ಉತ್ತರ ಕೊರಿಯಾ ವಿರುದ್ಧ ಅಮೆರಿಕದ ವಾಣಿಜ್ಯ ನಿರ್ಬಂಧ ಹೇರಿಕೆ ನಿರ್ಧಾರ ಸರಿಯಲ್ಲ: ಚೀನಾ
ಅಣ್ವಸ್ತ್ರ ಪರೀಕ್ಷೆ ಮಾಡುವ ಮೂಲಕ ಇಡೀ ವಿಶ್ವದ ಕೆಂಗಣ್ಣಿಗೆ ಗುರಿಯಾಗಿರುವ ಉತ್ತರ ಕೊರಿಯಾ ಬೆನ್ನಿಗೆ ಮತ್ತೆ ಚೀನಾ ನಿಂತಿದ್ದು, ಉತ್ತರ ಕೊರಿಯಾದ ಮೇಲೆ ವಾಣಿಜ್ಯ ನಿಷೇಧ ಹೇರುವ ಅಮೆರಿಕ ಕ್ರಮ ಸರಿಯಲ್ಲ ಎಂದು ಹೇಳಿದೆ.

Published On :
ಬೀಜಿಂಗ್: ಅಣ್ವಸ್ತ್ರ ಪರೀಕ್ಷೆ ಮಾಡುವ ಮೂಲಕ ಇಡೀ ವಿಶ್ವದ ಕೆಂಗಣ್ಣಿಗೆ ಗುರಿಯಾಗಿರುವ ಉತ್ತರ ಕೊರಿಯಾ ಬೆನ್ನಿಗೆ ಮತ್ತೆ ಚೀನಾ ನಿಂತಿದ್ದು, ಉತ್ತರ ಕೊರಿಯಾದ ಮೇಲೆ ವಾಣಿಜ್ಯ ನಿಷೇಧ ಹೇರುವ ಅಮೆರಿಕ ಕ್ರಮ ಸರಿಯಲ್ಲ ಎಂದು ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡೆ ಅನ್ಯಾಯಯುತವಾಗಿದ್ದು, ಪ್ರಸ್ತುತ ಪರಿಸ್ಥಿತಿ ಇನ್ನೂ ನಮ್ಮ ನಿಯಂತ್ರಣದಲ್ಲಿಯೇ ಇದೆ. ಸಮಸ್ಯೆ ಪರಿಹಾರಕ್ಕೆ ನಾವು ಯತ್ನಿಸುತ್ತಿದ್ದೇವೆ. ಹೀಗಿರುವಾಗ ಉತ್ತರ ಕೊರಿಯಾ ಮೇಲೆ ವಾಣಿಜ್ಯ ನಿರ್ಬಂಧ ಹೇರುವ ಅಮೆರಿಕ ನಿರ್ಧಾರ ಸರಿಯಲ್ಲ ಎಂದು ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ಗೆಂಗ್ ಶಾಂಗ್ ಹೇಳಿದ್ದಾರೆ. ಅಮೆರಿಕದ ದುಡುಕಿನ ನಿರ್ಧಾರ ಮುಂದೆ ಕಠಿಣ ಸಮಸ್ಯೆಗಳನ್ನು ತಂದೊಡ್ಡಬಹುದು. ಹೀಗಾಗಿ ವಿಶ್ವಸಂಸ್ಥೆ ಅಂತಹ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಹೇಳಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದ ಉತ್ತರ ಕೊರಿಯಾ ವಿರುದ್ಧ ಕಿಡಿಕಾರಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಅಣ್ವಸ್ತ್ರ ಪರೀಕ್ಷೆ ಮೂಲಕ ಉತ್ತರ ಕೊರಿಯಾ ವಿಶ್ವಶಾಂತಿಯ ಭಂಗಕ್ಕೆ ಯತ್ನಿಸುತ್ತಿದೆ. ಹೀಗಾಗಿ ಉತ್ತರ ಕೊರಿಯಾ ವಿರುದ್ಧ ವಾಣಿಜ್ಯ ನಿರ್ಬಂಧ ಹೇರುವಂತೆ ವಿಶ್ವಸಂಸ್ಥೆ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದ್ದರು. ಅಮೆರಿಕದ ಹೇಳಿಕೆ ಬೆನ್ನಲ್ಲೇ ಚೀನಾ ಇದನ್ನು ಅನ್ಯಾಯ ಎಂದು ಹೇಳಿದೆ.
ಉತ್ತರ ಕೊರಿಯಾ ಚೀನಾದ ಪ್ರಮುಖ ವಾಣಿಜ್ಯ ಸ್ನೇಹಿತನಾಗಿದ್ದು, ಒಂದು ವೇಳೆ ಉತ್ತರ ಕೊರಿಯಾ ಮೇಲೆ ವಿಶ್ವ ಸಂಸ್ಥೆ ನಿರ್ಬಂಧ ಹೇರಿದರೆ ಇಡೀ ವಿಶ್ವದಲ್ಲಿ ಉತ್ತರ ಕೊರಿಯಾದೊಂದಿಗೆ ಅತೀ ಪ್ರಮಾಣದ ವಾಣಿಜ್ಯ ಸಂಬಂಧ ಹೊಂದಿರುವ ಪ್ರಮುಖ ದೇಶವಾಗಿರುವ ಚೀನಾ ಮೇಲೆ ಗಂಭೀರ ಪರಿಣಾಮ ಬೀರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Beijingಬೀಜಿಂಗ್ChinaಚೀನಾNorth Koreaಉತ್ತರ ಕೊರಿಯಾDonald Trumpಡೊನಾಲ್ಡ್ ಟ್ರಂಪ್ಅಣ್ವಸ್ತ್ರ ಪರೀಕ್ಷೆNuclear Weapon Test
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


