ವಿಡಿಯೋ

ಸಲ್ಮಾನ್ ಖಾನ್ ಅಭಿಯನದ ಟ್ಯೂಬ್‍ಲೈಟ್ ಚಿತ್ರದ ಟ್ರೈಲರ್

ಬಾಲಿವುಡ್ ಬಹುನಿರೀಕ್ಷಿತ ಚಿತ್ರ ಸಲ್ಮಾನ್ ಖಾನ್ ನಟನೆಯ ಟ್ಯೂಬ್‍ಲೈಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕಬೀರ್ ಖಾನ್ ನಿರ್ದೇಶಿಸಿದ್ದಾರೆ. ಟ್ಯೂಬ್‍ಲೈಟ್ ಚಿತ್ರ 1962ರಲ್ಲಿ ಚೀನಾ ಮತ್ತು ಭಾರತದ ನಡುವೆ ನಡೆದ ಯುದ್ಧದ ಸನ್ನಿವೇಶವನ್ನು ಒಳಗೊಂಡಿದೆ.

ಸಲ್ಮಾನ್ ಖಾನ್ ಅಭಿಯನದ ಟ್ಯೂಬ್‍ಲೈಟ್ ಚಿತ್ರದ ಟ್ರೈಲರ್
ಪುಟ್ಟ ಬಾಲಕಿಯನ್ನು ಕಚ್ಚಿ ನೀರಿಗೆಳೆದ ಕಡಲ ಸಿಂಹ

ಪುಟ್ಟ ಬಾಲಕಿಯನ್ನು ಕಚ್ಚಿ ನೀರಿಗೆಳೆದ ಕಡಲ ಸಿಂಹ

ಕೆನಡಾದ ಸ್ಟಿವೆಸ್ಟನ್ ಫಿಷರ್ ಮನ್ಸ್ ಹಡುಕಟ್ಟೆಯಲ್ಲಿ ಪುಟ್ಟ ಬಾಲಕಿಯನ್ನು ಕಡಲ ಸಿಂಹವೊಂದು ಕಚ್ಚಿ ನೀರಿಗೆಳೆದ ಘಟನೆ ನಡೆದಿದೆ. ಕಡಲ ಸಿಂಹವನ್ನು ಗಮನಿಸುತ್ತಿದ್ದ ಪ್ರವಾಸಿಗರು ಫೋಟೋ ಕ್ಲಿಕ್ಕಿಸುವುದರಲ್ಲಿ ಮಗ್ನರಾಗಿದ್ದರು. ಈ ವೇಳೆ ನೀರಿನಿಂದ ಮೇಲೆದ್ದ ಕಡಲ ಸಿಂಹ ಒಮ್ಮೆ ಬಾಲಕಿಯ ನ್ನು ಕಚ್ಚಿ ನೀರಿಗೆಳೆಯಿತು. ಕೂಡಲೇ ಅಲ್ಲೆ ಇದ್ದ ವ್ಯಕ್ತಿಯೊಬ್ಬ ಬಾಲಕಿಯನ್ನು ನೀರಿನಿಂದ ಮೇಲೆತ್ತಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪವಾಡ ಸದೃಶ್ಯ: ಬೆಂಗಳೂರಿನಲ್ಲಿ ಮೈ ಮೇಲೆ ಕಾರು ಹರಿದರು ಎದ್ದು ಕುಳಿತ ಮಗು

ಪವಾಡ ಸದೃಶ್ಯ: ಬೆಂಗಳೂರಿನಲ್ಲಿ ಮೈ ಮೇಲೆ ಕಾರು ಹರಿದರು ಎದ್ದು ಕುಳಿತ ಮಗು

ಬೆಂಗಳೂರಿನ ಜೆಪಿ ನಗರದಲ್ಲಿ ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಕಾರು ಹರಿದಿದ್ದರೂ ಅದೃಷ್ಟವಶಾತ್ ಮಗು ಯಾವುದೇ ಅಪಾಯವಿಲ್ಲದೇ ಎದ್ದು ನಿಂತಿದ್ದು ಅಚ್ಚರಿ ಮೂಡಿಸಿದೆ. 14 ತಿಂಗಳ ಮಗು ಶಟಲ್ ರಾಕೆಟ್ ಜತೆ ಆಟವಾಡಲು ಮನೆಯಿಂದ ಹೊರಬಂದಿದೆ. ಅಲ್ಲಿಯೇ ಇದ್ದ ಇನ್ನೊಂದು ಮಗುವಿನ ಜತೆ ಮಾತನಾಡುತ್ತಾ ರಸ್ತೆಗೆ ಬಂದಿದೆ. ಇದನ್ನು ಗಮನಿಸದ ಕಾರು ಚಾಲಕ ಕಾರನ್ನು ಹಿಂದಕ್ಕೆ ತೆಗೆದಿದ್ದಾನೆ. ಈ ವೇಲೆ ಕಾರಿನ ಎರಡು ಚಕ್ರಗಳು ಮಗುವಿನ ಮೇಲೆ ಹರಿದಿತ್ತು. ಆದರೂ ಮಗು ತಕ್ಷಣ ಎದ್ದು ನಿಂತಿದೆ.

ವಾರ್ ಫಾರ್ ದಿ ಪ್ಲಾನೆಟ್ ಆಫ್ ದಿ ಏಪ್ಸ್ ಚಿತ್ರದ ಅಂತಿಮ ಟ್ರೈಲರ್

ವಾರ್ ಫಾರ್ ದಿ ಪ್ಲಾನೆಟ್ ಆಫ್ ದಿ ಏಪ್ಸ್ ಚಿತ್ರದ ಅಂತಿಮ ಟ್ರೈಲರ್

ಪ್ಲಾನೆಟ್ ಆಫ್ ದಿ ಏಪ್ಸ್ ಸರಣಿಯ ಮೂರನೇ ಭಾಗ ವಾರ್ ಫಾರ್ ದಿ ಪ್ಲಾನೆಟ್ ಆಫ್ ದಿ ಏಪ್ಸ್ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು ಜೂನ್ 4ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಇದೀಗ ಚಿತ್ರ ತಂಡದ ಚಿತ್ರದ ಅಂತಿಮ ಟ್ರೈಲರ್ ಅನ್ನು ಬಿಡುಗಡೆಮಾಡಿದೆ. ಈ ಚಿತ್ರವನ್ನು ಡಾನ್ ಆಫ್ ದಿ ಪ್ಲಾನೆಟ್ ಆಫ್ ದಿ ಏಪ್ಸ್ ಚಿತ್ರದ ನಿರ್ದೇಶಕ ಮ್ಯಾಟ್ ರೀವ್ಸ್ ನಿರ್ದೇಶಿಸಿದ್ದಾರೆ.