ಸುದ್ದಿ

ಫೋಟೋಗಾಗಿ ಜ್ಯೂಕರ್ ಬರ್ಗ್ ನನ್ನು ಪಕ್ಕಕ್ಕೆ ಎಳೆದ ಮೋದಿ? ವೈರಲ್ ಆದ ವಿಡಿಯೋ

ಸೆಲ್ಫಿ ಮತ್ತು ಫೋಟೋ ಪ್ರಿಯ ಎಂದು ವಿರೋಧಿಗಳಿಂದ ಕರೆಸಿಕೊಳ್ಳುವ ಮೋದಿ ಅವರ ಈ ಹೊಸ ವಿಡಿಯೋ ಮತ್ತೆ ಆಡಿಕೊಳ್ಳುವವರಿಗೆ ಆಹಾರವಾಗಿದೆ. ಈ ವಿಡಿಯೋದಲ್ಲಿ ಫೋಟೋಗೋಸ್ಕರ ಮೋದಿ ಅವರು ಜ್ಯೂಕರ್ ಬರ್ಗ್ ಅವರನ್ನು ಪಕ್ಕಕ್ಕೆ ಎಳೆದು ನಿಲ್ಲಿಸುವುದು ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದ್ದು, ಮೋದಿ ವಿರೋಧಿಗಳು ಈ ವಿಡಿಯೋವನ್ನು ಅತಿ ಹೆಚ್ಚು ಶೇರ್ ಮಾಡಿ ವೈರಲ್ ಮಾಡಿದ್ದಾರೆ. ಆದರೆ ಮೋದಿ ಪರ ನಿಂತವರ ಪ್ರಶ್ನೆ, ಪ್ರಧಾನಿಯಾದಾಕ್ಷಣ ಮಾನವನ ಮೂಲಭೂತ ಆಸೆ ಫೋಟೋದಲ್ಲಿ ಚೆನ್ನಾಗಿ ಕಾಣಿಸುವುದನ್ನು ತೊರೆದು ಜೀವಿಸಬೇಕೇ? ಎಂಬದು!

ಫೋಟೋಗಾಗಿ ಜ್ಯೂಕರ್ ಬರ್ಗ್ ನನ್ನು ಪಕ್ಕಕ್ಕೆ ಎಳೆದ ಮೋದಿ? ವೈರಲ್ ಆದ ವಿಡಿಯೋ
ಮೆಕ್ಕಾ ಕ್ರೇನ್ ದುರಂತದ ಭೀಕರ ದೃಶ್ಯವಳಿಯ ವಿಡಿಯೋ

ಮೆಕ್ಕಾ ಕ್ರೇನ್ ದುರಂತದ ಭೀಕರ ದೃಶ್ಯವಳಿಯ ವಿಡಿಯೋ

ಸುಮಾರು 107 ಮಂದಿಯ ಧಾರುಣ ಸಾವಿಗೆ ಕಾರಣವಾದ ಮುಸ್ಲಿಮರ ಪವಿತ್ರ ಕ್ಷೇತ್ರ ಮೆಕ್ಕಾದ ಕ್ರೇನ್ ದುರಂತದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಿರುಗಾಳಿ ಸಹಿತ ಮಳೆಗೆ ಸಿಲುಕಿದ ಕ್ರೇನ್ ಏಕಾಏಕಿ ಬೃಹತ್ ಮಸೀದಿಯ ಮೇಲೆ ಬಿದ್ದ ದೃಶ್ಯವನ್ನು ಪ್ರತ್ಯಕ್ಷದರ್ಶಿಗಳು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಹಳ್ಳಿಯ ಅತೀ ದೊಡ್ಡ ಹೆಸರನ್ನು ಚಾಣಾಕ್ಷವಾಗಿ ಉಚ್ಛರಿಸಿದ ನಿರೂಪಕ..!

ಹಳ್ಳಿಯ ಅತೀ ದೊಡ್ಡ ಹೆಸರನ್ನು ಚಾಣಾಕ್ಷವಾಗಿ ಉಚ್ಛರಿಸಿದ ನಿರೂಪಕ..!

ಚಾನೆಲ್ 4. ಬ್ರಿಟನ್ನಿನ ಈ ನ್ಯೂಸ್ ಚಾನೆಲ್ಲನ್ನು ಎಷ್ಟು ಜನ ಕೇಳಿದ್ದಾರೋ ಗೊತ್ತಿಲ್ಲ. ಆದರೆ, ಅದಕ್ಕಿಂತ ದುಪ್ಪಟ್ಟು ಪರಿಚಿತಗೊಂಡಿರುವ ಮನುಷ್ಯ ಆ ನ್ಯೂಸ್ ಚಾನೆಲ್ಲಿನ ಲಿಯಾಮ್ ಡಟನ್. ಈತ ಆ ಚಾನೆಲ್ಲಿನಲ್ಲಿ ವೆದರ್ ಆ್ಯಂಕರ್. ಮೊನ್ನೆ ಸೆ.9ರಂದು ಈತನ ಹೆಸರು ವಿಶ್ವವ್ಯಾಪಿ ಆಯಿತು. ಈತನ ಸ್ಪಷ್ಟ ಉಚ್ಛಾರಣೆಗೆ ಎಲ್ಲೆಡೆಯಿಂದ ಪ್ರಶಂಸೆ ಸುರಿದು ಬಂತು. ಅಂದಹಾಗೆ, ಈತನನ್ನು ಜಗವ್ಯಾಪಿ ಮಾಡಿಸಿದ್ದು ನಾರ್ತ್‍ವೆಸ್ಟ್ ವೇಲ್ಸ್ ನ ಒಂದು ಹಳ್ಳಿ.

ವಿಮಾನಕ್ಕೆ ಬೆಂಕಿ: ಕೂದಲೆಳೆ ಅಂತರದಲ್ಲಿ 172 ಮಂದಿ ಪಾರಾದ ವಿಡಿಯೋ

ವಿಮಾನಕ್ಕೆ ಬೆಂಕಿ: ಕೂದಲೆಳೆ ಅಂತರದಲ್ಲಿ 172 ಮಂದಿ ಪಾರಾದ ವಿಡಿಯೋ

ಅಮೆರಿಕಾದ ಲಾಸ್ ವೇಗಸ್ ನಲ್ಲಿ ಮಂಗಳವಾರ ಟೇಕ್ ಆಫ್ ಆಗಲು ಸಿದ್ಧವಾಗಿ ನಿಂತಿದ್ದ ಬ್ರಿಟಿಷ್ ಏರ್ ವೇಸ್ ನ ವಿಮಾನವೊಂದು ಬೆಂಕಿಗಾಹುತಿಯಾದ ಘಟನೆ ವರದಿಯಾಗಿದೆ. ಬೆಂಕಿ ಅವಗಡದಲ್ಲಿ 16 ಮಂದಿಗೆ ಸುಟ್ಟು ಗಾಯಗಳಾಗಿದ್ದು, ವಿಮಾನದಲ್ಲಿದ್ದ 172 ಮಂದಿ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಬಚಾವಾಗಿದ್ದಾರೆ. ನಿಲ್ದಾಣದಲ್ಲಿದ್ದ ಕೆಲ ಪ್ರಯಾಣಿಕರು ಈ ದೃಶ್ಯಗಳನ್ನು ಕ್ಯಾಮರಾಗಳಲ್ಲಿ ಸೆರೆ ಹಿಡಿದಿದ್ದು ಇದೀಗ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋ ಕೃಪೆ: ಡೈಲಿ ವಿಡಿಯೋಸ್

ಟೆಸ್ಟ್ ಡ್ರೈವ್ ನೆಪ ಹೇಳಿ ಹಾರ್ಲೆ ಡೇವಿಡ್ಸನ್ ಬೈಕ್‌ನೊಂದಿಗೆ ಕಳ್ಳ ಪರಾರಿ!

ಟೆಸ್ಟ್ ಡ್ರೈವ್ ನೆಪ ಹೇಳಿ ಹಾರ್ಲೆ ಡೇವಿಡ್ಸನ್ ಬೈಕ್‌ನೊಂದಿಗೆ ಕಳ್ಳ ಪರಾರಿ!

ಹೈದರಾಬಾದ್ ಬಂಜಾರಾ ಹಿಲ್ಸ್ ನ ಶೋರೂಂವೊಂದರಲ್ಲಿ ಖತರ್ನಾಕ್ ಕಳ್ಳನೊಬ್ಬ ಟೆಸ್ಟ್ ಡ್ರೈವ್ ನೆಪ ಹೇಳಿ 6 ಲಕ್ಷ ರು. ಮೊತ್ತದ ಹಾರ್ಲೆ ಡೇವಿಡ್ಸನ್ ಬೈಕ್ ನೊಂದಿಗೆ ಪರಾರಿಯಾಗಿದ್ದಾನೆ. ಬೈಕ್ ನೊಂದಿಗೆ ಕಳ್ಳ ಪರಾರಿಯಾಗಿದ್ದು, ಶೋರೂಂ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿದ್ದಾರೆ. ಕಳ್ಳ ಕಾಸ್ಟ್ಲಿ ಬೈಕ್ ನೊಂದಿಗೆ ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋ ಕೃಪೆ: ಟೆಕ್ ವರ್ಲ್ಡ್

ಅತ್ತಿತ್ತ ನೆಗೆದು ವೈಟ್ ಶಾರ್ಕ್ ನಿಂದ ಜೀವ ಉಳಿಸಿಕೊಂಡ ಸೀಲ್

ಅತ್ತಿತ್ತ ನೆಗೆದು ವೈಟ್ ಶಾರ್ಕ್ ನಿಂದ ಜೀವ ಉಳಿಸಿಕೊಂಡ ಸೀಲ್

ಪ್ರಾಣಿಗಳು ತಮ್ಮನ್ನು ಬೇಟೆಯಾಡುವ ಪ್ರಾಣಿಗಳಿಂದ ಜೀವ ಉಳಿಸಿಕೊಳ್ಳಲು ಹಲವಾರು ತಂತ್ರಗಳನ್ನು ಬಳಸುತ್ತವೆ. ಅಮೆರಿಕಾದ ಮೆಸೆಚ್ಯುಸ್ಸೆಟ್ಸ್ ನ ಕೇಪ್ ಗಾಡ್ ಬಳಿ ಅಟ್ಲಾಂಟಿಕ್ ವೈಟ್ ಶಾರ್ಕ್ ಸಂರಕ್ಷಣೆ ಸಂಸ್ಥೆ ತೆಗೆದಿರುವ ಈ ವಿಡಿಯೋದಲ್ಲಿ, ಬೂಧು ಬಣ್ಣದ ಸೀಲ್ ಪ್ರಾಣಿ, ತನ್ನನ್ನು ದಾಳಿ ಮಾಡಿದ ಗ್ರೇಟ್ ವೈಟ್ ಶಾರ್ಕ್ ನಿಂದ ಪ್ರಾಣ ಉಳಿಸಿಕೊಳ್ಳಲು ಅತ್ತಿತ್ತ ನೆಗೆದು ತಪ್ಪಿಸಿಕೊಳ್ಳುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಸೀಲ್ ಗಳು ಈ ರೀತಿ ವರ್ತಿಸುವುದು ಸರ್ವೇ ಸಾಮಾನ್ಯವಾದರೂ ಅಮೇರಿಕಾದಲ್ಲಿ ಈ ವರ್ತನೆ ಮೊದಲ ಬಾರಿಗೆ ದಾಖಲಾಗಿದೆಯಂತೆ. ಈ ವಿಡಿಯೋ ಪ್ರಾಣಿ ಸಂರಕ್ಷಕರು ಹಾಗು ವನ್ಯ ಉತ್ಸಾಹಿಗಳ ನಡುವೆ ವೈರಲ್ ಆಗಿದೆ.