ಪರಮಾಣು ಶಕ್ತಿ ಭಾರತಕ್ಕೆ ಈಗಲೂ ಸವಾಲಾಗಿದೆ: ಪಿಎಂ ಮೋದಿ
ಭಾರತವು ಪರಮಾಣು ಪೂರೈಕೆದಾರರ ಗುಂಪು(ನ್ಯೂಕ್ಲಿಯರ್ ಸಪ್ಲೇಯರ್ಸ್ ಗ್ರೂಪ್-ಎನ್.ಎಸ್.ಜಿ.) ಸದಸ್ಯ ರಾಷ್ಟ್ರವಲ್ಲ ಹಾಗಾಗಿ ಪರಮಾಣು ಶಕ್ತಿಯನ್ನು ಉತ್ಪಾದಿಸಲು ಅಗತ್ಯವಾದ ಇಂಧನ ಪಡೆಯುವುದಕ್ಕೆ ಅಡ್ಡಿಯಾಗುತ್ತಿದೆ ಒಂದೊಮ್ಮೆ ಈ ಸಮಸ್ಯೆ ಬಗೆಹರಿದರೆ ಭಾರತವು ಉಳಿದ ದೇಶಗಳಿಗೆ ಮಾದರಿಯಾಗುವುದು ಖಚಿತ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನ್ಯೂಯಾರ್ಕ್: ಭಾರತವು ಪರಮಾಣು ಪೂರೈಕೆದಾರರ ಗುಂಪು(ನ್ಯೂಕ್ಲಿಯರ್ ಸಪ್ಲೇಯರ್ಸ್ ಗ್ರೂಪ್-ಎನ್.ಎಸ್.ಜಿ.) ಸದಸ್ಯ ರಾಷ್ಟ್ರವಲ್ಲ ಹಾಗಾಗಿ ಪರಮಾಣು ಶಕ್ತಿಯನ್ನು ಉತ್ಪಾದಿಸಲು ಅಗತ್ಯವಾದ ಇಂಧನ ಪಡೆಯುವುದಕ್ಕೆ ಅಡ್ಡಿಯಾಗುತ್ತಿದೆ ಒಂದೊಮ್ಮೆ ಈ ಸಮಸ್ಯೆ ಬಗೆಹರಿದರೆ ಭಾರತವು ಉಳಿದ ದೇಶಗಳಿಗೆ ಮಾದರಿಯಾಗುವುದು ಖಚಿತ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪರಮಾಣು ಶಕ್ತಿ ಎನ್ನುವುದು ನಾವಿಂದಿಗೂ ಎದುರಿಸುತ್ತಿರುವ ಸವಾಲು ಎಂದು ಮೋದಿ ಹೇಳಿದ್ದಾರೆ.
"ನಾವು ಪರಮಾಣುಪೂರೈಕೆದಾರ ರಾಷ್ಟ್ರಗಳ ಗುಂಪಿನ ಸದಸ್ಯರಲ್ಲ ಹಾಗಾಗಿ ಪರಮಾಣು ಶಕ್ತಿಯನ್ನು ಉತ್ಪಾದಿಸಲು ಅಗತ್ಯವಾದ ಇಂಧನವನ್ನು ಪಡೆಯುವುದು ನಮಗೆ ಕಠಿಣವಾಗಿದೆ"ನ್ಯೂಯಾರ್ಕ್‌ನ ಬ್ಲೂಮ್‌ಬರ್ಗ್ ಗ್ಲೋಬಲ್ ಬಿಸಿನೆಸ್ ಫೋರಂನಲ್ಲಿ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಮೋದಿ ನುಡಿದರು.
ಅದೇ ವೇಳೆ "ಇದೇನಾದರೂ ಪರಿಹಾರವಾದಲ್ಲಿ ದೇಶವು ಈ ಕ್ಷೇತ್ರದಲ್ಲಿ ವಿಶ್ವದ ಇತರೆ ರಾಷ್ಟ್ರಗಳಿಗೆ ಮಾದರಿಯಾಗಲಿದೆ. ಜಾಗತಿಕ ಪರಮಾಣು ವ್ಯಾಪಾರವನ್ನು ನಿಯಂತ್ರಿಸುವ 48 ಸದಸ್ಯರ ಗುಂಪಿಗೆ ಸೇರುವ ಭಾರತದ ಪ್ರಯತ್ನಕ್ಕೆ ಚೀನಾ ಪದೇ ಪದೇ ಅಡ್ಡಿಪಡಿಸಿದೆ.
ಭಾರತವು ಮೇ 2016 ರಲ್ಲಿ ಎನ್‌ಎಸ್‌ಜಿ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿದಾಗಿನಿಂದಲೂ, ಪ್ರಸರಣ ರಹಿತ ಒಪ್ಪಂದಕ್ಕೆ (ಎನ್‌ಪಿಟಿ) ಸಹಿ ಹಾಕಿದ ದೇಶಗಳಿಗೆ ಮಾತ್ರ ಸಂಸ್ಥೆಗೆ ಪ್ರವೇಶಿಸಲು ಅವಕಾಶ ನೀಡಬೇಕು ಎಂದು ಚೀನಾ ಒತ್ತಾಯಿಸುತ್ತಿದೆ. ಭಾರತ ಎನ್‌ಪಿಟಿಗೆ ಸಹಿ ಹಾಕಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


