'ದಮ್ಮು, ತಾಕತ್ ಇದ್ರೆ ಬನ್ನಿ'; ಅಭಿಮಾನಿಗಳ ಮುಂದೆಯೇ ನಟ ಕಿಚ್ಚ ಸುದೀಪ್ ವಿರುದ್ಧ ಉಗ್ರಪ್ಪ ರೋಷಾವೇಶ!
ಯಾವ ಸಮಾಜದಲ್ಲಿ ಜಾಗೃತಿ, ವೈಚಾರಿಕತೆ, ಸಂಘಟನೆ ಇರುವುದಿಲ್ಲವೋ ಅಂತಹ ಸಮಾಜ ಉದ್ಧಾರ ಆಗುವುದಿಲ್ಲ. ಇಂದು ST ಸಮುದಾಯದ ಮೀಸಲಾತಿಯನ್ನು ಕೋರ್ಟ್ ಇಳಿಕೆ ಮಾಡಿದೆ. ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಬೇಕು ಎಂದರು.

ಚಿತ್ರದುರ್ಗ: ಮದಕರಿ ನಾಯಕರ ಜಯಂತ್ಯುತ್ಸವo ಅಂಗವಾಗಿ ಮಂಗಳವಾರ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ವೈಭವದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ವಿಎಸ್ ಉಗ್ರಪ್ಪ ನಟ ಕಿಚ್ಚ ಸುದೀಪ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾರ್ಯಕ್ರಮ ಉದ್ದೆಶಿಸಿ ಮಾತನಾಡಿದ ಅವರು, ಅಭಿಮಾನಿಗಳ ಮುಂದೆ, ನಾಯಕ ಸಮುದಾಯದ ಮಗನಾಗಿದ್ದರೆ ನಮ್ಮ ಸಮುದಾಯದ ಪರ ಧ್ವನಿ ಎತ್ತಿ. ಮೀಸಲಾತಿ ಹೋರಾಟಕ್ಕೆ ಕೈಜೋಡಿಸಿ, ಬೀದಿಗೆ ಬಂದು ಹೋರಾಟದಲ್ಲಿ ಪಾಲ್ಗೊಳ್ಳಿ. ದಮ್ಮು, ತಾಕತ್ ಇದ್ರೆ ನಮ್ಮ ಸಮುದಾಯದ ಮೀಸಲಾತಿ ಪರ ಹೋರಾಟಕ್ಕೆ ಬನ್ನಿ ಎಂದು ಸವಾಲೆಸೆದಿದ್ದಾರೆ.
ನಾಯಕ ಜನಾಂಗದ ಮನೆಯ ಮಗನಾಗಿದ್ದರೆ, ನಮ್ಮ ಜನರ ಮೀಸಲಾತಿಗಾಗಿ ಹೋರಾಡಿ. ಅಭಿಮಾನಿಗಳಿಂದ ಕೇಕೆ, ಶಿಳ್ಳೆ ಪಡೆಯೋದಲ್ಲ, ಜನಾಂಗದ ಪರ ಮೀಸಲಾತಿ ಹೋರಾಟಕ್ಕೆ ಬನ್ನಿ ಎಂದು ಉಗ್ರಪ್ಪ ಒತ್ತಾಯಿಸಿದ್ದಾರೆ.
ಯಾವ ಸಮಾಜದಲ್ಲಿ ಜಾಗೃತಿ, ವೈಚಾರಿಕತೆ, ಸಂಘಟನೆ ಇರುವುದಿಲ್ಲವೋ ಅಂತಹ ಸಮಾಜ ಉದ್ಧಾರ ಆಗುವುದಿಲ್ಲ. ಇಂದು ST ಸಮುದಾಯದ ಮೀಸಲಾತಿಯನ್ನು ಕೋರ್ಟ್ ಇಳಿಕೆ ಮಾಡಿದೆ. ಧಮ್ಮು, ತಾಕತ್ತು ಇದ್ದರೆ ಹೋರಾಟಕ್ಕೆ ಇಳಿಯಲಿ. ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಬೇಕು. ಮತ್ತೆ ಮೀಸಲಾತಿ ಪ್ರಮಾಣವನ್ನು ಶೇ 56ಕ್ಕೆ ಏರಿಸಬೇಕು ಎಂದಿದ್ದಾರೆ.
ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸಿ, ಮೀಸಲಾತಿ ಹೆಚ್ಚಿಸಬೇಕು. ಚಿತ್ರದುರ್ಗದ ಬಸ್ ನಿಲ್ದಾಣಕ್ಕೆ, ರೈಲು ನಿಲ್ದಾಣಕ್ಕೆ ಮದಕರಿ ನಾಯಕರ ಹೆಸರು ಇಡಬೇಕು. ಡಿಸಿ ಕಚೇರಿಗೆ ಮದಕರಿ ನಾಯಕರ ಹೆಸರು ಇಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ರಾಜ್ಯ ಸರ್ಕಾರ ಮದಕರಿ ನಾಯಕರ ಹೆಸರಲ್ಲಿ ಪ್ರಾಧಿಕಾರ ರಚನೆ ಮಾಡಬೇಕು. ಚಿತ್ರದುರ್ಗದಲ್ಲಿ ಮದಕರಿ ನಾಯಕರ ಹೆಸರಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು. ನೀವೆಲ್ಲ ಕಿಚ್ಚ ಕಿಚ್ಚ ಅಂತಾ ಕೂಗುತ್ತಿದ್ದಿರಿ. ಶೇ 56 ರಷ್ಟು ಮೀಸಲಾತಿ ಹೆಚ್ಚಳ ಹೋರಾಟಕ್ಕೆ ನಾಯಕರಾಗಿ ಎಂದು ನಟ ಸುದೀಪ್‌ಗೆ ನನ್ನ ಮನವಿ. ನನ್ನ ಕೊನೆಯ ಉಸಿರಿರುವವರೆಗೂ SC, ST, OBCಗಳ ಸೇವೆ ಮಾಡುತ್ತೇನೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



