ವಿದೇಶ

ನಂಬರ್ 1 ನೀಲಿ ಚಿತ್ರ ನಟಿಯಾಗಿದ್ದಾಗಲು ನಾನು ದುಡಿದದ್ದು ಇಷ್ಟೆ: ಮಿಯಾ ಖಲೀಫಾ

ಇವತ್ತು ನಾನು ಮಾಜಿ ಪೋರ್ನ್ ಸ್ಟಾರ್ ಆಗಿದ್ದೇನೆ. ಜಗತ್ತಿನಲ್ಲೇ ಅತಿ ಹೆಚ್ಚು ಮಂದಿ ವೀಕ್ಷಣೆ ಮಾಡಿದ ನೀಲಿ ಚಿತ್ರಗಳ ತಾರೆ ಎಂಬ ಖ್ಯಾತಿ ಗಳಿಸಿದ್ದರೂ ನಾನು ನನ್ನ ವೃತ್ತಿ ಜೀವನದಲ್ಲಿ ಗಳಿಸಿದ ಹಣ ಇಷ್ಟೆ ಎಂದು ಹೇಳಿಕೊಂಡಿದ್ದಾರೆ.

ನಂಬರ್ 1 ನೀಲಿ ಚಿತ್ರ ನಟಿಯಾಗಿದ್ದಾಗಲು ನಾನು ದುಡಿದದ್ದು ಇಷ್ಟೆ: ಮಿಯಾ ಖಲೀಫಾ
ಮಿಯಾ ಖಲೀಫಾ
Published On :

ಇವತ್ತು ನಾನು ಮಾಜಿ ಪೋರ್ನ್ ಸ್ಟಾರ್ ಆಗಿದ್ದೇನೆ. ಜಗತ್ತಿನಲ್ಲೇ ಅತಿ ಹೆಚ್ಚು ಮಂದಿ ವೀಕ್ಷಣೆ ಮಾಡಿದ ನೀಲಿ ಚಿತ್ರಗಳ ತಾರೆ ಎಂಬ ಖ್ಯಾತಿ ಗಳಿಸಿದ್ದರೂ ನಾನು ನನ್ನ ವೃತ್ತಿ ಜೀವನದಲ್ಲಿ ಗಳಿಸಿದ ಹಣ ಇಷ್ಟೆ ಎಂದು ಹೇಳಿಕೊಂಡಿದ್ದಾರೆ. 

ನಾನು ಜಗತ್ತಿನ ನಂಬರ್ 1 ನೀಲಿ ನಟಿಯಾಗಿದ್ದರೂ ನನ್ನ ವೃತ್ತಿ ಜೀವನದಲ್ಲಿ ನಾನು ದುಡಿದಿದ್ದು ಬರೀ 8 ಲಕ್ಷ ರುಪಾಯಿ ಅಷ್ಟೇ ಎಂದು ಹೇಳಿದ್ದಾರೆ. ಎಲ್ಲರೂ ನಾನು ಲಕ್ಷಗಟ್ಟಲೆ ಹಣ ಸಂಪಾದಿಸುತ್ತೇನೆ ಎಂದು ಭಾವಿಸುತ್ತಾರೆ. ಅದು ಸುದ್ಧ ಸುಳ್ಳು ಎಂದು ಮಿಯಾ ಹೇಳಿಕೊಂಡಿದ್ದಾರೆ.

ನಾನು ಕಡಿಮೆ ನೀಲಿ ಚಿತ್ರಗಳಲ್ಲಿ ಅಭಿನಯಿಸಿದ್ದೆ. ಆ ವೃತ್ತಿಯಿಂದ ಹೊರಬಂದ ಮೇಲೆ ನನ್ನ ವಿಡಿಯೋಗಳು ಸಾಕಷ್ಟು ವೈರಲ್ ಆಗಿವೆ. ಹೀಗಾಗಿ ಜನ ನಾನು ಇನ್ನು ನೀಲಿ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದೇನೆ ಎಂದು ಭಾವಿಸಿದ್ದಾರೆ ಎಂದರು.

ನೀಲಿ ಚಿತ್ರಗಳಿಂದ ಹೊರ ಬಂದ ನಂತರ ನಾನು ಬೇರೆ ಕೆಲಸ ಹುಡುಕಲು ಸಾಕಷ್ಟು ಕಷ್ಟಪಟ್ಟಿದ್ದೇನೆ. ಆದರೆ ಯಾರು ನನಗೆ ಕೆಲಸ ನೀಡಲು ಮುಂದಾಗುತ್ತಿರಲ್ಲಿ. ಈ ಮಧ್ಯೆ ನನಗೆ ರಾಬರ್ಟ್ ಸ್ಯಾಂಡ್ ಬರ್ಗ್ ಪರಿಚಯವಾಯಿತು. ಇಂದು ನಾನು ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಸ್ವತಂತ್ರ ಬದುಕು ಕಾಣುವ ಕನಸು ಹೊತ್ತಿದ್ದೇನೆ ಎಂದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.