ಮನರಂಜನೆ

ವೈರಲ್ ಆಗ್ತಿದೆ ಚೌಕ ಚಿತ್ರದ ಅಲ್ಲಾಡ್ಸು ಅಲ್ಲಾಡ್ಸು ವಿಡಿಯೋ ಸಾಂಗ್

ಸ್ಯಾಂಡಲ್ವುಡ್ ನಟ, ನಿರ್ಮಾಪಕ ದ್ವಾರಕೀಶ್ ನಿರ್ಮಾಣದ ಚೌಕ ಚಿತ್ರ ಹಲವು ವಿಶೇಷತೆಗಳಿಂದ ಹೆಸರು ಮಾಡುತ್ತಿದ್ದು, ಇದೀಗ ಚಿತ್ರದಲ್ಲಿನ ವಿಡಿಯೋ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ವಿ ಹರಿಕೃಷ್ಣ ಸಂಗೀತ ನೀಡಿರುವ ಯೋಗರಾಜ್ ಭಟ್ ಬರೆದಿರುವ ಟಿಪಿಕಲ್ ಸಾಹಿತ್ಯ ಹೊಂದಿರುವ ಅಲ್ಲಾಡ್ಸು ಅಲ್ಲಾಡ್ಸು ವಿಡಿಯೋ ಸಾಂಗ್ ಹೆಚ್ಚು ಜನಪ್ರಿಯವಾಗಿದೆ.

ವೈರಲ್ ಆಗ್ತಿದೆ ಚೌಕ ಚಿತ್ರದ ಅಲ್ಲಾಡ್ಸು ಅಲ್ಲಾಡ್ಸು ವಿಡಿಯೋ ಸಾಂಗ್
ಏಲಿಯನ್: ಕೊವೆನಂಟ್ ಚಿತ್ರದ ಟ್ರೈಲರ್

ಏಲಿಯನ್: ಕೊವೆನಂಟ್ ಚಿತ್ರದ ಟ್ರೈಲರ್

ಗ್ಲಾಡಿಯೆಟರ್ ಚಿತ್ರ ನಿರ್ದೇಶಕ ರಿಡ್ಲೆ ಸ್ಕಾಟ್ ನಿರ್ದೇಶನದ ಏಲಿಯನ್ಕೊವೆನಂಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಮೈಕಲ್ ಪಾಸ್ಬೊಂಡರ್, ಕಥ್ರೈನ್ ವಾಟರ್ಸ್ಟೊನ್, ಬಿಲ್ಲಿ ಕ್ರೂಡಪ್ ಡ್ಯಾನಿ ಮೈಕ್ಬ್ರಿಡ್ ನಟಿಸಿದ್ದಾರೆ. ಏಲಿಯನ್ ಕುರಿತಾದ ಕಥೆಯನ್ನು ಚಿತ್ರ ಹೊಂದಿದೆ. ಇನ್ನು 2017ರ ಮೇ 19ರಂದು ವಿಶ್ವದಾದ್ಯಂತ ಚಿತ್ರ ತೆರೆಗೆ ಬರಲಿದೆ.

ಪಂಚ್ ಡೈಲಾಗಳೇ ಹೆಚ್ಚಾಗಿರುವ ಕಿರೀಟ ಚಿತ್ರದ ಟ್ರೈಲರ್

ಪಂಚ್ ಡೈಲಾಗಳೇ ಹೆಚ್ಚಾಗಿರುವ ಕಿರೀಟ ಚಿತ್ರದ ಟ್ರೈಲರ್

ಹೊಸಬರೇ ಸೇರಿ ಮಾಡಿರುವ ಕಿರೀಟ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನವನಿರ್ದೇಶಕ ಕಿರಣ್ ಚಂದ್ರ ನಿರ್ದೇಶಿಸಿದ್ದರೆ, ಚಂದ್ರಶೇಖರ್ ನಿರ್ಮಿಸಿದ್ದಾರೆ. ಸಮರ್ಥ ಎಂಬ ಹೊಸ ಹುಡುಗ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಬಿಜಿಆರ್ ಪಿಕ್ಟರ್ಸ್ ಲಾಂಛನದಲ್ಲಿ ಚಿತ್ರ ತಯಾರಾಗಿದೆ.

ಮತ್ತೆ 'ತಿಥಿ' ನಟರು; 'ಏನ್ ನಿನ್ ಪ್ರಾಬ್ಲಮ್ಮು' ಸಿನೆಮಾ ಟ್ರೇಲರ್

ಮತ್ತೆ 'ತಿಥಿ' ನಟರು; 'ಏನ್ ನಿನ್ ಪ್ರಾಬ್ಲಮ್ಮು' ಸಿನೆಮಾ ಟ್ರೇಲರ್

'ತಿಥಿ' ಸಿನೆಮಾದ ನಟರುಗಳನ್ನೊಳಗೊಂಡ 'ತರ್ಲೆ ವಿಲೇಜ್' ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಈ ಮುಗ್ಧ ನಟರನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು 'ತಿಥಿ' ನಿರ್ದೇಶಕ ರಾಮ್ ರೆಡ್ಡಿ ಮತ್ತು ಕಥೆಗಾರ ಈರೇ ಗೌಡ ಆಕ್ರೋಶ ವ್ಯಕ್ತಪಡಿಸಿದ್ದರು, ಈಗ ಇದೇ ಸಮಯದಲ್ಲಿ ಅದೇ ನಟರನ್ನು ಒಳಗೊಂಡ 'ಏನ್ ನಿನ್ ಪ್ರಾಬ್ಲಮ್ಮು' ಟ್ರೇಲರ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ ಪಡೆದುಕೊಂಡಿದೆ.

ಚುಡಾಯಿಸಿದನ್ನು ವಿರೋಧಿಸಿದ ದಂಪತಿಗೆ ದೊಣ್ಣೆ ಏಟು

ಚುಡಾಯಿಸಿದನ್ನು ವಿರೋಧಿಸಿದ ದಂಪತಿಗೆ ದೊಣ್ಣೆ ಏಟು

ಉತ್ತರಪ್ರದೇಶದಲ್ಲಿ ಚುಡಾಯಿಸಿದಕ್ಕೆ ಪ್ರತಿರೋಧ ತೋರಿದ ದಂಪತಿ ಮೇಲೆ ಗೂಂಡಾಗಳಿಬ್ಬರು ಸಾರ್ವಜನಿಕವಾಗಿ ನೂರಾರು ಜನರ ಎದುರೆ ದೊಣ್ಣೆಯಿಂದ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. ಗೃಹಿಣಿಗೆ ಗೂಂಡನೊಬ್ಬ ದೊಣ್ಣೆಯಿಂದ ತಲೆಗೆ ಹೊಡಿದಿದ್ದು ಆಕೆಯ ತಲೆಯಿಂದ ತೀವ್ರ ರಕ್ತಸ್ರಾವವಾಗಿದೆ. ಇದಾದ ಕೂಡಲೇ ಆರೋಪಿಗಳಿಬ್ಬರು ಘಟನಾ ಸ್ಥಳದಿಂದ ಪರಾರಿಯಾಗಿದ್ದು ಆರೋಪಿಗಳನ್ನು ಬಂಧಿಸುವವರೆಗೆ ಆಸ್ಪತ್ರೆಗೆ ಹೋಗುವುದಿಲ್ಲ ಎಂದು ಗೃಹಿಣಿ ಪಟ್ಟು ಹಿಡಿದಿದ್ದು ಪೊಲೀಸರ ಆಶ್ವಾಸನೆ ಮೇರೆಗೆ ಕೊನೆಗೆ ಚಿಕಿತ್ಸೆ ತೆಗೆದುಕೊಂಡು ಗೃಹಿಣಿ.

ಅಕ್ಷಯ್ ಅಭಿನಯದ ಜಾಲಿ ಎಲ್‌ಎಲ್‌ಬಿ2 ಚಿತ್ರದ ಟ್ರೈಲರ್

ಅಕ್ಷಯ್ ಅಭಿನಯದ ಜಾಲಿ ಎಲ್‌ಎಲ್‌ಬಿ2 ಚಿತ್ರದ ಟ್ರೈಲರ್

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಜಾಲಿ ಎಲ್‌ಎಲ್‌ಬಿ2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ವಕೀಲ ಪಾತ್ರದಲ್ಲಿ ಅಕ್ಷಯ್ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಸುಭಾಷ್ ಕಪೂರ್ ನಿರ್ದೇಶಿಸಿದ್ದಾರೆ. ಜಾಲಿ ಎಲ್‌ಎಲ್‌ಬಿ ಮೊದಲ ಆವೃತ್ತಿಯಲ್ಲಿ ಅರ್ಶದ್ ವಾರ್ಸಿ ಅಭಿನಯಿಸಿದ್ದು ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿತ್ತು.