ಸುದ್ದಿ

೫೦ ವರ್ಷಗಳ ನಂತರ ಸೆನ್ಸಾರ್ ಪಡೆದ ಮೊದಲ ಕನ್ನಡ ಡಬ್ಬಿಂಗ್ ಚಿತ್ರದ ಹಾಡು

ಕರ್ನಾಟಕದಲ್ಲಿ ಸಿನೆಮಾ ಡಬ್ಬಿಂಗ್ ನಿಷೇಧವನ್ನು ವಿರೋಧಿಸಿ ಹಲವಾರು ಸಂಘಟನೆಗಳು ಕೆಲಸ ಮಾಡಿವೆ. ಈಗ ಡಬ್ಬಿಂಗ್ ನಿಷೇಧ ವಿರೋಧಿ ಗುಂಪುಗಳಿಗೆ ಮೇಲುಗೈ ಸಿಕ್ಕ ಈ ಘಟನೆಯಲ್ಲಿ ೫೦ ವರ್ಷಗಳ ನಂತರ 'ನಾನು ನನ್ನ ಪ್ರೀತಿ' ಎಂಬ ಡಬ್ಬಿಂಗ್ ಸಿನೆಮಾಗೆ ಮೊದಲ ಬಾರಿ ಸೆನ್ಸಾರ್ ಮಂಡಲಿ ಪ್ರಮಾಣಪತ್ರ ನೀಡಿದೆ! ಆ ಚಿತ್ರದ ಹಾಡೊಂದು ಇಲ್ಲಿದೆ ಕೇಳಿ.

೫೦ ವರ್ಷಗಳ ನಂತರ ಸೆನ್ಸಾರ್ ಪಡೆದ ಮೊದಲ ಕನ್ನಡ ಡಬ್ಬಿಂಗ್ ಚಿತ್ರದ ಹಾಡು
ಭೀಕರ ರಸ್ತೆ ಅಪಘಾತದಲ್ಲಿ ಪವಾಡ ಸದೃಶ್ಯ ಪಾರಾದ ಯುವತಿಯರು

ಭೀಕರ ರಸ್ತೆ ಅಪಘಾತದಲ್ಲಿ ಪವಾಡ ಸದೃಶ್ಯ ಪಾರಾದ ಯುವತಿಯರು

ವೇಗವಾಗಿ ಬರುತ್ತಿದ್ದ ಮಿನಿ ಎಸ್ಯುವಿ ಕಾರು ಯುವತಿಯರು ಚಲಾಯಿಸುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದರು. ಪವಾಡ ಸದೃಶ್ಯ ಯುವತಿಯರಿಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿರುವ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದ್ದು. ಭೀಕರ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. Video courtesy: Newsline Compact

ಭ್ರಷ್ಟ ಪಂಚಾಯಿತಿ ಅಧಿಕಾರಿಗೆ ಪಾಠ ಕಲಿಸಿದ "ಲೇಡಿ ಸಿಂಗಂ"

ಭ್ರಷ್ಟ ಪಂಚಾಯಿತಿ ಅಧಿಕಾರಿಗೆ ಪಾಠ ಕಲಿಸಿದ "ಲೇಡಿ ಸಿಂಗಂ"

ಮಧ್ಯಪ್ರದೇಶದ ಸಿಂಗ್ರೌಲಿ ಗ್ರಾಮದ ಪಂಚಾಯಿತಿ ಕಾರ್ಯದರ್ಶಿ ರಾಮ್ ಸುಭಾಷ್ ಎಂಬಾತ ಶೌಚಾಲಯ ನಿರ್ಮಾಣದ ಹೆಸರಲ್ಲಿ ಸರ್ಕಾರದ ಹಣ ಗುಳುಂ ಮಾಡಿ ಐಎಎಸ್ ಅಧಿಕಾರಿ ನಿಧಿ ನಿವೇದಿತಾ ಅವರ ಕೈಗೆ ಸಿಕ್ಕಿಬಿದ್ದಿದ್ದಾನೆ. ಪಂಚಾಯಿತಿ ಕಾರ್ಯದರ್ಶಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಐಎಎಸ್ ಅಧಿಕಾರಿ ಗ್ರಾಮಸ್ಥರ ಮುಂದೆಯೇ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಮೆರಿಕ ಅಧ್ಯಕ್ಷ ಒಬಾಮ ಅವರ ನಿವೃತ್ತಿಯ ನಂತರದ ಯೋಜನೆಗಳೇನು? ಈ ವಿಡಿಯೋ ನೋಡಿ

ಅಮೆರಿಕ ಅಧ್ಯಕ್ಷ ಒಬಾಮ ಅವರ ನಿವೃತ್ತಿಯ ನಂತರದ ಯೋಜನೆಗಳೇನು? ಈ ವಿಡಿಯೋ ನೋಡಿ

ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಇನ್ನು 8 ತಿಂಗಳಿನಲ್ಲಿ ನಿವೃತ್ತಿಯಾಗಲಿದ್ದು. ತಮ್ಮ ನಿವೃತ್ತಿ ಜೀವನ ಹೀಗಿರಬಹುದು ಎಂದು ಕಲ್ಪಿಸಿಕೊಂಡು ಸ್ವತಃ ಬರಾಕ್ ಒಬಾಮಾ ಅವರೇ ವಿಡಿಯೋವೊಂದನ್ನು ಸಿದ್ಧಪಡಿಸಿದ್ದಾರೆ. ಶ್ವೇತ ಭವನದಲ್ಲಿ ಆಯೋಜಿಸಿದ್ದ ಔತಣ ಸಮಾರಂಭದಲ್ಲಿ ವಿಡಿಯೋ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ.

ಭಾರತದ ಲೇಸರ್ ಬೇಲಿ ಹೇಗೆ ಕೆಲಸ ಮಾಡುತ್ತದೆ ಗೊತ್ತಾ?

ಭಾರತದ ಲೇಸರ್ ಬೇಲಿ ಹೇಗೆ ಕೆಲಸ ಮಾಡುತ್ತದೆ ಗೊತ್ತಾ?

ಅತ್ಯಾಧುನಿಕ ತಂತ್ರಜ್ಞಾನದ ಈ ಲೇಸರ್ ಬೇಲಿ ಉಗ್ರರು ಹೇಗೇ ಗಡಿ ಪ್ರವೇಶ ಮಾಡಿದರೂ ಅದರ ಸಂಪೂರ್ಣ ಮಾಹಿತಿಯನ್ನು ನಿಯಂತ್ರಣ ಕೊಠಡಿಗೆ ರವಾನಿಸುತ್ತದೆ. ತಂತಿಬೇಲಿ ಕತ್ತರಿಸಿ ಒಳನುಸುಳಿದರೆ, ಬೇಲಿ ಮೇಲಿಂದ ಹಾರಿದರೂ ಸರಿ ಕ್ಷಣಾರ್ಧದಲ್ಲಿ ಸೈನಿಕರಿಗೆ ಸಂದೇಶ ರವಾನೆಯಾಗುತ್ತದೆ. ಈ ಲೇಸರ್ ಬೇಲಿ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ.

ಕೋಲ್ಕತಾ ಫ್ಲೈ ಓವರ್ ಕುಸಿತ ದುರಂತದ ಭೀಕರ ದೃಶ್ಯ

ಕೋಲ್ಕತಾ ಫ್ಲೈ ಓವರ್ ಕುಸಿತ ದುರಂತದ ಭೀಕರ ದೃಶ್ಯ

ಉತ್ತರ ಕೊಲ್ಕತ್ತಾದ ಬಾಬಾ ಬಜಾರ್‌ನಲ್ಲಿರುವ ಹಳೆಯ ಗಣೇಶ್ ಟಾಕೀಸ್ (ಗಿರೀಶ್ ಪಾರ್ಕ್) ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ವಿವೇಕಾನಂದ ಫ್ಲೈಓವರ್ ಕುಸಿದು ಬಿದ್ದು, ಸುಮಾರು 17 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಪ್ರಸ್ತುತ ಅವಶೇಷಗಳಡಿ 150ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆಗ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಇನ್ನು ಈ ದುರಂತದ ಭೀಕರ ದೃಶ್ಯಾವಳಿ ಸ್ಥಳೀಯ ಸಿಸಿಟಿವಿಯೊಂದರಲ್ಲಿ ಸೆರೆಯಾಗಿದೆ.

ವಿಮಾನದ ಕ್ಯಾಮೆರಾದಲ್ಲಿ ಸೆರೆಯಾದ ಅಪರೂಪದ ಸೂರ್ಯಗ್ರಹಣ

ವಿಮಾನದ ಕ್ಯಾಮೆರಾದಲ್ಲಿ ಸೆರೆಯಾದ ಅಪರೂಪದ ಸೂರ್ಯಗ್ರಹಣ

ಬುಧವಾರ ಬೆಳಗ್ಗೆ ಗೋಚರವಾದ ಸೂರ್ಯಗ್ರಹಣದ ಸಂಪೂರ್ಣ ಚಿತ್ರಣವನ್ನು ಅಲಸ್ಕಾ ಏರ್ ಲೈನ್ಸ್ ಸಂಸ್ಥೆಯ ವಿಮಾನ ಸುಮಾರು 35 ಸಾವಿರ ಅಡಿಗಳ ಎತ್ತರದಿಂದ ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಈ ಅಪೂರ್ವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಮಾನ ಸೆರೆ ಹಿಡಿದ ಸೂರ್ಯಗ್ರಹಣದ ವಿಡಿಯೋ ಇಲ್ಲಿದೆ.

ನಡುರಸ್ತೆಯಲ್ಲೇ ಅಡ್ಡಾಡಿದ ಹುಲಿರಾಯ

ನಡುರಸ್ತೆಯಲ್ಲೇ ಅಡ್ಡಾಡಿದ ಹುಲಿರಾಯ

ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟನೆ ಅಧಿಕ ಅಂತಹ ದಟ್ಟನೆಯಲ್ಲಿ ಹುಲಿಯೊಂದು ರಸ್ತೆ ಮಧ್ಯೆ ಅಡ್ಡಾಡಿದರೆ ಜನರ ಪರಿಸ್ಥಿತಿ ಏನಾಗಬಹುದು. ಹೌದು ಇಂಥದ್ದೊಂದು ಘಟನೆ ನಡೆದಿದ್ದು ಖತಾರ್‌ನ ದೋಹಾದಲ್ಲಿ. ಜನ ನೋಡ ನೋಡುತ್ತಿದ್ದಂತೆಯೇ ಒಂದು ಲಾರಿಯಿಂದ ಹುಲಿ ಛಂಗನೇ ನೆಗೆದಿದ್ದಲ್ಲದೇ ಇಡೀ ರಸ್ತೆಯಲ್ಲಿ ಅಡ್ಡಾಡಿದೆ! ಟ್ರಾಫಿಕ್‌ ಇರುವಾಗಲೇ ಹುಲಿ ಅಡ್ಡಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು ಅಂತರ್ಜಾಲದಲ್ಲಿ ವೈರಲ್‌ ಆಗಿದೆ.