ಕ್ಯಾಮೆರಾ ಬಿಸಾಡಿ ಬಾಂಬ್ ದಾಳಿಗೆ ಸಿಲುಕಿದ್ದ ಬಾಲಕನ ರಕ್ಷಿಸಿದ ಪತ್ರಕರ್ತ!
ಸಿರಿಯಾದಲ್ಲಿ ನಡೆದ ಬಾಂಬ್ ದಾಳಿ ಘಟನೆಯನ್ನು ತನ್ನ ಕ್ಯಾಮೆರಾದಲ್ಲಿ ಸೆರೆಹಿಡೆಯಲು ತೆರಳಿದ್ದ ಛಾಯಾಚಿತ್ರಗಾರನೊಬ್ಬ, ಛಿದ್ರಗೊಂಡ ಮಕ್ಕಳನ್ನು ಕಂಡು ಕುಸಿದು ಬಿದ್ದು ಕಣ್ಣೀರಿಟ್ಟಿರುವ ಘಟನೆ ನಡೆದಿದ್ದು, ಈ ಮನಕಲುಕುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ...

Published On :
ನವದೆಹಲಿ: ಸಿರಿಯಾದಲ್ಲಿ ನಡೆದ ಬಾಂಬ್ ದಾಳಿ ಘಟನೆಯನ್ನು ತನ್ನ ಕ್ಯಾಮೆರಾದಲ್ಲಿ ಸೆರೆಹಿಡೆಯಲು ತೆರಳಿದ್ದ ಛಾಯಾಚಿತ್ರಗಾರನೊಬ್ಬ, ಛಿದ್ರಗೊಂಡ ಮಕ್ಕಳನ್ನು ಕಂಡು ಕುಸಿದು ಬಿದ್ದು ಕಣ್ಣೀರಿಟ್ಟಿರುವ ಘಟನೆ ನಡೆದಿದ್ದು, ಈ ಮನಕಲುಕುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಳೆದ ವಾರ ಸಿರಿಯಾದಲ್ಲಿ ಬಾಂಬ್ ದಾಳಿಯೊಂದು ನಡೆದಿತ್ತು. ನಿರಾಶ್ರಿತ ಮಕ್ಕಳನ್ನು ಕರೆತರುತ್ತಿದ್ದ ಬಸ್ ಗಳನ್ನು ಉಗ್ರರ ಹಿಡಿತದಲ್ಲಿರುವ ರಶೀದಿನ್ ಎಂಬಲ್ಲಿ ತಡೆಯಲಾಗುತ್ತಿತ್ತು. ಈ ವೇಳೆ ಬಸ್ ಬಳಿ ನಿಂತಿದ್ದ ವ್ಯಕ್ತಿಯೊಬ್ಬ ಮಕ್ಕಳಿಗೆ ಚಿಪ್ಸ್ ಪ್ಯಾಕೆಟ್ ಗಳನ್ನು ತೋರಿಸುತ್ತಾ ಮಕ್ಕಳನ್ನು ತನ್ನತ್ತ ಸೆಳೆಯುತ್ತಾನೆ. ಈ ವೇಳೆ ಸ್ಥಳದಲ್ಲಿದ್ದ ಕಾರಿನಲ್ಲಿ ಬಾಂಬ್ ಸ್ಫೋಟಿಸಲಾಗುತ್ತದೆ. ಘಟನೆಯಲ್ಲಿ 126ಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಾರೆ.
ಸ್ಫೋಟದ ಸುದ್ದಿ ತಿಳಿಯುತ್ತಿದ್ದಂತೆಯೇ ಛಾಯಾಚಿತ್ರಗಾಹಕ ಅಬ್ದ್ ಅಲ್ಕದರ್ ಹಬಾಕ್ ಘಟನೆಯ ಚಿತ್ರಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯಲೆಂದು ಸ್ಥಳಕ್ಕೆ ತೆರಳುತ್ತಾನೆ ಈ ವೇಳೆ ಬಾಂಬ್ ದಾಳಿಗೆ ಸಿಲುಕಿ ಗಾಯಗೊಂಡು ಬಿದ್ದಿದ್ದ ಬಾಲಕನನ್ನು ಕಂಡು ಕೈಯಲ್ಲಿದ್ದ ಕ್ಯಾಮೆರಾವನ್ನು ಬಿಸಾಡಿ ಬಾಲಕನನ್ನು ಹೊತ್ತು ಸುರಕ್ಷಿತ ಸ್ಥಳಕ್ಕೆ ಬಿಡುತ್ತಾನೆ.
ತನ್ನಿಂದ ಸಾಧ್ಯವಾದಷ್ಟು ಜನರನ್ನು ರಕ್ಷಣೆ ಮಾಡುತ್ತಾನೆ. ಇದೇ ವೇಳೆ ಸ್ಫೋಟದ ತೀವ್ರತೆಗೆ ಸತ್ತು ನೆಲದ ಮೇಲೆ ಬಿದ್ದಿದ್ದ ಮತ್ತೊಬ್ಬ ಬಾಲಕನನ್ನು ಕಂಡು ತನ್ನ ಎದುರೇ ಮಕ್ಕಳು ನರಳಾಡಿ ಪ್ರಾಣಬಿಡುತ್ತಿರುವುದನ್ನು ಕಂಡು ಸ್ಥಳದಲ್ಲೇ ಕುಸಿದು ಬಿದ್ದು, ಕಣ್ಣೀರಿಡುತ್ತಾರೆ. ಈ ಮನ ಕಲಕುವ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಛಾಯಾಗ್ರಾಹಕನ ಸಮಯ ಪ್ರಜ್ಞೆಗೆ ಹಲವು ಜನರು ಮೆಚ್ಚುಗೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಸಾಮಾಜಿಕ ಜಾಲತಾಣಸಿರಿಯಾViralSyriacamerabomb BlastSocial Mediaphotographerಕ್ಯಾಮೆರಾಬಾಂಬ್ ದಾಳಿವೈರಲ್ಛಾಯಾಗ್ರಾಹಕರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


