ಸುದ್ದಿ

ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ ಟರ್ಕಿ ಅಧ್ಯಕ್ಷ

ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಬ್ ರಕ್ಷಿಸಿದ್ದು ಸಮಸ್ಯೆ ಪರಿಹಾರಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ ಟರ್ಕಿ ಅಧ್ಯಕ್ಷ
ಚೆನ್ನೈ ಪ್ರವಾಹಕ್ಕೆ ಸಿಲುಕಿದ್ದ ಗರ್ಭಿಣಿ ರಕ್ಷಣೆ, ಅವಳಿ ಮಕ್ಕಳಿಗೆ ಜನನ

ಚೆನ್ನೈ ಪ್ರವಾಹಕ್ಕೆ ಸಿಲುಕಿದ್ದ ಗರ್ಭಿಣಿ ರಕ್ಷಣೆ, ಅವಳಿ ಮಕ್ಕಳಿಗೆ ಜನನ

ಚೆನ್ನೈ ಪ್ರವಾಹದಲ್ಲಿ ಅಪಾಯಕ್ಕೆ ಸಿಲುಕಿದ್ದ ತುಂಬು ಗರ್ಭಿಣಿಯನ್ನು ವಾಯು ಸೇನೆ ರಕ್ಷಣೆ ಮಾಡಿದ್ದು, ಈ ದೃಶ್ಯಾವಳಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. 9 ತಿಂಗಳ ಗರ್ಭಿಣಿಯೊಬ್ಬರು ಪ್ರವಾಹಕ್ಕೆ ಸಿಲುಕಿ 3 ಅಂತಸ್ತಿನ ಮಹಡಿ ಮೇಲೆ ಆಶ್ರಯ ಪಡೆದಿದ್ದ ಮಹಿಳೆಗೆ ಯಾವಾಗ ಬೇಕಿದ್ದರೂ ಹೆರಿಗೆ ನೋವು ಕಾಣಿಸಿಕೊಳ್ಳಬಹುದು ಎಂದು ಪೋಷಕರು ಆತಂಕಕ್ಕೆ ಒಳಗಾಗಿದ್ದರು.ಈ ವಿಷಯ ತಿಳಿದ ವಾಯು ಸೇನೆಯ ಯೋಧರು ತಡಮಾಡದೇ ಹೆಲಿಕಾಪ್ಟರ್ ಮೂಲಕ ಆಗಮಿಸಿ, ಗರ್ಭಿಣಿಯನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇದೀಗ ಆ ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಚೀನಾದಲ್ಲಿ ಹೀಗೊಂದು ವಿಚಿತ್ರ ಅಪಘಾತ

ಚೀನಾದಲ್ಲಿ ಹೀಗೊಂದು ವಿಚಿತ್ರ ಅಪಘಾತ

ಚೀನಾದ ಕ್ಸಿಂಗ್‌ ಟೈ ಪ್ರದೇಶದ ಸಿಗ್ನಲ್‌ ಒಂದರಲ್ಲಿ ಕಾರುಗಳು ಇದ್ದಕ್ಕಿದ್ದಂತೆ ಗಾಳಿಯಲ್ಲಿ ಹಾರಿದ ವಿಲಕ್ಷಣ ಘಟನೆ ನಡೆದಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿಯಾಗುತ್ತಿದೆ. ಮೂರು ಕಾರುಗಳು ಗಾಳಿಯಲ್ಲಿ ಹಾರಿದೆ. ಆ ಪೈಕಿ ಒಂದು ಕಾರಿನ ಚಕ್ರ ಕಿತ್ತು ಬಂದಿದೆ. ಬಿಸಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಭೂತ-ಪ್ರೇತದ ಕೈವಾಡ ಎಂಬ ಆತಂಕವೂ ಮೂಡಿದೆ.

ಮುಂಬೈ-ಥಾಣೆ ಲೋಕಲ್ ಟ್ರೈನ್‍ನಿಂದ ಬಿದ್ದು ಯುವಕ ಸಾವು

ಮುಂಬೈ-ಥಾಣೆ ಲೋಕಲ್ ಟ್ರೈನ್‍ನಿಂದ ಬಿದ್ದು ಯುವಕ ಸಾವು

ಮುಂಬೈ-ಥಾಣೆ ಲೋಕಲ್‌ ಟ್ರೈನ್‌ ಡೋರ್‌ ಹಿಡಿದು ಜೋತು ಬಿದ್ದು ಪ್ರಯಾಣಿಸುತ್ತಿದ್ದ ಯುವಕ ಸಾವನ್ನಪ್ಪಿದ್ದಾನೆ. ಅದರ ಲೈವ್‌ ವಿಡಿಯೋ ಸೆರೆಯಾಗಿದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮುಂಬೈ ಯುವಕ ಇತರರಂತೆ ಟ್ರೈನ್‌ ಡೋರ್‌ ಹಿಡಿದು ಜೋತು ಬಿದ್ದಿದ್ದಾನೆ. ಆದರೆ ಮಾರ್ಗ ಮಧ್ಯದಲ್ಲಿ ನೂಕುನುಗ್ಗಲು ಉಂಟಾಗಿರುವ ಕಾರಣ ಆತ ಏಕಾಏಕಿಯಾಗಿ ಕಳೆಗೆ ಬಿದ್ದು ಸಾವನ್ನಪ್ಪಿದ್ದಾನೆ.

ಚೆಂದದ ನುಡಿ ಕನ್ನಡ-ಗಂಧದಗುಡಿ ಕರ್ನಾಟಕ

ಚೆಂದದ ನುಡಿ ಕನ್ನಡ-ಗಂಧದಗುಡಿ ಕರ್ನಾಟಕ

ಕರ್ನಾಟಕ ಅಮೂಲ್ಯ ಸಂಪನ್ಮೂಲಗಳ ನೆಲೆವೀಡಾಗಿದ್ದು, ಕನ್ನಡ ನಾಡಿನ ಅರಣ್ಯ ಸಂಪತ್ತು ಮತ್ತು ಸಂಪದ್ಭರಿತ ಭಾಷೆಯ ಮಹತ್ವ ಸಾರುವ ವಿಡಿಯೋವನ್ನು ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮತ್ತು ವನ್ಯಜೀವಿ ಛಾಯಾಗ್ರಾಹಕ ಮತ್ತು ಚಿತ್ರನಿರ್ಮಾಪಕ ಅಮೋಘ ವರ್ಷ ಅವರು ನಿರ್ಮಾಣ ಮಾಡಿದ್ದಾರೆ. ಈ ವಿಡಿಯೋಗೆ ಹೆಚ್ ಎಸ್ ವೆಂಕಟೇಶ್ ಮೂರ್ತಿ ಅವರು ಸಾಹಿತಿ ನೀಡಿದ್ದು, ಖ್ಯಾತ ಹಿನ್ನಲೆಗಾಯಕರಾದ ಎಂಡಿ ಪಲ್ಲವಿ ಮತ್ತು ವಿಜಯಪ್ರಕಾಶ್ ಅವರು ಧ್ವನಿ ನೀಡಿದ್ದಾರೆ.

ಬಾರಿಸು ಕನ್ನಡ ಡಿಂಡಿಮವ

ಬಾರಿಸು ಕನ್ನಡ ಡಿಂಡಿಮವ

ಕನ್ನಡ ಮರೆತಿರುವ ಕರ್ನಾಟಕದ ನಗರ ನಿವಾಸಿಗಳಲ್ಲಿ ಕನ್ನಡವನ್ನು ಬಡಿದೆಬ್ಬಿಸುವ ವಿನೂತನ ಪ್ರಯತ್ನವನ್ನು ಖ್ಯಾತ ಸಂಗೀತ ನಿರ್ದೇಶಕ ಪೂರ್ಣ ಚಂದ್ರ ತೇಜಸ್ವಿ ಮತ್ತು ನಿರ್ದೇಶಕ ಸುನಿಲ್ ಆರ್ ಅವರು ಮಾಡಿದ್ದು, ವಾರ್ತಾ ಇಲಾಖೆಯ ಸಹಯೋಗದಲ್ಲಿ ಈ ವಿಡಿಯೋವನ್ನು ಹೊರತಂದಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ ಬಾರಿಸು ಕನ್ನಡ ಡಿಂಡಿಮವ ಸಾಹಿತ್ಯಕ್ಕೆ ಹೊಸ ಶೈಲಿಯ ಸಂಗೀತ ಸಂಯೋಜನೆ ಮಾಡಲಾಗಿದ್ದು, ಈ ವಿಡಿಯೋ ಇದೀಗ ಯೂಟ್ಯೂಬ್ ನಲ್ಲಿ ಸಾಕಷ್ಟು ಖ್ಯಾತಿಗೆ ಒಳಗಾಗಿದೆ.

ನೀವು ತಿಳಿಯದ ಕನ್ನಡನಾಡು-ನುಡಿಯ ಸತ್ಯಗಳು

ನೀವು ತಿಳಿಯದ ಕನ್ನಡನಾಡು-ನುಡಿಯ ಸತ್ಯಗಳು

ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ಎನ್ನಲು ಸಾಕಷ್ಟು ಪುರಾವೆಗಳು ದೊರೆತಿವೆಯಾದರೂ, ಹಲವು ರಾಜಕೀಯ ಪರಿಸ್ಥಿತಿಗಳು ಕನ್ನಡವನ್ನು ಶಾಸ್ತ್ರೀಯ ಸ್ಥಾನಮಾನದಿಂದ ದೂರವಿಟ್ಟಿದ್ದವು. ಅದಾಗ್ಯೂ ಕನ್ನಡಿಗರ ಸತತ ಪರಿಶ್ರಮ ಹೋರಾಟದಿಂದಾಗಿ ಕನ್ನಡಕ್ಕೆ ಇತ್ತೀಚೆಗಷ್ಟೇ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ. ಕನ್ನಡ ನಡೆದು ಬಂದ ಹಾದಿ ಮತ್ತು ಕನ್ನಡ ಬಗೆಗೆ ನಾವು ತಿಳಿಯದ ಹಲವು ಐತಿಹಾಸಿಕ ಆಂಶಗಳ ಕುರಿತು ಈ ವಿಡಿಯೋ ಬೆಳಕು ಚೆಲ್ಲಲಿದೆ.