ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಕಂಡ ಭೂಮಿ: ನಾಸಾ ವಿಡಿಯೋಅಮೇರಿಕಾ ಬಾಹ್ಯಾಕಾಶ ಸಂಸ್ಥೆ 'ನಾಸಾ' ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಕಾಣುವ ಭೂಮಿಯ ನೋಟದ ಮನಮೋಹಕ ದೃಶ್ಯಗಳನ್ನು ಸೆರೆಹಿಡಿದಿದೆ.
ಅಮೆರಿಕದಲ್ಲಿ ಕಾಡ್ಗಿಚ್ಚಿಗೆ ಸುಟ್ಟು ಕರಕಲಾದ ಕಾರು ಲಾರಿಗಳುಅಮೆರಿಕಾದ ದಕ್ಷಿಣ ಕ್ಯಾಲಿಫೋರ್ನಿಯಾ ಬೆಟ್ಟದಲ್ಲಿನ ಕಾಡ್ಗಿಚ್ಚು ಜನ ನಿಭಿಡ ರಸ್ತೆವರೆಗೂ ನುಗ್ಗಿ ಬಂದ ಪರಿಣಾಮ ಕಾರು ಸೇರಿದಂತೆ ವಿವಿಧ ವಾಹನಗಳಲ್ಲಿದ್ದ ಚಾಲಕರು ಓಡಿಹೋಗಿದ್ದರು. ಅಷ್ಟೇ ಅಲ್ಲ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿಗಳು ಹರಸಾಹಸಪಡಬೇಕಾಯಿತು. ಲಾಸ್ ವೇಗಾಸ್ ಮತ್ತು ಕ್ಯಾಲಿಫೋರ್ನಿಯಾದ ರಸ್ತೆಯ ಮೇಲೆ ಕಾಡ್ಗಿಚ್ಚು ಹಬ್ಬಿತ್ತು ಇದರಿಂದ ಭಯಗೊಂಡ ಸುಮಾರು 20 ಜನರು ತಮ್ಮ ವಾಹನಗಳನ್ನು ಬಿಟ್ಟು ಓಡಿಹೋಗಿದ್ದರು. ಕಾಡ್ಗಿಚ್ಚಿಗೆ 20ಕ್ಕೂ ಅಧಿಕ ವಾಹನಗಳು ಭಸ್ಮವಾಗಿ ಹೋಗಿ, ದಟ್ಟವಾದ ಕಪ್ಪು ಹೊಗೆ, ಬೆಂಕಿಯ ತಾಪದ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.ವಿಡಿಯೋ ಕೃಪೆ: ಅಸೋಸಿಯೇಟೆಡ್ ಪ್ರೆಸ್
ಹಸಿದ ಮೊಸಳೆಗೆ ಹಂದಿ ಆಹಾರವಾಗುವಂತೆ ಮಾಡಿದ ಪ್ರವಾಸಿಗರುಮನುಷ್ಯ ಸ್ವಭಾವತ ಕ್ರೂರಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ತನ್ನ ಸ್ವಾರ್ಥಕ್ಕಾಗಿ ಎಷ್ಟು ಕೀಳು ಮಟ್ಟಕ್ಕೆ ಇಳಿಯಬಲ್ಲ ಎನ್ನುವುದಕ್ಕೆ ಅಮೆರಿಕಾದಲ್ಲಿ ಈ ಪ್ರವಾಸಿಗರು ಕಾಡುಪ್ರಾಣಿಯೊಂದಿಗೆ ನಡೆದುಕೊಂಡ ರೀತಿಯೇ ಉತ್ತಮ ಉದಾಹರಣೆ. ಲೂಸಿಯಾನಾದ ನ್ಯೂ ಆರ್ಲಿಯನ್ಸ್ ನಲ್ಲಿ ಮೊಸಳೆಗಳು ಇರುವ ಹೊಳೆಯಲ್ಲಿ ಬೋಟ್ ಒಂದರಲ್ಲಿ ಸಾಗುತ್ತಿದ್ದ ಪ್ರವಾಸಿಗರು ಹೊಳೆಯ ದಡದಲ್ಲಿ ಗುಂಪಾಗಿ ನಿಂತಿದ್ದ ಕಾಡು ಹಂದಿಗಳಿಗೆ ಬ್ರೆಡ್ಡಿನ ತುಂಡುಗಳನ್ನು ಎಸೆದು ಅವುಗಳಲ್ಲಿನ ಒಂದು ಹಂದಿ ಹಸಿದ ಮೊಸಳೆಗೆ ಆಹಾರವಾಗುವಂತೆ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಗುರಿಯಾಗಿದೆ.
ಬೀಚಿಗೆ ಬಂದ ಶಾರ್ಕ್ ಮರಿ; ರಕ್ಷಣೆಇಂಗ್ಲೆಂಡಿನ ಚಾತಮ್ ನಗರದ ಕೇಪ್ ಗಾಡ್ ಬೀಚಿಗೆ ಸೋಮವಾರ ವಿಶೇಶ ಅತಿಥಿ ಭೇಟಿ ನೀಡಿದೆ. ದಿ ಗ್ರೇಟ್ ವೈಟ್ ಶಾರ್ಕ್ ಜಾತಿಯ ಮರಿಯೊಂದು ತೇಲಿ ದಡಕ್ಕೆ ಬಂದಿದೆ. ಈ ಶಾರ್ಕ್ ಮರಿ ಏಳು ಅಡಿ ಉದ್ದವಿತ್ತು ಎಂಬುದು ಪ್ರತ್ಯಕ್ಷದರ್ಶಿಗಳ ಅಂಬೋಣ. ರಕ್ಷಣಾ ಅಧಿಕಾರಿಗಳು ಬರುವವರೆಗೆ ಬೀಚಿನಲ್ಲಿ ನೆರೆದಿದ್ದ ಜನ ಶಾರ್ಕ್ ಮೇಲೆ ನೀರು ಸುರಿದು ಅದು ಜೀವಂತವಾಗಿರುವಂತೆ ನೋಡಿಕೊಂಡು ಪ್ರಾಣಿಸ್ನೇಹ ಮೆರೆದಿದ್ದಾರೆ. ನಂತರ ಅಧಿಕಾರಿಗಳು ಶಾರ್ಕ್ ರಕ್ಷಣೆ ಮಾಡಿ ಸಮುದ್ರಕ್ಕೆ ಕೊಂಡೊಯ್ದು ಬಿಟ್ಟ ವಿಡಿಯೋ ಇದು.
ಅಚ್ಚರಿ: ಕೇವಲ 7 ನಿಮಿಷದಲ್ಲಿ ಬುಲೆಟ್ ರೈಲು ಸ್ವಚ್ಛ..!ವಿಶ್ವದಲ್ಲೇ ಅತ್ಯಂತ ಬಲಿಷ್ಠ, ಸುಭದ್ರ ಮತ್ತು ವೇಗದ ರೈಲಿನ ವ್ಯವಸ್ಥೆಯನ್ನು ಹೊಂದಿರುವ ರಾಷ್ಟ್ರಗಳಲ್ಲಿ ಜಪಾನ್ ಅಗ್ರಗಣ್ಯ. ಜಪಾನ್ ರಾಜಧಾನಿ ಟೋಕಿಯಾದಲ್ಲಿ ಪ್ರತಿನಿತ್ಯ ಸುಮಾರು 4 ಲಕ್ಷಕ್ಕೂ ಅಧಿಕ ಮಂದಿ ಈ ಬುಲೆಟ್ ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಇಂತಹ ಜನನಿಭಿಡ ರೈಲುಗಳನ್ನು ಸ್ವಚ್ಛಗೊಳಿಸಲು ಎಷ್ಟು ಸಮಯ ಬೇಕುಗೊತ್ತೆ..? ಕೇವಲ 7 ನಿಮಿಷ.. ಅಚ್ಚರಿಯಾದರೂ ಇದು ಸತ್ಯ. ಅಲ್ಲಿನ ಸಿಬ್ಬಂದಿಗಳು ಒಂದು ಬುಲೆಟ್ ರೈಲನ್ನು ಕೇವಲ 7 ನಿಮಿಷದಲ್ಲಿ ಸ್ವಚ್ಛಗೊಳಿಸುತ್ತಾರೆ. ಅವರ ಈ ಬದ್ಧತೆಗೆ ಹ್ಯಾಟ್ಸ್ ಆಫ್ ಹೇಳಲೇಬೇಕು.(ಕೃಪೆ: ಯೂಟ್ಯೂಬ್)
ಸಿಸಿಟಿವಿ ದೃಶ್ಯ: ಮುಂಬೈ ರೈಲು ನಿಲ್ದಾಣದಲ್ಲಿ ಪ್ಲ್ಯಾಟ್ ಫಾರ್ಮ್ ಗೆ ನುಗ್ಗಿದ ರೈಲುಕಳೆದ ಭಾನುವಾರ ಮುಂಬೈನ ಚರ್ಚ್ ಗೇಟ್ ರೈಲ್ವೇ ನಿಲ್ದಾಣದಲ್ಲಿ ಡೆಡ್ ಎಂಡ್ ಗೆ ಢಿಕ್ಕಿ ಹೊಡೆದ ಲೋಕಲ್ ರೈಲು, ಪ್ಲ್ಯಾಟ್ ಫಾರ್ಮ್ ಗೆ ಜಿಗಿದ ಸಿಸಿಟಿವಿ ದೃಶ್ಯ. ಎಂಜಿನ್ ನಿರ್ವಾಹಕ ಬ್ರೇಕ್ ಹಾಕಲು ವಿಫಲನಾದದ್ದೇ ಇದಕ್ಕೆ ಕಾರಣ ಎಂದು ತಿಳಿದುಬಂದಿದ್ದು, ಈ ಘಟನೆಯಿಂದ ಐವರು ಗಾಯಗೊಂಡಿದ್ದರು. Courtesy: YouTube
ಡೆಡ್ ಎಂಡ್ ಗೆ ಢಿಕ್ಕಿ ಹೊಡೆದು ಮೇಲಕ್ಕೆ ಜಿಗಿದ ರೈಲು; ಐವರಿಗೆ ಗಾಯಭಾನುವಾರ ಮುಂಬೈನ ಚರ್ಚ್ ಗೇಟ್ ರೈಲ್ವೇ ನಿಲ್ದಾಣದ ಬಳಿ ಡೆಡ್ ಎಂಡ್ ಗೆ ಢಿಕ್ಕಿ ಹೊಡೆದ ಪ್ರಯಾಣಿಕರ ರೈಲ್ಲೊಂದು ಪ್ಲ್ಯಾಟ್ ಫಾರ್ಮ್ನಿಂದ ಮೇಲಕ್ಕೆ ಜಿಗಿದಿದೆ. ಎಂಜಿನ್ ನಿರ್ವಾಹಕ ಬ್ರೇಕ್ ಹಾಕಲು ವಿಫಲನಾದದ್ದೇ ಇದಕ್ಕೆ ಕಾರಣ ಎಂದು ತಿಳಿದುಬಂದಿದ್ದು, ಈ ಘಟನೆಯಿಂದ ಐವರು ಗಾಯಗೊಂಡಿದ್ದಾರೆ.
ವಿಜಯ್ ಕಾಂತ್ "ಕನ್ ಫ್ಯೂಸ್ ಯೋಗ"..!ಖ್ಯಾತ ತಮಿಳುನಟ ಮತ್ತು ರಾಜಕಾರಣಿ ವಿಜಯ್ ಕಾಂತ್ ಅವರು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇದರಲ್ಲೇನು ವಿಶೇಷ ಎಂದರೆ ಯೋಗ ಕಾರ್ಯಕ್ರಮ ಆಯೋಜಿಸಿದ್ದ ವಿಜಯ್ ಕಾಂತ್ ಅವರೇ ಯೋಗ ಮಾಡುವಲ್ಲಿ ವಿಫಲರಾದರು. ತಮ್ಮ ಶಿಷ್ಯರೇ ಹೇಳಿಕೊಡುತ್ತಿದ್ದ ಯೋಗ ಪಾಠವನ್ನು ಕಲಿಯಲಾಗದೇ ಕನ್ ಫ್ಯೂಸ್ ಮಾಡಿಕೊಂಡು ತಮ್ಮದೇ ಶೈಲಿಯಲ್ಲಿ ಹಾಸ್ಯಾತ್ಮಕ "ಕನ್ ಫ್ಯೂಸ್ ಯೋಗ" ಮಾಡಿದ್ದಾರೆ.
ಹಾವಿನೊಡನೆ ಹೋರಾಡಿ ಮರಿಗಳ ರಕ್ಷಿಸಿದ ತಾಯಿ ಮೊಲ..!ಮರಿಗಳ ರಕ್ಷಣೆಗೆ ತಾಯಿ ಧಾವಿಸುವುದು ಸಾಮಾನ್ಯವೇ ಆದರೂ, ಸಾಧುಪ್ರಾಣಿ ಮೊಲವೊಂದು ತನ್ನ ಮರಿಗಳ ರಕ್ಷಣೆಗೆ ಜೀವದ ಹಂಗು ತೊರೆದು ವಿಷಕಾರಿ ಹಾವಿನೊಂದಿಗೆ ಹೋರಾಡಿರುವ ನೈಜ ದೃಶ್ಯಾವಳಿಗಳು ಇದೀಗ ಯೂಟ್ಯೂಬ್ ನಲ್ಲಿ ಹರಿದಾಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಇನ್ನು ವಿಡಿಯೋವನ್ನು ಸುಮಾರು 43 ಲಕ್ಷ ಜನರು ವೀಕ್ಷಿಸಿದ್ದು, ರಮಾಕಾಂತ್ ಪಿ ಎಂಬುವವರು ಈ ವಿಡಿಯೋವನ್ನು ಯೂಟ್ಯೂಬ್ ಗೆ ಅಪ್ಲೋಡ್ ಮಾಡಿದ್ದಾರೆ.
ದೆಹಲಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆರಾಜಧಾನಿ ದೆಹಲಿಯ ರಾಜಪಥದಲ್ಲಿ ಕೇಂದ್ರ ಆಯುಷ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಯೋಗದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನವನ್ನು ಆಚರಣೆ ಮಾಡುವ ಮೂಲಕ ಮನುಕುಲದ ಶಾಂತಿ-ಸಹಬಾಳ್ವೆಯ ಹೊಸ ಯುಗಕ್ಕೆ ನಾವು ನಾಂದಿ ಹಾಡಿದ್ದೇವೆ ಎಂದು ಹೇಳಿದ್ದಾರೆ.
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video
ಬಾಲಿವುಡ್'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್