ವಿಡಿಯೋ

ಕೋಕಿಲಾ ಚಿತ್ರದ ಟ್ರೇಲರ್

ಚಿತ್ರವು ವೈದ್ಯಕೀಯ ವಿದ್ಯಾರ್ಥಿನಿ ಕೋಕಿಲಾ ಮತ್ತು ವಿಜಯಕುಮಾರ್ ಎಂಬ ಇಂಜಿನಿಯರ್ ನಡುವಿನ ಪ್ರೀತಿಯ ಕುರಿತಾಗಿದ್ದು, ಕೋಕಿಲಾ ಪಾತ್ರದಲ್ಲಿ ಶೋಭಾ ಮತ್ತು ವಿಜಯ್ ಕುಮಾರ್ ಪಾತ್ರದಲ್ಲಿ ನಟ ಕಮಲ್ ಹಾಸನ್ ನಟಿಸಿದ್ದಾರೆ. ಈ ಚಿತ್ರವು ಖ್ಯಾತ ನಿರ್ದೇಶಕ ಬಾಲು ಮಹೇಂದ್ರ ಅವರ ನಿರ್ದೇಶನದ ಮೊಟ್ಟ ಮೊದಲ ಚಿತ್ರವಾಗಿದ್ದು, 1977ರಲ್ಲಿ ಚಿತ್ರವು ತೆರೆಕಂಡಿತ್ತು. ಈ ಚಿತ್ರ ಶುಕ್ರವಾರ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಶುಕ್ರವಾರ ಪ್ರದರ್ಶನಗೊಳ್ಳುತ್ತಿದೆ.

ಕೋಕಿಲಾ ಚಿತ್ರದ ಟ್ರೇಲರ್
'ಡಿಸೆಂಬರ್-1' ಚಿತ್ರದ ಟ್ರೇಲರ್

'ಡಿಸೆಂಬರ್-1' ಚಿತ್ರದ ಟ್ರೇಲರ್

ಚಿತ್ರವು ರೊಟ್ಟಿ ಮಾರಿ ಜೀವನ ನಡೆಸುವ ದೇವಕ್ಕ ಎಂಬ ಮಹಿಳೆಯ ಕುರಿತಾಗಿದ್ದು, ಸಂದರ್ಭವೊಂದರಲ್ಲಿ ರಾಜ್ಯದ ಮುಖ್ಯಮಂತ್ರಿಗಳು ದೇವಕ್ಕನ ಮನೆಗೆ ಆಗಮಿಸುತ್ತಾರೆ. ಈ ವೇಳೆ ದೇವಕ್ಕನ ಜೀವನದಲ್ಲಿ ನಡೆಯುವ ಕೆಲ ಘಟನೆಗಳು ಆಕೆಯ ಜೀವನವನ್ನು ಹೇಗೆ ಬದಲಿಸುತ್ತದೆ ಎಂಬುದು ಡಿಸೆಂಬರ್-1 ಚಿತ್ರದ ಕಥಾ ಹಂದರವಾಗಿದೆ. ಚಿತ್ರವನ್ನು ನಿರ್ದೇಶಕ ಪಿ.ಶೇಷಾದ್ರಿ ಅವರು ನಿರ್ದೇಶಿಸಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಶುಕ್ರವಾರ ಪ್ರದರ್ಶನಗೊಳ್ಳಲಿದೆ.

ಮಿ. ಕಪ್ಲಾನ್ ಚಿತ್ರದ ಟ್ರೇಲರ್

ಮಿ. ಕಪ್ಲಾನ್ ಚಿತ್ರದ ಟ್ರೇಲರ್

ಮೂಲತಃ ಉರುಗ್ವೆಯವನಾದ ಕಪ್ಲಾನ್ 2ನೇ ಮಹಾಯುದ್ಧದಲ್ಲಿ ನಾಜಿಗಳ ಮೇಲೆ ನಡೆಯುತ್ತಿದ್ದ ಕೌರ್ಯದಿಂದಾಗಿ ದಕ್ಷಿಣ ಅಮೆರಿಕಕ್ಕೆ ಪಲಾಯನ ಮಾಡಿದವನಾಗಿರುತ್ತಾನೆ. ಪ್ರಸ್ತುತ ಬೀಚ್ ಬಳಿ ಇರುವ ಬಾರ್ ಅವನ ಕುಟುಂಬದ ಜೀವನಾಧಾರವಾಗಿದ್ದು, 76 ವರ್ಷದ ಕಪ್ಲಾರ್ ತನ್ನ ಇಳಿವಯಸ್ಸಿನಲ್ಲಿ ತನ್ನ ಇತಿಹಾಸದ ಮೆಲುಕು ಹಾಕುತ್ತಿರುತ್ತಾನೆ. ಇತಿಹಾಸವನ್ನು ಮರುಕಳಿಸುವ ನಿಟ್ಟಿನಲ್ಲಿ ಜರ್ಮನ್ ಪ್ರಜೆಯನ್ನು ಅಪಹರಿಸಿ ಇಸ್ರೇಲಿಗೆ ಕರೆದೊಯ್ಯುವ ತವಕದಲ್ಲಿರುತ್ತಾನೆ. ಇದು ಕಪ್ಲಾನ್ ಚಿತ್ರದ ಸಂಕ್ಷಿಪ್ತ ಕಥೆಯಾಗಿದ್ದು, ಈ ಚಿತ್ರ ನಾಳೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.

ಕೆಆರ್‌ ಪುರಂನಲ್ಲಿ ಖಾಸಗಿ ಬಸ್‌ಗೆ ಬೆಂಕಿ

ಕೆಆರ್‌ ಪುರಂನಲ್ಲಿ ಖಾಸಗಿ ಬಸ್‌ಗೆ ಬೆಂಕಿ

ಕೋಲಾರದಿಂದ ಬೆಂಗಳೂರಿಗೆ ಬರುತ್ತಿದ್ದ ಶ್ರೀ ವೆಂಕಟೇಶ್ವರ ಟ್ರಾವೆಲ್ಸ್‌ಗೆ ಸೇರಿದ ಬಸ್ ಕೆಆರ್ ಪುರಂ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಪಲ್ಸರ್ ಬೈಕಿಗೆ ಡಿಕ್ಕಿ ಹೊಡೆದು ಬಳಿಕ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ ನ ಡೀಸೆಲ್ ಟ್ಯಾಂಕ್ ಸ್ಫೋಟಗೊಂಡಿದೆ. ಬೈಕ್‌ನಲ್ಲಿದ್ದ ಮೂವರು ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ.

ರಾಜ್ಯದ ಬಗ್ಗೆ ಅವಹೇಳನ: ವಿವಾದಾತ್ಮಕ 'ಫೈಡಿಂಗ್ ಫ್ಯಾನ್ನಿ' ಟ್ರೇಲರ್

ರಾಜ್ಯದ ಬಗ್ಗೆ ಅವಹೇಳನ: ವಿವಾದಾತ್ಮಕ 'ಫೈಡಿಂಗ್ ಫ್ಯಾನ್ನಿ' ಟ್ರೇಲರ್

ಬಾಲಿವುಡ್ ನ 'ಫೈಡಿಂಗ್ ಫ್ಯಾನ್ನಿ' ಚಿತ್ರದ ಸನ್ನಿವೇಶವೊಂದರಲ್ಲಿ ಕಾರೊಂದು ಕರ್ನಾಟಕದ ಗಡಿಯಲ್ಲಿ ಕೆಟ್ಟು ನಿಲ್ಲುತ್ತದೆ. ಕೋಪದಿಂದ ಕಾರಿನಿಂದ ಕೆಳಗೆ ಇಳಿಯುವ ನಾಯಕ ಅರ್ಜುನ್ ಕಪೂರ್ ಕೋಪದಿಂದ "ಬ್ಲಡಿ ಮೆಂಟಲ್ ಸ್ಟೇಟ್" ಎಂದು ಹೇಳುತ್ತಾನೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಚಿತ್ರವನ್ನು ಬಿಡುಗಡೆ ಮಾಡದಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ವಿವಾದಾತ್ಮಕ ಸಂಭಾಷಣೆಯ ತುಣುಕನ್ನು ಈ ವಿಡಿಯೋದಲ್ಲಿ ನೋಡಿ.