ವಿದೇಶ

ಉ.ಕೊರಿಯಾಕ್ಕೆ ಅಣ್ವಸ್ತ್ರ ಮಾರಾಟ; ಪಾಕಿಸ್ತಾನದ ಎನ್ ಎಸ್ ಜಿ ಸೇರ್ಪಡೆಗೆ ತೀವ್ರ ಹಿನ್ನಡೆ

ಪರಮಾಣು ಪೂರೈಕೆದಾರರ ಒಕ್ಕೂಟಕ್ಕೆ ಭಾರತ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದ ಚೀನಾಕ್ಕೆ ಭಾರಿ ಮುಖಭಂಗವಾಗಿದ್ದು, ಪಾಕಿಸ್ತಾನವನ್ನೂ ಎನ್ ಎಸ್ ಜಿ ಸೇರಿಸಬೇಕು ಎನ್ನುವ ಅದರ ವಾದಕ್ಕೆ ತೀವ್ರ ಹಿನ್ನಡೆಯಾಗಿದೆ.

ಉ.ಕೊರಿಯಾಕ್ಕೆ ಅಣ್ವಸ್ತ್ರ ಮಾರಾಟ; ಪಾಕಿಸ್ತಾನದ ಎನ್ ಎಸ್ ಜಿ ಸೇರ್ಪಡೆಗೆ ತೀವ್ರ ಹಿನ್ನಡೆ
ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ (ಸಂಗ್ರಹ ಚಿತ್ರ)
Published On :

ನವದೆಹಲಿ: ಪರಮಾಣು ಪೂರೈಕೆದಾರರ ಒಕ್ಕೂಟಕ್ಕೆ ಭಾರತ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದ ಚೀನಾಕ್ಕೆ ಭಾರಿ ಮುಖಭಂಗವಾಗಿದ್ದು, ಪಾಕಿಸ್ತಾನವನ್ನೂ ಎನ್ ಎಸ್ ಜಿ  ಸೇರಿಸಬೇಕು ಎನ್ನುವ ಅದರ ವಾದಕ್ಕೆ ತೀವ್ರ ಹಿನ್ನಡೆಯಾಗಿದೆ.

ಪಾಕಿಸ್ತಾನ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನೇತೃತ್ವದ ಉತ್ತರ ಕೊರಿಯಾಕ್ಕೆ ರಹಸ್ಯವಾಗಿ ಪರಮಾಣು ಶಸ್ತ್ರಾಸ್ತ್ರ ಮಾರಾಟ ಮಾಡುತ್ತಿರುವ ರಹಸ್ಯ ವಿಚಾರವನ್ನು ಅಮೆರಿಕದ  ತನಿಖಾಧಿಕಾರಿಗಳು ಬಯಲಿಗೆಳೆದಿದ್ದು, ಇದೀಗ ಭಾರತದೊಂದಿಗೆ ಪಾಕಿಸ್ತಾನವನ್ನೂ ಎನ್ ಎಸ್ ಜಿ ಒಕ್ಕೂಟಕ್ಕೆ ಸೇರಿಸುವ ಚೀನಾ ಪ್ರಯತ್ನಕ್ಕೆ ಭಾರಿ ಹಿನ್ನಡೆಯಾಗಿದೆ. ಇದೀಗ  ವಿಶ್ವಸಮುದಾಯದ ಎದುರು ಚೀನಾ ಇಕ್ಕಟ್ಟಿಗೆ ಸಿಲುಕಿದ್ದು,  ಪರಮಾಣು ಒಕ್ಕೂಟಕ್ಕೆ ಪಾಕಿಸ್ತಾನವನ್ನು ಸೇರಿಸುವ ತನ್ನ ನಿಲುವಿಗೆ ಹೇಗೆ ಬದ್ಧವಾಗಿರುತ್ತದೆ ಎಂಬ ಕುತೂಹಲ ಮೂಡಿದೆ.

ನಿನ್ನೆಯಷ್ಟೇ ಅಮೆರಿಕ ಮತ್ತು ವಿಶ್ವಸಂಸ್ಥೆಯ ಮೂಲಗಳು ಪಾಕಿಸ್ತಾನ ಉತ್ತರ ಕೊರಿಯಾ ದೇಶಕ್ಕೆ ಅಣ್ವಸ್ತ್ರ ಮಾರಾಟದ ಕುರಿತಂತೆ ವರದಿ ಬಹಿರಂಗ ಪಡಿಸಿತ್ತು. ಎನ್ಎಸ್ ಜಿ ಸದಸ್ಯತ್ವ  ಪಡೆಯಲು ಯತ್ನಿಸುತ್ತಿರುವ ಪಾಕಿಸ್ತಾನ ನಿಯಮ ಉಲ್ಲಂಘಿಸಿ ಉತ್ತರ ಕೊರಿಯಾಕ್ಕೆ ಅಣ್ವಸ್ತ್ರ ಮಾರಾಟ ಮಾಡುತ್ತಿದೆ. ಪಾಕಿಸ್ತಾನ ಶಕ್ತಿ ಆಯೋಗ (ಪಿಎಇಸಿ) ನಿರಂತರವಾಗಿ ಉತ್ತರ  ಕೊರಿಯಾಕ್ಕೆ ಅಣ್ವಸ್ತ್ರ ತಯಾರಿ ವಸ್ತುಗಳ ಸರಬರಾಜು ಮಾಡುತ್ತಿದೆ ಎಂದು ಅಣ್ವಸ್ತ್ರಗಳ ಮಾರಾಟದ ಮೇಲೆ ನಿಗಾ ವಹಿಸುವ ವಿಶ್ವಸಂಸ್ಥೆಯ ತಂಡದಲ್ಲಿರುವ ಉನ್ನತ ಮೂಲಗಳು ತಿಳಿಸಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.