ವಿದೇಶ

ಉಗ್ರರು ದೇಶ ತೊರೆಯಲು ಬಿಡಬಾರದು, ಅವರನ್ನು ಇಲ್ಲೇ ಮಟ್ಟ ಹಾಕಬೇಕು: ಅಮೆರಿಕ ಅಧ್ಯಕ್ಷ ಟ್ರಂಪ್!

ನ್ಯೂಯಾರ್ಕ್ ನಗರದ ಮೇಲೆ ನಡೆದಿರುವ ಉಗ್ರ ದಾಳಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಟು ಶಬ್ದಗಳಿಂದ ಟೀಕಿಸಿದ್ದು, ದಾಳಿ ನಡೆಸಿದ ಉಗ್ರರನ್ನು ದೇಶ ತೊರೆಯಲು ಬಿಡಬಾರದು ಅವರನ್ನು ಇಲ್ಲೇ ಕೂಡಲೇ ಮಟ್ಟ ಹಾಕಬೇಕು ಎಂದು ಹೇಳಿದ್ದಾರೆ.

ಉಗ್ರರು ದೇಶ ತೊರೆಯಲು ಬಿಡಬಾರದು, ಅವರನ್ನು ಇಲ್ಲೇ ಮಟ್ಟ ಹಾಕಬೇಕು: ಅಮೆರಿಕ ಅಧ್ಯಕ್ಷ ಟ್ರಂಪ್!
ಅಮೆರಿಕ ಅಧ್ಯಕ್ಷ ಟ್ರಂಪ್
Published On :
ನ್ಯೂಯಾರ್ಕ್: ನ್ಯೂಯಾರ್ಕ್ ನಗರದ ಮೇಲೆ ನಡೆದಿರುವ ಉಗ್ರ ದಾಳಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಟು ಶಬ್ದಗಳಿಂದ ಟೀಕಿಸಿದ್ದು, ದಾಳಿ ನಡೆಸಿದ ಉಗ್ರರನ್ನು ದೇಶ ತೊರೆಯಲು ಬಿಡಬಾರದು ಅವರನ್ನು ಇಲ್ಲೇ  ಕೂಡಲೇ ಮಟ್ಟ ಹಾಕಬೇಕು ಎಂದು ಹೇಳಿದ್ದಾರೆ.
ವಿಶ್ವ ವ್ಯಾಪಾರ ಕೇಂದ್ರ ಸ್ಮಾರಕದ ಬಳಿ ಉಗ್ರನೋರ್ವ ನಡೆಸಿದ ಟ್ರಂಕ್ ದಾಳಿಯಲ್ಲಿ 8 ಮಂದಿ ಸಾವಿಗೀಡಾಗಿ 11 ಮಂದಿ ಗಂಭೀರವಾಗಿ ಗಾಯಗೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಟ್ರಂಪ್  , ಅಮಾಯಕರ ಮೇಲಿನ ಉಗ್ರರ ದಾಳಿ ಹೇಡಿತನದ್ದು. ಉಗ್ರ ದಾಳಿ ಸಂತ್ರಸ್ಥರೊಂದಿಗೆ ತಾವಿದ್ದು, ಸತ್ತವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಹೇಳಿದ್ದಾರೆ.
ಅಂತೆಯೇ ದಾಳಿ ನಡೆಸಿದ ಉಗ್ರರ ವಿರುದ್ಧ ಕಿಡಿಕಾರಿರುವ ಟ್ರಂಪ್, ಯಾವುದೇ ಕಾರಣಕ್ಕೂ ದಾಳಿಗೆ ಕಾರಣರಾಗಿರುವ ಉಗ್ರರನ್ನು ಅಮೆರಿಕ ತೊರೆಯಲು ಬಿಡಬಾರದು. ಅವರನ್ನು ಗುರುತಿಸಿ ಇಲ್ಲೇ ಅವರಿಗೆ ಕಠಿಣ ಶಿಕ್ಷೆ ನೀಡಬೇಕು.  ಸಾವಿಗೀಡಾದವರ ಕುರಿತು ತಾವು ತುಂಬಾ ದುಃಖತಪ್ತರಾಗಿದ್ದೇನೆ ಎಂದು ಹೇಳಿದ್ದಾರೆ.
ಅಂತೆಯೇ ಉಗ್ರರನ್ನು ಮಟ್ಟಹಾಕುವ ಸಂಬಂಧ ನ್ಯೂಯಾರ್ಕ್ ಪೊಲೀಸರಿಗೆ ತಮ್ಮ ಸರ್ಕಾರ ಸಂಪೂರ್ಣ ಬೆಂಬಲ ಮತ್ತು ಅಧಿಕಾರ ನೀಡುತ್ತದೆ. ಉಗ್ರರು ಯಾವುದೇ ಮೂಲೆಯಲ್ಲಿದ್ದರೂ ಬಿಡದೆ ಅವರನ್ನು ಭೇಟೆಯಾಡಿ ಎಂದು ಹೇಳಿದ್ದಾರೆ. ಅಂತೆಯೇ ಘಟನೆ ಸಂಬಂಧ ಎಫ್ ಬಿಐ ಮೂಲಕ ಜಂಟಿ ತನಿಖೆ ನಡೆಸಲಾಗುತ್ತದೆ ಎಂದೂ ಟ್ರಂಪ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.