ವಿದೇಶ

ಸಿರಿಯಾಕ್ಕೆ ಸೇನೆ ಕಳುಹಿಸಿದ್ದೇ ಎಡವಟ್ಟು

ಪ್ಯಾರಿಸ್ ದಾಳಿಯು ಐಎಸ್ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗಿದೆ. ಐಎಸ್ ಎನ್ನುವುದು ರಾಕ್ಷಸನಿದ್ದಂತೆ...

ಸಿರಿಯಾಕ್ಕೆ ಸೇನೆ ಕಳುಹಿಸಿದ್ದೇ ಎಡವಟ್ಟು
ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ
Published On :
ಟರ್ಕಿ: ಪ್ಯಾರಿಸ್ ದಾಳಿಯು ಐಎಸ್ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗಿದೆ. ಐಎಸ್ ಎನ್ನುವುದು ರಾಕ್ಷಸನಿದ್ದಂತೆ ಎಂದಿದ್ದಾರೆ ಅಮೆರಿಕ ಅಧ್ಯಕ್ಷ ಒಬಾಮ. ಜಿ20 ಶೃಂಗದ ಬಳಿಕ ಮಾತಾಡಿದ ಒಬಾಮ, ಉಗ್ರ ಸಂಘಟನೆ ವಿರುದ್ಧ ಹೋರಾಟ ನಡೆಸಲು ಸಿರಿಯಾಕ್ಕೆ ಹೆಚ್ಚಿನ ಸೇನೆ ಕಳುಹಿಸಿದ್ದು ತಪ್ಪಾಯಿತು ಎಂದು ಒಪ್ಪಿ ಕೊಂಡಿದ್ದಾರೆ. 
ಉಗ್ರರ ವಿರುದ್ಧದ ಹೋರಾಟ ಸಾಂಘಿಕವಾಗಿ ಮೂಡಿಬರಲು ಇರಾಕ್, ಸಿರಿಯಾದ ಜನರ ಒಕ್ಕೊರಲ ಬೆಂಬಲ ಬೇಕು ಎಂದೂ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಆಂತರಿಕ ಸಂಘರ್ಷದಿಂದ ಜರ್ಝರಿತವಾಗಿರುವ ಸಿರಿಯಾದಿಂದ ಬಂದ ವಲಸಿಗರು ಅಮೆರಿಕದ ಮೌಲ್ಯಗಳಿಗೆ ಮೋಸ ಮಾಡಲು ಅವಕಾಶ ಕೊಡುವುದಿಲ್ಲ ಎಂಬ ಎಚ್ಚರಿಕೆಯನ್ನೂ ಒಬಾಮ ನೀಡಿದ್ದಾರೆ. 
``ಐಎಸ್ ಪ್ರಧಾನ ಕಚೇರಿ ಇರುವ ರಖಾಕ್ಕೆ ದಾಳಿ ನಡೆಸಲು ಅಮೆರಿಕಕ್ಕೆ ಹೆದರಿಕೆ ಏನೂ ಇಲ್ಲ. ಆದರೆ ಹಿಂದಿನ ದಾಳಿಗಳಿಂದ ಉಂಟಾದ ಪರಿಣಾಮಗಳನ್ನು ನೋಡಿದ್ದೇವೆ'' ಎಂದರು. ಇದೇ ವೇಳೆ, ``ವಲಸಿ ಗರಿಗೆ ನೆರವು ನೀಡಬೇಕು. ಸೂಕ್ತ ನೆರವು ನೀಡಲೇಬೇಕು.
ಮಾನವೀಯ ನೆಲೆಯಿಂದ ಇದು ಮುಖ್ಯ. ಅದಕ್ಕಾಗಿ ಗಡಿಗಳ ಮಾತ್ರವಲ್ಲ, ಹೃದಯದ ಬಾಗಿಲನ್ನು ತೆರೆಯಬೇಕು. ಸ್ಥಳೀಯ ಜನರಿಂದಲೂ ನಮಗೆ ಬೆಂಬಲ ಸಿಗಬೇಕು. ಸ್ಥಳೀಯ ಸರ್ಕಾರದಲ್ಲಿ ಅವರು ಪ್ರಮುಖವಾಗಿ ಪಾತ್ರ ವಹಿಸಿ ತಾತ್ವಿಕವಾಗಿ ಭಿನ್ನ ನಿಲುವುಗಳನ್ನು ಹೊಂದಿರುವ ಉಗ್ರರನ್ನು ನಿಯಂತ್ರಿಸಲು ನೆರವಾಗಬೇಕು'' ಎಂದು ಅಮೆರಿಕ ಅಧ್ಯಕ್ಷ ಪ್ರತಿಪಾದಿಸಿದ್ದಾರೆ. 
ಅಮೆರಿಕ ಪ್ರವೇಶಿಸುವ ವಲಸಿಗರಿಗೆ ಧಾರ್ಮಿಕ ಪರೀಕ್ಷೆ ನಡೆಸಬೇಕು ಎಂಬ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೆಬ್ ಬುಷ್ ಸಲಹೆಯನ್ನು ತಿರಸ್ಕರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.