ಆಫ್ರಿಕಾ ದೇಶಗಳಿಗೆ ಬೀಫ್ ಹೆಸರಲ್ಲಿ ಚೀನಾ ನರಮಾಂಸ ರಫ್ತು?
ಕೋಳಿ, ಕುರಿ, ಹಂದಿ, ದನಗಳ ಮಾಂಸಗಳನ್ನು ಮತ್ತೊಂದು ದೇಶಕ್ಕೆ ರಫ್ತು ಮಾಡುವುದು ಸಹಜ. ಆದರೆ ಚೀನಾ ಮನುಷ್ಯನ ಮಾಂಸವನ್ನು ರಫ್ತು ಮಾಡುತ್ತಿದೆ ಎಂಬ...

ಬೀಜೀಂಗ್: ಕೋಳಿ, ಕುರಿ, ಹಂದಿ, ದನಗಳ ಮಾಂಸಗಳನ್ನು ಮತ್ತೊಂದು ದೇಶಕ್ಕೆ ರಫ್ತು ಮಾಡುವುದು ಸಹಜ. ಆದರೆ ಚೀನಾ ಮನುಷ್ಯನ ಮಾಂಸವನ್ನು ರಫ್ತು ಮಾಡುತ್ತಿದೆ ಎಂಬ ವರದಿಗಳು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಚೀನಾದ ಬೃಹತ್ ಕಾರ್ಖಾನೆಯೊಂದು ಮಾನವನ ಮಾಂಸವನ್ನು ಕತ್ತರಿಸಿ, ಸಂಸ್ಕರಿಸಿ ವಿವಿಧ ದೇಶಗಳಿಗೆ ರಫ್ತು ಮಾಡುತ್ತಿದೆ ಎಂದು ವರದಿಯಾಗಿದೆ. ಬೀಫ್ ಹೆಸರಲ್ಲಿ ಚೀನಾ ಆಫ್ರಿಕಾ ದೇಶಗಳಿಗೆ ನರಮಾಂಸವನ್ನು ರಫ್ತು ಮಾಡುತ್ತಿದೆ ಎನ್ನಲಾಗುತ್ತಿದೆ.
ಇಂತಹ ಆಘಾತಕಾರಿ ಸುದ್ದಿ ಬಂದ ಕೂಡಲೇ ಚೀನಾ ಇದನ್ನು ತಳ್ಳಿಹಾಕಿದೆ. ಇದೊಂದು ಬೇಜವಾಬ್ದಾರಿ ವರದಿ ಎಂದು ಚೀನಾ ವಕ್ತಾರ ಹಾಂಗ್ ಲೇ ಹೇಳಿದ್ದಾರೆ.
ಪ್ರಸಕ್ತ ವರ್ಷದ ಆದಿಯಲ್ಲಿ ಝಾಂಬಿಯಾ ಟ್ಯಾಬ್ಲಾಯ್ಡ್ ಪತ್ರಿಕೆಯೊಂದು ಚೀನಾ ಮನುಷ್ಯರ ಮೃತದೇಹಗಳನ್ನು ಸಂಗ್ರಹಿಸಿ ಬೀಫ್ ಹೆಸರಲ್ಲಿ ಇತರ ದೇಶಗಳಿಗೆ ರಫ್ತು ಮಾಡುತ್ತಿದೆ ಎಂದು ವರದಿ ಮಾಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


