ಫ್ರಾನ್ಸ್‌ನಲ್ಲಿ ಗಲಭೆ ಉಲ್ಬಣ: ತುರ್ತು ಪರಿಸ್ಥಿತಿ ಹೇರಲು ಮ್ಯಾಕ್ರನ್ ಸರ್ಕಾರದ ಚಿಂತನೆ
ಫ್ರಾನ್ಸ್ ನಲ್ಲಿ ಹಲವು ವರ್ಷಗಳ ಬಳಿಕ ನಡೆಯುತ್ತಿರುವ ಅತಿ ದೊಡ್ಡ ಗಲಭೆ ಉಲ್ಬಣಗೊಂಡ ಬೆನ್ನಲ್ಲೇ ಫ್ರಾನ್ಸ್ ನಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಹೇರುವ ಕುರಿತು ಫ್ರಾನ್ಸ್ ಸರ್ಕಾರ ಚಿಂತನೆಯಲ್ಲಿ ತೊಡಗಿದೆ ಎನ್ನಲಾಗುತ್ತಿದೆ.

Published On :
ಪ್ಯಾರಿಸ್: ಫ್ರಾನ್ಸ್ ನಲ್ಲಿ ಹಲವು ವರ್ಷಗಳ ಬಳಿಕ ನಡೆಯುತ್ತಿರುವ ಅತಿ ದೊಡ್ಡ ಗಲಭೆ ಉಲ್ಬಣಗೊಂಡ ಬೆನ್ನಲ್ಲೇ ಫ್ರಾನ್ಸ್ ನಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಹೇರುವ ಕುರಿತು ಫ್ರಾನ್ಸ್ ಸರ್ಕಾರ ಚಿಂತನೆಯಲ್ಲಿ ತೊಡಗಿದೆ ಎನ್ನಲಾಗುತ್ತಿದೆ.
ಗಲಭೆ ನಿಯಂತ್ರಿಸಲು ಫ್ರೆಂಚ್ ಸರ್ಕಾರ ತುರ್ತು ಪರಿಸ್ಥಿತಿ ಹೇರಲು ಚಿಂತಿಸುತ್ತಿದೆ. ಗಲಭೆ ನಡೆಸುತ್ತಿರುವವರೊಂದಿಗೆ ಮಾತುಕತೆಗೆ ಸರಕಾರ ಸಿದ್ಧವಿದೆ ಎಂದು ಹೇಳಿದರೂ, ಸರ್ಕಾರದ ನೀತಿಯಲ್ಲಿ ಬದಲಾವಣೆಯಿಲ್ಲ ಎಂದು ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಸರ್ಕಾರದ ವಕ್ತಾರರೊಬ್ಬರು ಭಾನುವಾರ ಹೇಳಿದ್ದಾರೆ. ಸೆಂಟ್ರಲ್ ಪ್ಯಾರಿಸ್ ಸುತ್ತಮುತ್ತ ಮುಸುಕುಧಾರಿ, ಕಪ್ಪು ಬಟ್ಟೆ ಹಾಕಿಕೊಂಡಿರುವ ಜನರ ಗುಂಪು ಕಾರುಗಳಿಗೆ, ಕಟ್ಟಡಗಳಿಗೆ ಬೆಂಕಿ ಹಚ್ಚುವುದು, ಅಂಗಡಿಗಳನ್ನು ಲೂಟಿ ಮಾಡುವುದು, ಕಿಟಕಿಯ ಗಾಜು ಹೊಡೆಯುವುದು ಮುಂತಾದ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಫ್ರಾನ್ಸ್ ರಾಜಧಾನಿಯಲ್ಲಿ 1968ರ ಬಳಿಕ ನಡೆಯುತ್ತಿರುವ ಗಲಭೆ ಇದಾಗಿದ್ದು, ಅತಿ ದೊಡ್ಡ ಪ್ರಮಾಣದಲ್ಲಿ ಅಶಾಂತಿಯುಂಟಾಗಿದೆ. ಅಲ್ಲದೆ, ಮ್ಯಾಕ್ರನ್ ಅಧ್ಯಕ್ಷನಾದ ಬಳಿಕ 18 ತಿಂಗಳಲ್ಲಿ ನಡೆಯುತ್ತಿರುವ ಅತಿ ದೊಡ್ಡ ಗಲಭೆ ಇದಾಗಿದೆ ಎನ್ನಲಾಗಿದೆ.
ಅಲ್ಲದೆ, ಫ್ರಾನ್ಸ್ ನ ಈಶಾನ್ಯ ಭಾಗ, ಪಶ್ಚಿಮ, ದಕ್ಷಿಣ ಸೇರಿ ಹಲವು ನಗರಗಳಲ್ಲಿ ಗಲಾಟೆಗಳು ಹೆಚ್ಚಾಗಿದೆ. ಹೀಗಾಗಿ, ಇಂತಹ ಘಟನೆಗಳು ಮರುಕಳಿಸದಂತೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ವಕ್ತಾರೆ ಯೂರೋಪ್ 1 ರೇಡಿಯೋಗೆ ತಿಳಿಸಿದ್ದಾರೆ. ನವೆಂಬರ್ 17 ರಂದು ಇದ್ದಕ್ಕಿದ್ದಂತೆ ಗಲಭೆ ಶುರುವಾಗಿದ್ದು, ಸಾಮಾಜಿಕ ಜಾಲತಾಣದ ಮೂಲಕ ಇದು ಹೆಚ್ಚಾಗಿದೆ. ಪ್ರತಿಭಟನಾಕಾರರು ಫ್ರಾನ್ಸ್ ನಾದ್ಯಂತ ರಸ್ತೆ ತಡೆ ನಡೆಸಿದ್ದಾರೆ. ಜತೆಗೆ, ಶಾಪಿಂಗ್ ಮಾಲ್, ಕಾರ್ಖಾನೆ ಹಾಗೂ ಕೆಲವು ತೈಲ ಡಿಪೋಗಳಿಗೆ ವಾಹನಗಳು ಹೋಗದಂತೆ ತಡೆಯುತ್ತಿರುವುದು ಕಂಡುಬಂದಿದೆ.
ಹೀಗಾಗಿ, ಮ್ಯಾಕ್ರನ್ ಸರ್ಕಾರ ಫ್ರಾನ್ಸ್ ಕಾಲಮಾನ ಭಾನುವಾರ ತಡವಾಗಿ ತುರ್ತು ಸಭೆ ನಡೆಸಲಿದ್ದಾರೆ. ಫ್ರಾನ್ಸ್ ಪ್ರಧಾನಿ, ಆಂತರಿಕ ಸಚಿವರೊಂದಿಗೆ ಗಲಭೆ ನಿಯಂತ್ರಿಸುವ ವಿಚಾರದ ಬಗ್ಗೆ ಚರ್ಚೆ ನಡೆಸಲಿದ್ದು, ಅವರೊಂದಿಗೆ ಮಾತುಕತೆ ನಡೆಸುವುದು ಹಾಗೂ ತುರ್ತು ಪರಿಸ್ಥಿತಿ ಹೇರಿಕೆ ಬಗ್ಗೆಯೂ ಮಾತನಾಡಲಿದ್ದಾರೆ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ. ಆದರೆ, ಸರ್ಕಾರದ ನೀತಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


