ವಿದೇಶ

ಇಸಿಸ್ ಹೆಡೆಮುರಿ ಕಟ್ಟಲು ಅಮೆರಿಕ ಸೀಕ್ರೆಟ್ ಪ್ಲಾನ್..!

ಇಡೀ ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿರುವ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಆಂಡ್ ಸಿರಿಯಾ (ಇಸಿಸ್)ದ ಉಗ್ರರನ್ನು ಸದೆಬಡಿಯಲು ವಿಶ್ವದ ದೊಡ್ಡಣ್ಣ ಮುಂದಾಗಿದ್ದು, ಇದಕ್ಕಾಗಿ ರಹಸ್ಯ ಯೋಜನೆ...

ಇಸಿಸ್ ಹೆಡೆಮುರಿ ಕಟ್ಟಲು ಅಮೆರಿಕ ಸೀಕ್ರೆಟ್ ಪ್ಲಾನ್..!
ಇಸಿಸ್ ವಿರುದ್ಧ ಅಮೆರಿಕ ರಹಸ್ಯ ಯೋಜನೆ (ಸಾಂದರ್ಭಿಕ ಚಿತ್ರ)
Published On :

ವಾಷಿಂಗ್ ಟನ್: ಇಡೀ ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿರುವ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಆಂಡ್ ಸಿರಿಯಾ (ಇಸಿಸ್)ದ ಉಗ್ರರನ್ನು ಸದೆಬಡಿಯಲು ವಿಶ್ವದ ದೊಡ್ಡಣ್ಣ  ಮುಂದಾಗಿದ್ದು, ಇದಕ್ಕಾಗಿ ರಹಸ್ಯ ಯೋಜನೆಯೊಂದನ್ನು ರೂಪಿಸಿದೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಶತಾಯಗತಾಯ ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಸದೆಬಡಿಯಲೇ ಬೇಕು ಎಂದು ಹವಣಿಸುತ್ತಿರುವ ಅಮೆರಿಕ, ಸಿರಿಯಾ ಸೇನೆಯ ಜೊತೆಗೂಡಿ ಅತ್ಯಾಧುನಿಕ ಮಾನವ  ರಹಿತ ಯುದ್ಧ ವಿಮಾನ ಡ್ರೋನ್ ದಾಳಿ ನಡೆಸುವ ಮೂಲಕ ಸಂಘಟನೆಯ ಪ್ರಮುಖರನ್ನು ಹತ್ಯೆ ಮಾಡಲು ಸಂಚು ರೂಪಿಸಿದೆ ಎಂದು ಹೇಳಲಾಗುತ್ತಿದೆ. ಈ ಯೋಜನೆಯನ್ನು ಅಮೆರಿಕದ  ಕೇಂದ್ರೀಯ ಗುಪ್ತಚರ ಇಲಾಖೆ (ಸಿಐಎ) ಹಾಗೂ ಸಿರಿಯಾದ ವಿಶೇಷ ಕಾರ್ಯಾಚರಣಾ ಪಡೆಗಳು ಈ ಕುರಿತು ಯೋಜನೆ ರೂಪಿಸಿವೆ ಎಂದು ಖಾಸಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಹಿಂದೆ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ಗಡಿಯಲ್ಲಿನ ಬುಡುಕಟ್ಟು ಉಗ್ರರನ್ನು ನಿಗ್ರಹಸಲು ಕೂಡ ಅಮೆರಿಕ ಇದೇ ರೀತಿಯ ರಹಸ್ಯ ಜಂಟಿ ಕಾರ್ಯಾಚರಣೆ ನಡೆಸಿತ್ತು. ಅಲ್-ಖೈದಾ  ಉಗ್ರರನ್ನು ಸದೆಬಡಿಯಲು ಮಾನವರಹಿತ ಡ್ರೋನ್‌ಗಳನ್ನು ಬಳಸಲಾಗಿತ್ತು. ಸಿರಿಯಾದಲ್ಲೂ ಇದೇ ರೀತಿಯ ದಾಳಿ ನಡೆಸಿ ಐಸಿಸ್‌ನ ಪ್ರಮುಖ ನಾಯಕರು ಹಾಗೂ ಅವರ ಭದ್ರತಾ ನೆಲೆಗಳನ್ನು  ಸದೆಬಡಿಯಲು ಅಮೆರಿಕ ನಿರ್ಧರಿಸಿದೆ. ಆದರೆ ಈ ಕಾರ್ಯಾಚರಣೆ ಸಿರಿಯಾ ದೇಶಕ್ಕಷ್ಟೇ ಸೀಮಿತವಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅಪಾಯಕಾರಿ ರಾಸಾಯನಿಕ ಅಸ್ತ್ರಗಳ ಕಳ್ಳಸಾಗಣೆಯಲ್ಲಿ ತೊಡಗಿರುವ ಇಸಿಸ್

ಇದೇ ವೇಳೆ ಸಿರಿಯಾದಲ್ಲಿ ರಾಸಾಯನಿಕ ಅಸ್ತ್ರಗಳನ್ನು ಬಳಸಿ ಸಾವಿರಾರು ಅಮಾಯಕರ ಸಾವಿಗೆ ಕಾರಣಕರ್ತರಾದ ಐಸಿಸ್ ಉಗ್ರರು, ಕಳ್ಳಸಾಗಣೆ ಮೂಲಕ ಭಾರಿ ಪ್ರಮಾಣದ ರಾಸಾಯನಿಕ  ಅಸ್ತ್ರಗಳನ್ನು ಯುರೋಪ್‌ಗೆ ಕೊಂಡೊಯ್ಯಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಐಸಿಸ್ ಸುಮಾರು 20 ಟನ್‌ಗೂ ಅಧಿಕ ರಾಸಾಯನಿಕ ಶಸ್ತ್ರಗಳನ್ನು  ಹೊಂದಿದ್ದು, ಇದನ್ನು ಬಳಕೆ ಮಾಡಿ ಸಾವಿರಾರು ನಾಗರಿಕರ ಮಾರಣಹೋಮ ನಡೆಸಲು ಮುಂದಾಗಿದೆ ಎಂದು ಎಂದು ರಕ್ಷಣಾ ತಜ್ಞರು ವಿಶ್ವಸಮುದಾಯಕ್ಕೆ ಎಚ್ಚರಿಕೆ ನೀಡಿದ್ದಾರೆ. ಸಿರಿಯಾದ  ಹಿಂದಿನ ಅಧ್ಯಕ್ಷ ಬಶಾರ್, ನಾಗರಿಕರ ಮೇಲೆ ರಾಸಾಯನಿಕ ಅಸ್ತ್ರಗಳನ್ನು ಪ್ರಯೋಗಿಸಿದ ಆರೋಪಕ್ಕೆ ತುತ್ತಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.