ಮನರಂಜನೆ

'ಎಂದೆಂದೂ ನಿನ್ನನು ಮರೆತು ನಾನಿರಲಾರೆ' ಎಂದ ಬಾಲಿವುಡ್ ನಟ ಗೋವಿಂದ

ಭಾರತೀಯ ಚಿತ್ರರಂಗದ ಮೇರು ನಟ, ಫಾಲ್ಕೆ ಪ್ರಶಸ್ತಿ ವಿಜೇತರು ಆದ ಡಾ. ರಾಜ್ ಕುಮಾರ್ ಅವರ ಸುಮಧುರ ಗೀತೆಗಳನ್ನು ಕೇಳದವರು, ಹಾಡದವರು ಕರ್ನಾಟಕದಲ್ಲಿ ಯಾರಿದ್ದಾರೆ. ಅಂತಹದರಲ್ಲಿ ಬಾಲಿವುಡ್ ನಟ ಗೋವಿಂದ ರಿಯಾಲಿಟಿ ಶೋವೊಂದರಲ್ಲಿ ಅಣ್ಣಾವ್ರ ಎರಡು ಕನಸು ಚಿತ್ರದ ಎಂದೆಂದೂ ನಿನ್ನನು ಮರೆತು ನಾನಿರಲಾರೆ ಹಾಡನ್ನು ಹಾಡಿ ಅಚ್ಚರಿ ಮೂಡಿಸಿದರು. ವಿಡಿಯೋ ಕೃಪೆ: ಅಕ್ಷಯ್ ಅಪ್ಪು ಅಭಿಮಾನಿ

'ಎಂದೆಂದೂ ನಿನ್ನನು ಮರೆತು ನಾನಿರಲಾರೆ' ಎಂದ ಬಾಲಿವುಡ್ ನಟ ಗೋವಿಂದ
ಯಶ್ ಅಭಿನಯದ 'ಮಾಸ್ಟರ್ ಪೀಸ್' ಚಿತ್ರದ ಟೀಸರ್

ಯಶ್ ಅಭಿನಯದ 'ಮಾಸ್ಟರ್ ಪೀಸ್' ಚಿತ್ರದ ಟೀಸರ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ "ಮಾಸ್ಟರ್ ಪೀಸ್" ಟೀಸರ್ ಬಿಡುಗಡೆಯಾಗಿದ್ದು, ಸ್ವಾತಂತ್ರ್ಯ ಹೋರಾಟಗಾರನ ಪಾತ್ರದಲ್ಲಿ ಯಶ್ ಅಭಿನಯ ಗಮನ ಸೆಳೆಯುವಂತಿದೆ. ಈಗಾಗಲೇ ಯೂಟ್ಯೂಬ್ ನಲ್ಲಿ ಸುಮಾರು 40 ಸಾವಿರ ಮಂದಿ ಟೀಸರ್ ವೀಕ್ಷಿಸಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಟೀಸರ್ ಮತ್ತಷ್ಟು ಹೆಚ್ಚು ಮಾಡಿದೆ.

ವಜ್ರಕಾಯ ಚಿತ್ರದ ಟ್ರೈಲರ್

ವಜ್ರಕಾಯ ಚಿತ್ರದ ಟ್ರೈಲರ್

ಈ ಹಿಂದೆ ಭಜರಂಗಿ ನಿರ್ದೇಶಿಸಿ ಯಶಸ್ವಿ ನಿರ್ದೇಶಕರೆನಿಸಿಕೊಂಡಿದ್ದ ಹರ್ಷ, ಈ ಬಾರಿ ಮತ್ತದೇ ಭಜರಂಗಿ ತಂಡದೊಂದಿಗೆ ವಜ್ರಕಾಯ ಚಿತ್ರ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ನಟ ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತೆಲುಗು ಚಿತ್ರರಂಗದ ಖ್ಯಾತ ತಾರೆ ಜಯಸುಧಾ ಅವರು ಮುಖ್ಯಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಟ್ರೈಲರ್ ನಿಂದಲೇ ಚಿತ್ರ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

'ನಾನು ಅವನಲ್ಲ ಅವಳು' ಚಿತ್ರದ ಟ್ರೇಲರ್

'ನಾನು ಅವನಲ್ಲ ಅವಳು' ಚಿತ್ರದ ಟ್ರೇಲರ್

ಲಿಂಗದೇವರು ನಿರ್ದೇಶನದ 'ನಾನು ಅವನಲ್ಲ ಅವಳು' ಚಿತ್ರದ ಅಭಿನಯಕ್ಕೆ ಸಂಚಾರಿ ವಿಜಯ್‌ಗೆ ರಾಷ್ಟ್ರಪ್ರಶಸ್ತಿ (ಅತ್ಯುತ್ತಮ ನಟ) ಬಂದಿದೆ. 27 ವರುಷಗಳ ನಂತರ ಕನ್ನಡಕ್ಕೆ ನಟನೆಯಲ್ಲಿ ('ಚೋಮನದುಡಿ'ಗೆ ಎಂ ವಿ ವಾಸುದೇವ್ ರಾವ್ ಮತ್ತು 'ತಬರನ ಕಥೆ'ಗೆ ಚಾರುಹಾಸನ್ ಗೆ ಈ ಹಿಂದೆ ಪ್ರಶಸ್ತಿ ದೊರಕಿತ್ತು) ರಾಷ್ಟ್ರಪ್ರಶಸ್ತಿ ತಂದುಕೊಟ್ಟವರು ಸಂಚಾರಿ ವಿಜಯ್ ಹಾಗೂ ಮೊದಲ ಬಾರಿಗೆ ಪ್ರಸಾಧನ ವಿಭಾಗದಲ್ಲಿ ಪ್ರಶಸ್ತಿ ತಂದುಕೊಟ್ಟಿದ್ದಾರೆ ರಾಜು. ಈ ಚಲನಚಿತ್ರದ ಮನಕಲಕುವ ಟ್ರೇಲರ್ ಒಂದು ಇಲ್ಲಿದೆ ನೋಡಿ!

ಸೆಕ್ಸ್ ಆಯ್ಕೆ ನನ್ನದು! ದೀಪಿಕಾ ವಿಡಿಯೋ ಸಂಚಲನ

ಸೆಕ್ಸ್ ಆಯ್ಕೆ ನನ್ನದು! ದೀಪಿಕಾ ವಿಡಿಯೋ ಸಂಚಲನ

ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ, ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಖ್ಯಾತ ಫ್ಯಾಷನ್‌ ಮ್ಯಾಗಜೀನ್‌ "ವೋಗ್‌' ಹೊರತಂದಿರುವ, ನಟಿ ದೀಪಿಕಾ ಪಡುಕೋಣೆ ಅಭಿನಯದ "ಮೈ ಚಾಯ್ಸ' ಎಂಬ ವಿಡಿಯೋ ಇದೀಗ ಯೂಟ್ಯೂಬ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧಗಳು ವ್ಯಕ್ತವಾಗುತ್ತಿವೆ.