ದಾಳಿ ನಿರತ ರಷ್ಯಾ ಸೇನಾಹೆಲಿಕಾಪ್ಟರ್ ಹೊಡೆದುರುಳಿಸಿದ ಇಸಿಸ್; ಕ್ಯಾಮೆರಾದಲ್ಲಿ ರೋಚಕ ದೃಶ್ಯ ಸೆರೆ
ಸಿರಿಯಾದಲ್ಲಿ ಇಸಿಸ್ ಉಗ್ರಗಾಮಿ ನೆಲೆಗಳ ಮೇಲೆ ವಾಯುದಾಳಿ ಮುಂದುವರೆಸಿರುವ ರಷ್ಯಾಗೆ ಶನಿವಾರ ಭಾರಿ ಹಿನ್ನಡೆಯಾಗಿದ್ದು, ಉಗ್ರಗಾಮಿ ಸಂಘಟನೆ ಕ್ಷಿಪಣಿ ಬಳಕೆ ಮಾಡಿ ರಷ್ಯಾದ ದಾಳಿ ನಿರತ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದೆ. ಹೆಲಿಕಾಪ್ಟರ್ ರಕ್ಷಣೆಗೆ ಹರಸಾಹಸ ಪಟ್ಟ ಪೈಲಟ್ ಗಳು ಕೊನೆಗೆ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಈ ರೋಚಕ ದಾಳಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.


