ವಿದೇಶ

ಬ್ರಿಕ್ಸ್ ವಿಶೇಷ: ಹಿಂದಿ ಚಿತ್ರಗೀತೆ, ಬಾಲಿವುಡ್ ಎಂದರೆ ಈ ಚೀನಾ ಪತ್ರಕರ್ತೆಗೆ ಅಚ್ಚುಮೆಚ್ಚು!

ಚೀನಾದ ಕ್ಸಿಯಾಮೆನ್ ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಸಮಾವೇಶ ವಿವಿಧ ಕಾರಣಗಳಿಂದಾಗಿ ಭಾರಿ ಸುದ್ದಿಗೆ ಕಾರವಾಗಿದ್ದು, ಈ ಪೈಕಿ "ಭಾರತ ಪ್ರೇಮಿ" ಚೀನಾ ಪತ್ರಕರ್ತೆಯಿಂದಾಗಿಯೂ ಸಾಕಷ್ಟು ಸುದ್ದಿಗೆ ಗ್ರಾಸವಾಗುತ್ತಿದೆ.

ಬ್ರಿಕ್ಸ್ ವಿಶೇಷ: ಹಿಂದಿ ಚಿತ್ರಗೀತೆ, ಬಾಲಿವುಡ್ ಎಂದರೆ ಈ ಚೀನಾ ಪತ್ರಕರ್ತೆಗೆ ಅಚ್ಚುಮೆಚ್ಚು!
ಚೀನಾ ಪತ್ರಕರ್ತೆ ತಾಂಗ್ ಯುಂಗೈ
Published On :
ಬೀಜಿಂಗ್: ಚೀನಾದ ಕ್ಸಿಯಾಮೆನ್ ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಸಮಾವೇಶ ವಿವಿಧ ಕಾರಣಗಳಿಂದಾಗಿ ಭಾರಿ ಸುದ್ದಿಗೆ ಕಾರವಾಗಿದ್ದು, ಈ ಪೈಕಿ "ಭಾರತ ಪ್ರೇಮಿ" ಚೀನಾ ಪತ್ರಕರ್ತೆಯಿಂದಾಗಿಯೂ ಸಾಕಷ್ಟು ಸುದ್ದಿಗೆ ಗ್ರಾಸವಾಗುತ್ತಿದೆ.
ಬ್ರಿಕ್ಸ್ ಸಮಾವೇಶದಲ್ಲಿ ಮಾಧ್ಯಮಗಳಿಗೆ ಹಿಂದಿ ಮಾತನಾಡುತ್ತಿದ್ದ ಚೀನಾ ಪತ್ರಕರ್ತೆ ಕಾಣಿಸಿಕೊಂಡಿದ್ದು, ಅವರನ್ನು ಭೇಟಿ ಮಾಡಿದಾಗ ಅವರ ಹಿಂದಿ ಮತ್ತು ಭಾರತ ಪ್ರೇಮ ಬಹಿರಂಗಗೊಂಡಿದೆ. ಈಕೆಯ ಹೆಸರು ತಾಂಗ್  ಯುಂಗೈ.. ಚೀನಾ ರೇಡಿಯೋ ಇಂಟರ್ ನ್ಯಾಷನ್ ಸಂಸ್ಥೆಯಲ್ಲಿನ ಹಿಂದಿ ವಿಭಾಗದಲ್ಲಿ ಈಕೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಬ್ರಿಕ್ಸ್ ಸಮಾವೇಶದ ವರದಿಗಾಗಿ ಈಕೆ ಕ್ಸಿಯಾಮೆನ್ ಗೆ ಆಗಮಿಸಿದ್ದು, ಈ ವೇಳೆ ಭಾರತೀಯರೊಂದಿಗೆ ಈಕೆ  ಹಿಂದಿಯಲ್ಲೇ ಸಂಭಾಷಣೆ ನಡೆಸುತ್ತಿದ್ದರು. ತಾಂಗ್ ಯುಂಗೈ ಅವರ ಹಿಂದಿ ಭಾಷೆ ಮೇಲಿನ ಹಿಡಿತ ಹಾಗೂ ಸ್ಪಷ್ಟ ಉಚ್ಛಾರಣೆ ಅಲ್ಲಿ ನೆರೆದಿದ್ದ ಹಿಂದಿ ಪತ್ರಕರ್ತರಿಗೇ ಅಚ್ಚರಿ ಉಂಟು ಮಾಡಿತ್ತು.
ಈ ಬಗ್ಗೆ ಸುದ್ದಿಸಂಸ್ಥೆಯೊಂದು ತಾಂಗ್ ಯುಂಗೈ ಅವರ ಸಂದರ್ಶನ ಪಡೆದಿದ್ದು, ಈ ವೇಳೆ ತಾಂಗ್ ಯುಂಗೈ ತಮ್ಮ ಭಾರತ ಪ್ರೇಮ ವಿಚಾರದ ಕುರಿತು ಮಾತನಾಡಿದ್ದಾರೆ. "ಮೊದಲಿನಿಂದಲೂ ನಾನು ಭಾರತ ಪ್ರೇಮಿಯಾಗಿದ್ದು,  ಭಾರತ ಬಹು ಸಂಸ್ಕೃತಿ ನನಗೆ ತುಂಬಾ ಇಷ್ಟ. ಬಹುಶಃ ಭಾರತದ ಮೇಲಿನ ಪ್ರೀತಿಯಿಂದಲೇ ಏನೋ ನಾನು ವಿಶ್ವವಿದ್ಯಾಲಯದಲ್ಲಿ ಹಿಂದಿ ಭಾಷೆಯನ್ನು ಆಯ್ಕೆ ಮಾಡಿಕೊಂಡು ಕಲಿತೆ. ಪ್ರತೀ ಭಾರಿ ವಿಮಾನದಲ್ಲಿ ಪ್ರಯಾಣಿಸುವಾಗ  ಭಾರತೀಯರೊಂದಿಗೆ ಪ್ರಯಾಣಿಸಲು ಖುಷಿಯಾಗುತ್ತದೆ. ಭಾರತೀಯರು ಪ್ರಾಮಾಣಿಕರು ಹಾಗೂ ತುಂಬಾ ಒಳ್ಳೆಯವರು. ಇದೇ ಕಾರಣಕ್ಕೆ ಭಾರತ ಮತ್ತು ಭಾರತೀಯರನ್ನು ನಾನು ಗೌರವಿಸುತ್ತೇನೆ. ಭವಿಷ್ಯದಲ್ಲಿ  ಭಾರತೀಯರೊಂದಿಗೆ ಕೂಡಿ ಕೆಲಸ ಮಾಡಲು ಬಯಸುತ್ತೇನೆ ಎಂದು ತಾಂಗ್ ಯುಂಗೈ ಹೇಳಿದ್ದಾರೆ.
ಹಿಂದಿ ಮತ್ತು ಬಾಲಿವುಡ್ ಚಿತ್ರಗಳು ನನ್ನ ಅಚ್ಚು ಮೆಚ್ಚು ಎಂದು ಹೇಳಿರುವ ತಾಂಗ್ ಯುಂಗೈ, ಅಮಿತಾಬ್ ಬಚ್ಚನ್ ಅವರ ಸಾಕಷ್ಟು ಚಿತ್ರಗಳನ್ನು ನಾನು ನೋಡಿದ್ದೇನೆ. ಇತ್ತೀಚೆಗಷ್ಟೇ ಅಮೀರ್ ಖಾನ್ ಅಭಿನಯದ ದಂಗಲ್  ಚಿತ್ರವನ್ನು ನೋಡಿದೆ. ಕೇವಲ ನಾನು ಮಾತ್ರವಲ್ಲ ಬಾಲಿವುಡ್ ಸಿನಿಮಾಗಳಿಗೆ ಚೀನಾದಲ್ಲಿ ಸಾಕಷ್ಟು ಬೇಡಿಕೆ ಇದೆ. ಇತ್ತೀಚೆಗೆ ಬಿಡುಗಡೆಯಾದ ದಂಗಲ್ ಚಿತ್ರದಲ್ಲಿ ಅಮೀರ್ ಖಾನ್ ಆಕರ್ಷಕವಾಗಿ ಏನೂ ಇಲ್ಲ. ಆದರೆ ಚಿತ್ರದಲ್ಲಿನ  ಅವರ ಪಾತ್ರ ಚೀನೀಯರಿಗೆ ತುಂಬಾ ಇಷ್ಟವಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಭಾರತ ಮತ್ತು ಚೀನಾ ದೇಶಗಳ ನಡುವಿನ ಡೋಕ್ಲಾಂ ಗಡಿ ವಿವಾದ ಸಂಬಂಧ ಮಾತನಾಡಿದ ತಾಂಗ್ ಯುಂಗೈ, ಗಡಿ ವಿವಾದ ದೊಡ್ಡ ವಿವಾದವೇನೂ ಅಲ್ಲ. ಎಲ್ಲ ದೇಶಗಳ ನಡುವೆ ಈ ಸಮಸ್ಯೆ ಇದಿದ್ದೇ..ಆದರೆ  ನನಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಮೇಲೆ ವಿಶ್ವಾಸವಿದ್ದು, ಖಂಡಿತಾ ಬ್ರಿಕ್ಸ್ ಸಮಾವೇಶದ ವೇಳೆ ಡೊಕ್ಲಾಂ ಗಡಿ ವಿವಾದವನ್ನು ಬಗೆ ಹರಿಸುತ್ತಾರೆ ಎಂದು ಹೇಳಿದ್ದಾರೆ. ಇದೇ ವೇಳೆ  ಹಿಂದಿಯ ಬ್ಲಾಕ್ ಬಸ್ಟರ್ ಚಿತ್ರ ನೂರಿ ಚಿತ್ರದ "ಆ ಜಾರೇ" ಚಿತ್ರಗೀತೆಯನ್ನು ಹಾಡಿದ ತಾಂಗ್ ಯುಂಗೈ, ಭಾರತೀಯರಿಗೆ ಕೈ ಮುಗಿದು ನಮಸ್ತೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.