ವಿಡಿಯೋ

ಅಪ್ಪ-ಮಗಳ ಅದ್ಭುತ ಪ್ರೀತಿ ಸಾರುವ ಪುಷ್ಪಕ ವಿಮಾನ

ಅಪ್ಪ ಮತ್ತು ಮಗಳ ಅನ್ಯೋನ್ಯ ಮತ್ತು ಅದ್ಭುತ ಪ್ರೀತಿಯನ್ನು ಸಾರುವ ನಟ ರಮೇಶ್ ಅರವಿಂದ್ ಮತ್ತು ಬೇಬಿ ಯುವಿನಾ ನಟನೆಯ ಪುಷ್ಪಕ ವಿಮಾನ ಟೀಸರ್ ಬಿಡುಗಡೆಯಾಗಿದ್ದು, ವೀಕ್ಷಕರಿಂದ ಅದ್ಭುತ ರೆಸ್ಪಾನ್ಸ್ ಪಡೆದಿದೆ.

ಅಪ್ಪ-ಮಗಳ ಅದ್ಭುತ ಪ್ರೀತಿ ಸಾರುವ ಪುಷ್ಪಕ ವಿಮಾನ
ಹುಚ್ಚ ವೆಂಕಟ್ ಹಾಡಿರುವ ಹುಟ್ಟಿದ ಊರನು ಬಿಟ್ಟು ಬಂದ ಮ್ಯಾಲೆ ವಿಡಿಯೋ ಸಾಂಗ್

ಹುಚ್ಚ ವೆಂಕಟ್ ಹಾಡಿರುವ ಹುಟ್ಟಿದ ಊರನು ಬಿಟ್ಟು ಬಂದ ಮ್ಯಾಲೆ ವಿಡಿಯೋ ಸಾಂಗ್

ಯೋಗರಾಜ್‌ ಭಟ್‌ರ ಸಾಹಿತ್ಯ ಹಾಗೂ ಹುಚ್ಚ ವೆಂಕಟ್‌ ಧ್ವನಿಯಲ್ಲಿ ಮೂಡಿಬಂದ ಪರಪಂಚ ಚಿತ್ರದ ಹುಟ್ಟಿದ ಊರನು ಬಿಟ್ಟು ಬಂದಾ ಮ್ಯಾಲೆ ಹಾಡಿನ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಹುಚ್ಚ ವೆಂಕಟ್‌ ಹಾಗೂ ದೂಧ್‌ಪೇಡಾ ದಿಗಂತ್‌ ಈ ಸಾಂಗ್‌ನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದು ಇಬ್ಬರ ಕಾಂಬಿನೇಶನ್‌ ಸಖತ್‌ ಆಗಿ ಮೂಡಿಬಂದಿದೆ.

ನರ್ಸ್ ಕೈ ಮುಟ್ಟಿದ ರೋಗಿಗೆ ವೈದ್ಯನ ಪಂಚ್, ಸ್ಥಳದಲ್ಲೇ ಸಾವು, ವೈರಲ್ ಆಯ್ತು ವಿಡಿಯೋ

ನರ್ಸ್ ಕೈ ಮುಟ್ಟಿದ ರೋಗಿಗೆ ವೈದ್ಯನ ಪಂಚ್, ಸ್ಥಳದಲ್ಲೇ ಸಾವು, ವೈರಲ್ ಆಯ್ತು ವಿಡಿಯೋ

ಚಿಕಿತ್ಸೆ ನೀಡುತ್ತಿದ್ದ ಮಹಿಳಾ ನರ್ಸ್ ಕೈಯನ್ನು ದುರುದ್ದೇಶಪೂರ್ವಕವಾಗಿ ಮುಟ್ಟಿದ ರೋಗಿಯನ್ನು ಕೋಪೋದ್ರಿಕ್ತ ವೈದ್ಯನೊಬ್ಬ ಆಸ್ಪತ್ರೆಯಲ್ಲಿಯೇ ಹೊಡೆದು ಕೊಂದ ಘಟನೆ ರಷ್ಯಾದ ದಕ್ಷಿಣ ಭಾಗದ ಬೆಲ್ಗೊರೋಡ್‌ ಎಂಬಲ್ಲಿ ನಡೆದಿದೆ. ರೋಗಿಯಿಂದ ಲೈಂಗಿಕ ಹಿಂಸೆಗೊಳಗಾದ ನರ್ಸ್ ಕೂಡಲೇ ತನ್ನ ಹಿರಿಯ ವೈದ್ಯರಿಗೆ ದೂರು ನೀಡಿದ್ದು ಕೊಪದಿಂದಲೇ ಕೊಠಡಿಗೆ ಆಗಮಿಸಿದ ವೈದ್ಯ ರೋಗಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಇದನ್ನು ತಡೆಯಲು ಬಂದ ವ್ಯಕ್ತಿಯನ್ನು ಕೂಡ ವೈದ್ಯ ಥಳಿಸಿದ್ದು, ತೀವ್ರಪೆಟ್ಟುತಿಂದ ರೋಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಬಾಹುಬಲಿ ಚಿತ್ರದ ಬಲ್ಲಾಳದೇವನ ಗೂಳಿ ಗುದ್ದಾಟ ಮೂಡಿಬಂದಿದ್ದು ಹೇಗೆ ಗೊತ್ತಾ..?

ಬಾಹುಬಲಿ ಚಿತ್ರದ ಬಲ್ಲಾಳದೇವನ ಗೂಳಿ ಗುದ್ದಾಟ ಮೂಡಿಬಂದಿದ್ದು ಹೇಗೆ ಗೊತ್ತಾ..?

ತನ್ನ ಮೇಕಿಂಗ್ ನಿಂದಲೇ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದ ದಕ್ಷಿಣ ಭಾರತದ ಚಿತ್ರ ಬಾಹುಬಲಿ. ಶೇ.80 ರಷ್ಟು ಗ್ರಾಫಿಕ್ಸ್ ನಿಂದಲೇ ಕೂಡಿದ್ದ ಬಾಹುಬಲಿ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ರಾಣಾ ಮಾಡಿದ್ದ ಬಲ್ಲಾಳ ದೇವನ ಪಾತ್ರ ಮತ್ತು ಆತನ ತೋಳ್ಬಲ ಪ್ರದರ್ಶನಕ್ಕಾಗಿ ಗೂಳಿಯೊಂದಿಗೆ ಗುದ್ದಾಡುವ ಸನ್ನಿವೇಶ ಎಲ್ಲರನ್ನೂ ಮೂಕವಿಸ್ಮಿತರಾಗುವಂತೆ ಮಾಡಿತ್ತು. ಈ ಸನ್ನಿವೇಶದ ಚಿತ್ರೀಕರಣ ಮತ್ತು ಗ್ರಾಫಿಕ್ಸ್ ನಿಂದ ಹೇಗೆ ನಕಲಿ ಗೂಳಿಯನ್ನು ಸೃಷ್ಟಿಸಲಾಗಿತ್ತು ಎಂಬ ಅಂಶವನ್ನು ಚಿತ್ರತಂಡ ಬಹಿರಂಗಗೊಳಿಸಿದೆ.

ಖದರ್ ಆಗಿದೆ ವಿನೋದ್ ಪ್ರಭಾಕರ್ ಟೈಸನ್ ಟೀಸರ್

ಖದರ್ ಆಗಿದೆ ವಿನೋದ್ ಪ್ರಭಾಕರ್ ಟೈಸನ್ ಟೀಸರ್

ಟೈಸನ್ ಚಿತ್ರದಲ್ಲಿ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ವಿನೋದ್ ಪ್ರಭಾಕರ್ ಖದರ್ ಆಗಿ ಕಾಣಿಸಿಕೊಂಡಿದ್ದು, ಇದೀಗ ಬಿಡುಗಡೆಯಾಗಿರುವ ಟೈಸನ್ ಟೀಸರ್ ಸಖತ್ ಆಗಿದೆ. ನಿರ್ದೇಶಕ ರಾಮ್‌ನಾರಾಯಣ್‌ ನಿರ್ದೇಶಿಸುತ್ತಿರುವ ಟೈಸನ್‌ ಚಿತ್ರ ಗಾಂಧಿನಗರದಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಟೀಸರ್ ನಲ್ಲಿ ವಿನೋದ್ ಪ್ರಭಾಕರ್ ಖಾಕಿ ದರಿಸಿ ಬುಲೆಟ್ ಹೇರಿ ಗೋಡೆ ಹೊಡೆದುಕೊಂಡು ಬರುವ ದೃಶ್ಯ ರೋಮಾಂನಚಕಾರಿಯಾಗಿದೆ.

ದರ್ಶನ್ ಅಭಿನಯದ ವಿರಾಟ್ ಚಿತ್ರದ ಟೈಟಲ್ ಸಾಂಗ್ ಪ್ರೋಮೋ

ದರ್ಶನ್ ಅಭಿನಯದ ವಿರಾಟ್ ಚಿತ್ರದ ಟೈಟಲ್ ಸಾಂಗ್ ಪ್ರೋಮೋ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹಾಗೂ ಹೆಚ್.ವಾಸು ನಿರ್ದೇಶನದ ಬಹುನಿರೀಕ್ಷಿತ ವಿರಾಟ್ ಚಿತ್ರದ ಟೈಟಲ್ ಸಾಂಗ್ ಪ್ರೋಮೋ ಶನಿವಾರ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಚಿತ್ರದಲ್ಲಿ ಲಿಶಾ ಚಾವ್ಲಾ, ವಿದಿಶಾ ಶ್ರೀವಾಸ್ತವ, ಸುಮಲತಾ, ಚೈತ್ರಾ ಚಂದ್ರನಾಥ್ ಹಾಗೂ ರವಿಶಂಕರ್ ಅವರು ಪ್ರಮುಖ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

ಸಾಂಗ್ ಆಯ್ತು ಬಾಹುಬಲಿ ಕಿಲಿಕಿ ಭಾಷೆ..!

ಸಾಂಗ್ ಆಯ್ತು ಬಾಹುಬಲಿ ಕಿಲಿಕಿ ಭಾಷೆ..!

ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ ಚಿತ್ರ ಬಾಹುಬಲಿ. ತನ್ನ ಮೇಕಿಂಗ್ ನಿಂದಲೇ ಖ್ಯಾತಿ ಗಳಿಸಿದ್ದ, ಈ ಚಿತ್ರದ ಕಿಲಿಕಿ ಭಾಷೆಯೇ ಒಂದು ಪಾತ್ರವಾಗಿತ್ತು. ಇಂತಹ ಕಿಲಿಕಿ ಭಾಷೆಯನ್ನು ಬಳಸಿಕೊಂಡು ಇದೀಗ ಸಾಂಗ್ ವೊಂದರ ಮೇಕಿಂಗ್ ಮಾಡಲಾಗಿದೆ. ಖ್ಯಾತ ಹಿನ್ನಲೆ ಗಾಯಕಿ ಸ್ಮಿತಾ ಅವರು ಈ ಗೀತೆಯನ್ನು ಹಾಡಿದ್ದು, ಬಾಹುಬಲಿಯ ಕಾಲಕೇಯ ಪಾತ್ರಧಾರಿ ಪ್ರಭಾಕರ್ ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ. ಯೂಟ್ಯೂಬ್ ನಲ್ಲಿ ಈ ಹಾಡಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಬಾಹುಬಲಿ ಚಿತ್ರತಂಡಕ್ಕೆ ಈ ಗೀತೆಯನ್ನು ಅರ್ಪಿಸಲಾಗಿದೆ.