡು ಕೈ ಬಿಡುತ್ತಾರೆ': ಅಭಿಜಿತ್ ದೀಪ್ಕೆಗೆ ಹಾಲಿವುಡ್ ಗಾಯಕಿ ಎಚ್ಚರಿಕೆ
ಭಾರತದಲ್ಲಿ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ವಿರುದ್ಧ ತಮ್ಮ ಸರಣಿ ಟ್ವೀಟ್ ವಾರ್ ಮುಂದುವರೆಸಿರುವ ಹಾಲಿವುಡ್ ಗಾಯಕಿ ಮೇರಿ ಮೆಲ್ಬಿನ್, 'ಅಮೆರಿಕದ ದಾನಿಗಳು ತಮ್ಮ ಉದ್ದೇಶ ಈಡೇರದಿದ್ದರೆ ದೀಪ್ಕೆಯನ್ನು ಕೈಬಿಡಲಿದ್ದಾರೆ'..

ವಾಷಿಂಗ್ಟನ್: ಭಾರತದಲ್ಲಿ ಪ್ರತಿಭಟನೆಗಳನ್ನು ಮುನ್ನಡೆಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಗೆ ಅಮೆರಿಕ ಮೂಲದ ದಾನಿಗಳಿಂದ ಹಣಕಾಸು ನೆರವು ದೊರೆಯುತ್ತಿದೆ ಎಂಬ ಆರೋಪ ಮಾಡಿದ್ದ ಅಮೆರಿಕದ ಗಾಯಕಿ ಇದೀಗ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆಗೂ ಎಚ್ಚರಿಕೆ ನೀಡಿದ್ದು, ಅವರು ನಿಮ್ಮನ್ನು ಹಾಟ್ ಕೇಕ್ ನಂತೆ ಬಳಸಿಕೊಂಡು ಕೈ ಬಿಡುತ್ತಾರೆ ಎಂದು ಎಚ್ಚರಿಸಿದ್ದಾರೆ.
ಭಾರತದಲ್ಲಿ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ವಿರುದ್ಧ ತಮ್ಮ ಸರಣಿ ಟ್ವೀಟ್ ವಾರ್ ಮುಂದುವರೆಸಿರುವ ಹಾಲಿವುಡ್ ಗಾಯಕಿ ಮೇರಿ ಮೆಲ್ಬಿನ್, 'ಅಮೆರಿಕದ ದಾನಿಗಳು ತಮ್ಮ ಉದ್ದೇಶ ಈಡೇರದಿದ್ದರೆ ದೀಪ್ಕೆಯನ್ನು ಕೈಬಿಡಲಿದ್ದಾರೆ' ಎಂದು ಎಚ್ಚರಿಸಿದ್ದಾರೆ.
ಬುಧವಾರ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮಿಲ್ಬೆನ್, 'ನೀವು ಗುರಿ ತಲುಪುವಲ್ಲಿ ಯಶಸ್ವಿಯಾಗದಿದ್ದರೆ ಅಮೆರಿಕದ ದಾನಿಗಳು ನಿಮ್ಮನ್ನು ಕ್ಷಣಾರ್ಧದಲ್ಲಿ ಕೈಬಿಡುತ್ತಾರೆ.. ” ಎಂದು ಮಿಲ್ಬೆನ್ ದೀಪ್ಕೆಗೆ ಎಚ್ಚರಿಕೆ ನೀಡಿದ್ದಾರೆ.
ವಿದೇಶಿ ಹಣಕಾಸು ನೆರವಿನ ಬಗ್ಗೆ ಮಿಲ್ಬೆನ್ ಆರೋಪವೇನು?
ಇದಕ್ಕೂ ಮೊದಲು, ಪ್ರಧಾನಿ ಮೋದಿ ಅವರ ನಾಯಕತ್ವವನ್ನು ವಿರೋಧಿಸುವ ಅಮೆರಿಕ ಮೂಲದ ದಾನಿಗಳು ದೀಪ್ಕೆ ಮತ್ತು ಅವರ ಪಕ್ಷಕ್ಕೆ ಹಣಕಾಸು ನೆರವು ನೀಡುತ್ತಿದ್ದಾರೆ ಎಂದು ಮಿಲ್ಬೆನ್ ಆರೋಪಿಸಿದ್ದರು.
ಜಾಗತಿಕ ಮಟ್ಟದಲ್ಲಿ ಕೆಲವು ದಾನಿಗಳು ಸಂಪ್ರದಾಯವಾದಿ ನಾಯಕರನ್ನು ಗುರಿಯಾಗಿಸಿಕೊಂಡು, ಅಮೆರಿಕದಲ್ಲಿ ಶಿಕ್ಷಣ ಪಡೆದವರನ್ನು ಗುರುತಿಸಿ, ಅವರನ್ನು ತೀವ್ರಗೊಳಿಸಿ, ತಮ್ಮ ದೇಶಗಳಿಗೆ ಮರಳಿದ ಬಳಿಕ ಅಶಾಂತಿ ಸೃಷ್ಟಿಸಲು ಹಣಕಾಸು ನೆರವು ನೀಡುತ್ತಾರೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.
“ಕೆಲವು ದಾನಿಗಳು ಜಗತ್ತಿನಾದ್ಯಂತ ಇದೇ ಮಾದರಿಯನ್ನು ಅನುಸರಿಸುತ್ತಿದ್ದಾರೆ. ಸಂಪ್ರದಾಯವಾದಿ ನಾಯಕರನ್ನು ಗುರಿಯಾಗಿಸಿಕೊಂಡು, ಆ ದೇಶದ ಅಮೆರಿಕದಲ್ಲಿ ಶಿಕ್ಷಣ ಪಡೆದ ವ್ಯಕ್ತಿಗಳನ್ನು ಗುರುತಿಸಿ, ಅವರನ್ನು ತೀವ್ರಗೊಳಿಸಿ, ದೇಶಕ್ಕೆ ಮರಳಿಸಿ ಗೊಂದಲ ಮತ್ತು ಅಶಾಂತಿ ಸೃಷ್ಟಿಸಲು ಹಣ ನೀಡುತ್ತಾರೆ. ಇಂತಹ ಪ್ರಯತ್ನಗಳು ಯಶಸ್ವಿಯಾಗದಿದ್ದರೂ ದೇಶದ ಅಭಿವೃದ್ಧಿ ಮತ್ತು ಆಡಳಿತದ ಮೇಲೆ ಪರಿಣಾಮ ಬೀರುತ್ತವೆ” ಎಂದು ಮಿಲ್ಬೆನ್ ಆರೋಪಿಸಿದ್ದಾರೆ.
'ಭಾರತೀಯರು ಮೌನವಾಗಿರಬಾರದು'
ಯುವ ಭಾರತೀಯರು ಮೌನವಾಗಿರಬಾರದು ಎಂದು ಹೇಳಿರುವ ಮಿಲ್ಬೆನ್, ಸಿಜೆಪಿ ವಿರುದ್ಧ ಶಾಂತಿಯುತ ಪ್ರತಿಭಟನೆಗಳನ್ನು ಸಂಘಟಿಸುವಂತೆ ಕರೆ ನೀಡಿದ್ದಾರೆ. ಭಾರತದಲ್ಲಿ ಹುಟ್ಟಿ, ಬೆಳೆದು, ಇಲ್ಲಿಯೇ ಶಿಕ್ಷಣ ಪಡೆದವರು ದೇಶದ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ಕಾಪಾಡಲು ಮುಂದೆ ಬರಬೇಕು ಎಂಬುದು ಅವರ ನಿಲುವಾಗಿದೆ.
‘ಭಾರತದ ಆಂತರಿಕ ವಿಚಾರದಲ್ಲಿ ವಿದೇಶಿಗರ ಹಸ್ತಕ್ಷೇಪವೇಕೆ?’: ದೀಪ್ಕೆ ತಿರುಗೇಟು
ಇನ್ನು ಮಿಲ್ಬೆನ್ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ಅಭಿಜೀತ್ ದೀಪ್ಕೆ, ಭಾರತದ ಆಂತರಿಕ ವಿಚಾರಗಳ ಕುರಿತು ಅಮೆರಿಕದ ಪ್ರಜೆಯೊಬ್ಬರು ಏಕೆ ಮಾತನಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ದೇಶದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಭಾರತಕ್ಕೆ ಹೊರಗಿನವರ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
“ಭಾರತದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಲು ವಿದೇಶಿ ಪ್ರಜೆಗಳಿಗೆ ಅಧಿಕಾರ ಕೊಟ್ಟವರು ಯಾರು? ನಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳುವ ಸಾಮರ್ಥ್ಯ ನಮಗಿದೆ. ನಮ್ಮ ದೇಶದ ವ್ಯವಹಾರಗಳಲ್ಲಿ ಹೊರಗಿನವರ ಹಸ್ತಕ್ಷೇಪ ನಮಗೆ ಬೇಕಿಲ್ಲ” ಎಂದು ದೀಪ್ಕೆ ತಿರುಗೇಟು ನೀಡಿದ್ದಾರೆ.
‘ಮೋದಿ ಅವರಿಗೆ ಅಮೆರಿಕದ ಬೆಂಬಲ ಬೇಕಿಲ್ಲ’
ಇನ್ನು ದೀಪ್ಕೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮೇರಿ ಮಿಲ್ಬೆನ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕದ ಬೆಂಬಲದ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಭಾರತದ ಜನರ ಬೆಂಬಲ ಮೋದಿ ಅವರಿಗಿದೆ ಎಂದು ಪ್ರತಿಪಾದಿಸಿರುವ ಅವರು, ಪ್ರಧಾನಿಯಾಗಿ ಮೂರು ಸತತ ಅವಧಿಗೆ ಆಯ್ಕೆಯಾಗಿರುವುದನ್ನೂ ಉಲ್ಲೇಖಿಸಿದ್ದಾರೆ.
“ಪ್ರಧಾನಿಗೆ ಅಮೆರಿಕದ ಬೆಂಬಲದ ಅಗತ್ಯವಿಲ್ಲ. 150 ಕೋಟಿ ಭಾರತೀಯರ ಬೆಂಬಲ ಅವರಿಗಿದೆ. ಕಳೆದ 25 ವರ್ಷಗಳಿಂದ ಅವರು ದೇಶದ ಸಾರ್ವಜನಿಕ ಜೀವನದಲ್ಲಿದ್ದಾರೆ; 12 ವರ್ಷಗಳಿಂದ ಪ್ರಧಾನಿಯಾಗಿದ್ದಾರೆ ಮತ್ತು ಸತತ ಮೂರು ಅವಧಿಗೆ ಆಯ್ಕೆಯಾಗಿದ್ದಾರೆ. 2029ರಲ್ಲಿಯೂ ಇದೇ ಮುಂದುವರಿಯಲಿದೆ ಎಂಬುದು ಸತ್ಯ” ಎಂದು ಮಿಲ್ಬೆನ್ ತಮ್ಮ ಪೋಸ್ಟ್ನಲ್ಲಿ ಹೇಳಿದ್ದಾರೆ.
ಅಂತೆಯೇ ದೀಪ್ಕೆ ವಿರುದ್ಧ ಮತ್ತಷ್ಟು ವಾಗ್ದಾಳಿ ನಡೆಸಿದ ಅವರು, “ಕಾನೂನುಬಾಹಿರತೆ ಎಂದಿಗೂ ಗೆಲ್ಲುವುದಿಲ್ಲ. ಅಮೆರಿಕದಲ್ಲಿ ಪಡೆದ ನಿಮ್ಮ ಶಿಕ್ಷಣ ಮತ್ತು ಪ್ರತಿಭೆಯನ್ನು ಒಳ್ಳೆಯ ಕೆಲಸಗಳಿಗೆ ಬಳಸಿ” ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಅವರೊಂದಿಗೆ ಕುಳಿತು ಚರ್ಚಿಸಿ, ಭಾರತದ ಪ್ರಗತಿಗೆ ಪೂರಕವಾದ ಧ್ವನಿಯಾಗುವಂತೆಯೂ ದೀಪ್ಕೆಗೆ ಸಲಹೆ ನೀಡಿದ್ದಾರೆ.
“ಸರಿಯಾದದ್ದನ್ನು ಮಾಡಲು ನಿಮಗಿರುವ ಧೈರ್ಯ ನಿಜವಾಗಿಯೂ ಇದೆಯೇ ಎಂಬುದು ನಿಮ್ಮ ಮುಂದಿನ ನಡೆಗಳಲ್ಲಿ ಗೊತ್ತಾಗುತ್ತದೆ” ಎಂದೂ ಅವರು ಹೇಳಿದ್ದಾರೆ.
ಇಷ್ಟಕ್ಕೂ ಯಾರು ಈ ಮೇರಿ ಮಿಲ್ಬೆನ್?
ಮೇರಿ ಮಿಲ್ಬೆನ್ ಆಫ್ರಿಕನ್-ಅಮೆರಿಕನ್ ಗಾಯಕಿ ಮತ್ತು ನಟಿ. ಭಾರತದ ರಾಷ್ಟ್ರಗೀತೆ ‘ಜನ ಗಣ ಮನ’ ಹಾಗೂ ಭಕ್ತಿಗೀತೆ ‘ಓಂ ಜೈ ಜಗದೀಶ್ ಹರೇ’ ಹಾಡುವ ಮೂಲಕ ಅವರು ಭಾರತದಲ್ಲಿ ಗುರುತಿಸಿಕೊಂಡಿದ್ದಾರೆ. 2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಭಾರತದ ರಾಷ್ಟ್ರಗೀತೆಯನ್ನು ಹಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




