ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!
ಜರ್ಮನಿಯ ಕಲೋನ್ನಲ್ಲಿ ಮಧ್ಯರಾತ್ರಿಯಲ್ಲಿ 16 ವರ್ಷದ ಅಪ್ರಾಪ್ತೆ ಮೇಲೆ ರೋಬೋಟ್ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ವರದಿಯಾಗಿದೆ. ಸುಮಾರು 1.2 ಮೀಟರ್ ಎತ್ತರದ ರೋಬೋಟ್ ಅಪ್ರಾಪ್ತೆ ಬಳಿ ಬಂದು ಆಕೆಯ ದೇಹವನ್ನು ಮುಟ್ಟಿ ತಳ್ಳಲು ಪ್ರಾರಂಭಿಸಿದೆ ಎಂದು ಆರೋಪಿಸಲಾಗಿದೆ.

ಜರ್ಮನಿಯ ಕಲೋನ್ನಲ್ಲಿ ಮಧ್ಯರಾತ್ರಿಯಲ್ಲಿ 16 ವರ್ಷದ ಅಪ್ರಾಪ್ತೆ ಮೇಲೆ ರೋಬೋಟ್ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ವರದಿಯಾಗಿದೆ. ಸುಮಾರು 1.2 ಮೀಟರ್ ಎತ್ತರದ ರೋಬೋಟ್ ಅಪ್ರಾಪ್ತೆ ಬಳಿ ಬಂದು ಆಕೆಯ ದೇಹವನ್ನು ಮುಟ್ಟಿ ತಳ್ಳಲು ಪ್ರಾರಂಭಿಸಿದೆ ಎಂದು ಆರೋಪಿಸಲಾಗಿದೆ. ಯುವಕನೊಬ್ಬ ಘಟನೆಯನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾನೆ. ಪೊಲೀಸರು ರೋಬೋಟ್ ಮತ್ತು ಶಂಕಿತರ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದು ತನಿಖೆ ಪ್ರಾರಂಭಿಸಿದ್ದಾರೆ.
ವರದಿಯ ಪ್ರಕಾರ, ಅಕ್ಟೋಬರ್ 10ರಂದು ರಾತ್ರಿ ಸುಮಾರು 11:45ಕ್ಕೆ ಜರ್ಮನಿಯ ಕಲೋನ್ನ ಕೇಂದ್ರ ಪ್ರದೇಶದಲ್ಲಿರುವ ಫಾಸ್ಟ್-ಫುಡ್ ರೆಸ್ಟೋರೆಂಟ್ನ ಹೊರಗೆ ಈ ಘಟನೆ ಸಂಭವಿಸಿದೆ. ಪೊಲೀಸರ ಪ್ರಕಾರ, ಸುಮಾರು 1.2 ಮೀಟರ್ ಎತ್ತರದ ರೋಬೋಟ್ 16 ವರ್ಷದ ಅಪ್ರಾಪ್ತೆಯನ್ನು ಹಿಂಬಾಲಿಸಿದೆ. ಅದು ಆಕೆಯ ದೇಹದ ಭಾಗಗಳನ್ನು ಮುಟ್ಟಿ ತಳ್ಳಲು ಪ್ರಯತ್ನಿಸಿದೆ ಎಂದು ಆರೋಪಿಸಲಾಗಿದೆ.
ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಶಂಕಿತರ ವೋಕ್ಸ್ವ್ಯಾಗನ್ ಕಾರಿನ ಟ್ರಂಕ್ನಲ್ಲಿ ರೋಬೋಟ್ ಇರುವುದು ಕಂಡುಬಂದಿದೆ. ಅದು ತೋಳಿಲ್ಲದ ಶರ್ಟ್ ಮತ್ತು ಸ್ಪೋರ್ಟ್ಸ್ ಪೈಜಾಮಾ ಧರಿಸಿತ್ತು. ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆರೋಪಗಳ ಅಡಿಯಲ್ಲಿ ಪೊಲೀಸರು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಅಧಿಕಾರಿಗಳು ರೋಬೋಟ್ ಮತ್ತು ಶಂಕಿತರ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯ ಸಮಯದಲ್ಲಿ ರೋಬೋಟ್ ಹೇಗೆ ಕಾರ್ಯನಿರ್ವಹಿಸುತ್ತಿತ್ತು. ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಲು ಯಾರಾದರೂ ಅದನ್ನು ಉದ್ದೇಶಪೂರ್ವಕವಾಗಿ ನಿಯಂತ್ರಿಸಿದ್ದಾರೆಯೇ ಎಂದು ನಿರ್ಧರಿಸುವುದು ತನಿಖೆಯ ಪ್ರಾಥಮಿಕ ಉದ್ದೇಶವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



