ಭಾರತದ ಎನ್ ಎಸ್ ಜಿ ಸೇರ್ಪಡೆಗೆ ನಿಯಮಗಳೇ ಅಡ್ಡಿ, ಬೀಜಿಂಗ್ ಅಲ್ಲ: ಗ್ಲೋಬಲ್ ಟೈಮ್ಸ್
ಭಾರತ ಪರಮಾಣು ಪೂರೈಕೆದಾರರ ಒಕ್ಕೂಟ ಸೇರುವ ಕುರಿತು ಭಾರತೀಯ ಮಾಧ್ಯಮಗಳ ಬಿತ್ತರಿಸಿದ ಸುದ್ದಿಗಳಿಗೆ ಸಂಬಂಧಿಸಿದಂತೆ ಚೀನಾದ ಗ್ಲೋಬಲ್ ಟೈಮ್ಸ್ ವ್ಯಾಪಕವಾಗಿ ಟೀಕಿಸಿದ್ದು, ಭಾರತೀಯ ಮಾಧ್ಯಮಗಳ ಸುದ್ದಿಗಳನ್ನು ಸ್ವಾರ್ಥ ಪ್ರೇರಿತ ಸುದ್ದಿಗಳು ಎಂದು ಟೀಕಿಸಿದೆ...

ಬೀಜಿಂಗ್: ಭಾರತ ಪರಮಾಣು ಪೂರೈಕೆದಾರರ ಒಕ್ಕೂಟ ಸೇರುವ ಕುರಿತು ಭಾರತೀಯ ಮಾಧ್ಯಮಗಳ ಬಿತ್ತರಿಸಿದ ಸುದ್ದಿಗಳಿಗೆ ಸಂಬಂಧಿಸಿದಂತೆ ಚೀನಾದ ಗ್ಲೋಬಲ್ ಟೈಮ್ಸ್ ವ್ಯಾಪಕವಾಗಿ ಟೀಕಿಸಿದ್ದು, ಭಾರತೀಯ ಮಾಧ್ಯಮಗಳ ಸುದ್ದಿಗಳನ್ನು ಸ್ವಾರ್ಥ ಪ್ರೇರಿತ ಸುದ್ದಿಗಳು ಎಂದು ಟೀಕಿಸಿದೆ.
ಚೀನಾದ ಸರ್ಕಾರದ ಮುಖವಾಣಿ ಎಂದೇ ಕರೆಯಲಾಗುವ ಗ್ಲೋಬಲ್ ಟೈಮ್ಸ್ ತನ್ನ ಸಂಪಾದಕೀಯದಲ್ಲಿ ಭಾರತೀಯ ಮಾಧ್ಯಮಗಳನ್ನು ಮತ್ತು ಅತಿರಂಜಿತ ಸುದ್ದಿ ಪ್ರಸಾರವನ್ನು ವ್ಯಾಪಕವಾಗಿ ಟೀಕಿಸಿದ್ದು, ಭಾರತದ ಎನ್ ಎಸ್ ಜಿ ಸೇರ್ಪಡೆಗೆ ಚೀನಾದ ವಿರೋಧವಿಲ್ಲ. ಆದರೆ ನಿಯಮಾವಳಿಗಳ ಅಡ್ಡಿ. ಚೀನಾ ನಿಯಮಾವಳಿಗಳ ಅನುಸಾರ ಸದಸ್ಯರನ್ನು ಸೇರಿಸುವಂತೆ ಒತ್ತಾಯಿಸುತ್ತಿದ್ದು, ಭಾರತವನ್ನು ಒಕ್ಕೂಟಕ್ಕೆ ಸೇರಿಸಬೇಡಿ ಎಂದು ಹೇಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇದೇ ವೇಳೆ ಭಾರತೀಯ ಮಾಧ್ಯಮಗಳು ವಿದೇಶಾಂಗ ವ್ಯವಹಾರಗಳ ಕುರಿತು ವ್ಯವಹರಿಸುವಾಗ ಹೇಗೆ ವರ್ತಿಸಬೇಕು ಎಂಬುದನ್ನು ಅರಿತು ಬಳಿಕ ಈ ಬಗ್ಗೆ ಚರ್ಚೆ ಮಾಡುವಂತೆ ಗ್ಲೋಬಲ್ ಟೈಮ್ಸ್ ಕಿಡಿಕಾರಿದೆ. "ಎನ್‌ಎಸ್‌ಜಿಗೆ ಸೇರುವ ದೆಹಲಿ ಪ್ರಯತ್ನಕ್ಕೆ ನಿಯಮಗಳೇ ಅಡ್ಡಿ, ಬೀಜಿಂಗ್ ಅಲ್ಲ" ಎಂಬ ಶೀರ್ಷಿಕೆಯಡಿಯಲ್ಲಿ ಈ ಸಂಪಾದಕೀಯ ಬರೆಯಲಾಗಿದ್ದು, "ಭಾರತೀಯ ಮಾಧ್ಯಮಗಳು ಮತ್ತು ಕೆಲವರು ಸ್ವಾರ್ಥ ಪ್ರವೃತ್ತಿಯವರಾಗಿದ್ದು, ಸಿಯೂಲ್ ಭೇಟಿಗೂ ಮುನ್ನವೇ ಭಾರತದ ಮಾಧ್ಯಮಗಳು ಅತಿ ರಂಜಿತವಾದ ಸುದ್ದಿ ಬಿತ್ತರಿಸಿದ್ದವು. ಕೆಲವು ಮಾಧ್ಯಮಗಳ ಪ್ರಕಾರ 48 ದೇಶಗಳ ಪೈಕಿ 47 ದೇಶಗಳು ಒಪ್ಪಿವೆ. ಆದರೆ ಚೀನಾ ಮಾತ್ರ ಒಪ್ಪಿಲ್ಲ ಎಂದು ಬಿತ್ತರಿಸಿದ್ದವು. ಆದರೆ ವಾಸ್ತವಾಂಶವೇ ಬೇರೆ ಇದ್ದು, ಎಂದು ಎನ್‌ಎಸ್‌ಜಿಗೆ ಸೇರುವ ದೆಹಲಿ ಪ್ರಯತ್ನಕ್ಕೆ ನಿಯಮಗಳ ಅಡ್ಡಿ, ಬೀಜಿಂಗ್ ಅಲ್ಲ ಎಂದು ಪತ್ರಿಕೆ ಕಿಡಿಕಾರಿದೆ.
"ಎನ್ ಎಸ್ ಜಿ ಆರಂಭವಾದ 1975ರಿಂದಲೂ ನೂತನ ಸದಸ್ಯರಾಗ ಬಯಸುವ ರಾಷ್ಟ್ರದ ಪರವಾಗಿ ಎಲ್ಲ ಸದಸ್ಯ ರಾಷ್ಟ್ರಗಳು (ಎನ್ ಪಿಟಿ) ಒಪ್ಪಿಗೆ ಸೂಚಿಸಿ ಸಹಿ ಹಾಕಬೇಕು. ಇದೇ ಎನ್ ಎಸ್ ಜಿ ಒಕ್ಕೂಟದ ಮೊದಲ ನಿಯಮವಾಗಿದ್ದು, ಇದನ್ನೇ ಬಿಟ್ಟು ಸದಸ್ಯತ್ವ ನೀಡಲು ಸಾಧ್ಯವಿಲ್ಲ. ಆದರೆ ಭಾರತ ಎನ್ ಪಿಟಿ ಬೆಂಬಲವಿಲ್ಲದೇ ಸದಸ್ಯನಾಗ ಹೊರಟಿದೆ. ಇದೇ ಕಾರಣಕ್ಕೆ ಹಲವು ಸದಸ್ಯ ರಾಷ್ಚ್ರಗಳು ಮತ್ತು ಚೀನಾ ವಿರೋಧ ವ್ಯಕ್ತಪಡಿಸಿದೆಯೇ ಹೊರತು ಭಾರತದ ಎನ್ ಎಸ್ ಜಿ ಸೇರ್ಪಡೆಗಲ್ಲ ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ.
ಸರ್ಕಾರದ ನಡೆ ಮೆಚ್ಚಿದ ಚೀನಾ
ಅಂತೆಯೇ ಎನ್‌ಎಸ್‌ಜಿ ವಿಚಾರದಲ್ಲಿ ಭಾರತ ಸರ್ಕಾರ ಗೌರವಯುತವಾಗಿ ನಡೆದುಕೊಂಡಿದ್ದು, ಚರ್ಚೆಗೆ ಸಹಮತ ಹೊಂದಿದೆ ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


