ಕಾಫಿ ಪ್ರಿಯರ ಸ್ವರ್ಗ: ಕೂರ್ಗ್'ಗೆ ಭೇಟಿ ನೀಡಿದರೆ, ತಪ್ಪದೇ ಈ 5 ಕೆಫೆಗಳಿಗೆ ಭೇಟಿ ನೀಡಿ...
ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿರುವ ಕೊಡಗು (ಕೂರ್ಗ್) ಜಿಲ್ಲೆಯು ತನ್ನ ನೈಸರ್ಗಿಕ ಸೌಂದರ್ಯ, ಕಾಫಿ ತೋಟಗಳು ಮತ್ತು ವಿಶಿಷ್ಟ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಇದನ್ನು "ಭಾರತದ ಸ್ಕಾಟ್ಲೆಂಡ್" ಎಂದು ಕರೆಯಲಾಗುತ್ತದೆ.

ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿರುವ ಕೊಡಗು (ಕೂರ್ಗ್) ಜಿಲ್ಲೆಯು ತನ್ನ ನೈಸರ್ಗಿಕ ಸೌಂದರ್ಯ, ಕಾಫಿ ತೋಟಗಳು ಮತ್ತು ವಿಶಿಷ್ಟ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಇದನ್ನು "ಭಾರತದ ಸ್ಕಾಟ್ಲೆಂಡ್" ಎಂದು ಕರೆಯಲಾಗುತ್ತದೆ.
ಇಲ್ಲಿನ ಕೆಫೆಗಳು ಕೇವಲ ಕಾಫಿ ಕುಡಿಯಲು ಅಥವಾ ಊಟ ಮಾಡಲು ಮಾತ್ರವಲ್ಲದೆ, ಅವುಗಳ ಸುತ್ತಮುತ್ತಲಿನ ಮನಮೋಹಕ ಪರಿಸರಕ್ಕೆ ಹೆಚ್ಚು ಪ್ರಸಿದ್ಧವಾಗಿವೆ.
ಪ್ರಕೃತಿಯ ಸೌಂದರ್ಯವನ್ನು ಆನಂದಿಸುತ್ತಾ ಸಮಯ ಕಳೆಯಲು ಇಲ್ಲಿನ ಕೆಲವು ಪ್ರಮುಖ ಕೆಫೆಗಳು ಮತ್ತು ಅವುಗಳ ವಿಶೇಷತೆಗಳು ಇಲ್ಲಿವೆ...
Ainmane Cafe (ಮಡಿಕೇರಿ): ಇಲ್ಲಿನ ಸ್ಥಳೀಯ 'ಸಿವೆಟ್ ಕಾಫಿ' ಪ್ರಸಿದ್ಧವಾಗಿದ್ದು, ಕಾಫಿ ತೋಟಗಳ ಮಧ್ಯೆ ಕುಳಿತು ಪ್ರಕೃತಿಯನ್ನು ಸವಿಯಬಹುದು.
1. ಬಿಗ್ ಕಪ್ ಕೆಫೆ (Big Cup Cafe)

ವಿಶಾಲವಾದ ಮತ್ತು ಆಧುನಿಕ ವಿನ್ಯಾಸ ಹೊಂದಿರುವ ಈ ಕೆಫೆ ಕಾಫಿ ಪ್ರಿಯರಿಗೆ ಸ್ವರ್ಗವೇ ಆಗಿದೆ. ಕಾಫಿಯ ವಿವಿಧ ಪದ್ಧತಿಗಳನ್ನು ಇಲ್ಲಿ ಪರಿಚಯಿಸಿ ಕೊಡಲಾಗುತ್ತದೆ. ಇಲ್ಲಿ ಆಲ್ ಡೇ ಬ್ರೆಕ್ಫಸ್ಟ್ ಸಿಗುತ್ತದೆ.
ಇಲ್ಲಿನ ಮುಖ್ಯ ಆಹಾರ: ಚಿಕನ್ ಟಿಕ್ಕಾ ಸ್ಯಾಂಡ್‌ವಿಚ್, ಮಾರ್ಗರಿಟಾ ಪಿಜ್ಜಾ, ಪೆರಿ ಪೆರಿ ಫ್ರೈಸ್ಸ್, ಸಿನಮನ್ ಮೋಚಾ ಕಾಫಿ.
2. ದಿ ಫಾಲ್ಸ್ ಅಟ್ ದಿ ತಮರಾ ಕೋರ್ಗ್ (The Falls at The Tamara Coorg)

ಕೊಡಗಿನ ಅತ್ಯಂತ ಐಷಾರಾಮಿ ರೆಸಾರ್ಟ್‌ಗಳಲ್ಲಿ ದಿ ಫಾಲ್ಸ್ ಅಟ್ ದಿ ತಮರಾ ಕೋರ್ಗ್ ಒಂದು, ಇದು ಒಂದು ವಿಶಿಷ್ಟವಾದ ರೆಸ್ಟೋರೆಂಟ್ ಆಗಿದ್ದು, ಪ್ರಕೃತಿ ಮತ್ತು ವಾಸ್ತುಶಿಲ್ಪದ ಅದ್ಭುತ ಸಮ್ಮಿಲನಕ್ಕೆ ಇದು ಸಾಕ್ಷಿಯಾಗಿದೆ.
ನೈಸರ್ಗಿಕ ಜಲಪಾತದ ಮೇಲ್ಭಾಗದಲ್ಲಿ ನಿರ್ಮಿಸಲಾದ ಬ್ರಿಡ್ಜ್ ರೆಸ್ಟೋರೆಂಟ್ ಇದಾಗಿದ್ದು, ನೆಲದ ಕೆಲವು ಭಾಗಗಳು ಪಾರದರ್ಶಕ ಗಾಜಿನಿಂದ (Glass floor) ಕೂಡಿದೆ. ನಿಮ್ಮ ಪಾದಗಳ ಕೆಳಗೆ ಹರಿಯುವ ನೀರನ್ನು ನೀವು ನೋಡಬಹುದು.
ದಟ್ಟವಾದ ಕಾಫಿ ತೋಟ ಮತ್ತು ಕಾಡಿನ ಮಧ್ಯೆ ಇರುವುದರಿಂದ, ಹಕ್ಕಿಗಳ ಚಿಲಿಪಿಲಿ ಮತ್ತು ಜಲಪಾತದ ಸದ್ದಿನ ನಡುವೆ ಪ್ರಶಾಂತವಾದ ಸಮಯ ಕಳೆಯಬಹುದು. ಇಲ್ಲಿ ಕೊಡಗಿನ ಸಾಂಪ್ರದಾಯಿಕ ಆಹಾರದ ಜೊತೆಗೆ ಅಂತರಾಷ್ಟ್ರೀಯ ಶೈಲಿಯ ಖಾದ್ಯಗಳೂ ಲಭ್ಯವಿವೆ. ತಮರಾ ಎಸ್ಟೇಟ್‌ನಲ್ಲಿ ಬೆಳೆದ ತಾಜಾ ಕಾಫಿ ಬೀಜಗಳಿಂದ ತಯಾರಿಸಿದ ಕಾಫಿ ಇಲ್ಲಿನ ವಿಶೇಷತೆಯಾಗಿದೆ.
3. ದಿ ವೀಲ್ ಕೆಫೆ (The Wheel café) ಮಡಿಕೇರಿ

ಮಡಿಕೇರಿಯ ಮಂಗಳೂರು ರಸ್ತೆಯಲ್ಲಿರುವ ವಿಶಿಷ್ಟವಾದ 'ಕಾನ್ಸೆಪ್ಟ್' ಕೆಫೆಯಾಗಿ ಇದಾಗಿದೆ. ತನ್ನ ವಿಭಿನ್ನ ವಿನ್ಯಾಸ ಮತ್ತು ಪ್ರಕೃತಿಯ ನೋಟಕ್ಕೆ ಈ ಕೆಫೆ ಹೆಸರುವಾಸಿಯಾಗಿದೆ.
ಹೆಸರೇ ಸೂಚಿಸುವಂತೆ, ಇಲ್ಲಿನ ಪೀಠೋಪಕರಣಗಳು ಮತ್ತು ಅಲಂಕಾರಗಳಲ್ಲಿ ಹಳೆಯ ಚಕ್ರಗಳನ್ನು (Wheels) ಬಳಸಲಾಗಿದೆ, ಇದು ಕೆಫೆಗೆ ಹಳ್ಳಿಗಾಡಿನ ಮತ್ತು ಕಲಾತ್ಮಕ ನೋಟ ನೀಡುತ್ತದೆ. ಇಲ್ಲಿ ಕುಳಿತು ಮಡಿಕೇರಿಯ ಹಸಿರು ಬೆಟ್ಟಗಳ ಸುಂದರ ನೋಟವನ್ನು ಆನಂದಿಸಬಹುದು. ಕೊಡಗಿನ ತಾಜಾ ಕಾಫಿ ಬೀಜಗಳಿಂದ ತಯಾರಿಸಿದ ವಿವಿಧ ರೀತಿಯ ಕಾಫಿಗಳು ಇಲ್ಲಿ ಲಭ್ಯವಿರಲಿದೆ. ಇಲ್ಲಿನ ಬರ್ಗರ್, ಸ್ಯಾಂಡ್‌ವಿಚ್ ಮತ್ತು ಫ್ರೆಂಚ ಫ್ರೈಸ್ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ತಿನಿಸುಗಳಾಗಿವೆ.
4. ಐನ್‌ಮನೆ ಕೆಫೆ (Ainmane cafe)

ಐನ್‌ಮನೆ (Ainmane) ಕೆಫೆ ಕೇವಲ ಕಾಫಿ ಕುಡಿಯುವ ಸ್ಥಳವಲ್ಲ, ಅದು ಕೊಡಗಿನ ಕಾಫಿ ಸಂಸ್ಕೃತಿಯನ್ನು ಪರಿಚಯಿಸುವ ಒಂದು ಸುಂದರ ತಾಣವೂ ಹೌದು. ವಿಶ್ವದ ಅತ್ಯಂತ ದುಬಾರಿ ಕಾಫಿಗಳಲ್ಲಿ ಒಂದಾದ 'ಸಿವೆಟ್ ಕಾಫಿ' ಇಲ್ಲಿ ಲಭ್ಯವಿದೆ.
ಕೊಡಗಿನ ವಿವಿಧ ಎಸ್ಟೇಟ್‌ಗಳಿಂದ ಆಯ್ದ ಅತ್ಯುತ್ತಮ ಅರೇಬಿಕಾ ಮತ್ತು ರೋಬಸ್ಟಾ ಕಾಫಿಗಳನ್ನು ಇಲ್ಲಿ ಸವಿಯಬಹುದು. ಈ ಕೆಫೆಯು ಮಡಿಕೇರಿಯ ಬೆಟ್ಟಗಳ ಸುಂದರ ನೋಟವನ್ನು ನೀಡುತ್ತದೆ. ಪ್ರಕೃತಿಯ ಮೌನವನ್ನು ಆನಂದಿಸಲು ಇದು ಸೂಕ್ತ ಸ್ಥಳ. ಇಲ್ಲಿ ಕಾಫಿ ಪುಡಿ ಮಾತ್ರವಲ್ಲದೆ, ಕೊಡಗಿನ ಪ್ರಸಿದ್ಧ ಜೇನುತುಪ್ಪ, ಮಸಾಲೆ ಪದಾರ್ಥಗಳು ಮತ್ತು ಚಾಕೊಲೇಟ್‌ಗಳನ್ನು ಖರೀದಿಸಬಹುದು.
5. ವಿಂಟರ್ ಕೆಫೆ ಕೋರ್ಗ್ (Winter cafe Coorg)

ಈ ಕೆಫೆ ಆಹಾರ ಜೊತೆಯಲ್ಲಿ ಆರಾಮದಾಯಕ ಪ್ರಕೃತಿಯ ಸೌಂದರ್ಯವನ್ನು ಸವಿಯುವ ಅವಕಾಶವನ್ನು ನೀಡುತ್ತದೆ. ಕ್ಯಾಪ್ಪುಚಿನೋದಿಂದ ಕೋಲ್ಡ್ ಬ್ರೂ, ಸೂಪ್‌ಗಳು, ಡೆಸರ್ಟ್‌ಗಳು ಪ್ರತಿಯೊಂದು ಇಲ್ಲಿ ವಿಶಿಷ್ಟವಾಗಿದೆ. ಅದ್ಭುತ ದೃಶ್ಯ ಮತ್ತು ಸುಸ್ವಾದಿಷ್ಟ ಆಹಾರ ನಿಮ್ಮ ಪ್ರವಾಸವನ್ನು ಮತ್ತಷ್ಟು ಸ್ಮರಣೀಯವಾಗುವಂತೆ ಮಾಡುತ್ತದೆ.
6. ಇಲ್ಲಿನ ಕೆಫೆಗಳ ವಿಶೇಷತೆ...

ಎಸ್ಟೇಟ್ ವ್ಯೂ: ಹೆಚ್ಚಿನ ಕೆಫೆಗಳು ಕಾಫಿ ಎಸ್ಟೇಟ್‌ಗಳ ಒಳಗೇ ಇರುವುದರಿಂದ ನೀವು ಕಾಫಿ ತೋಟಗಳ ನಡುವೆಯೇ ಕುಳಿತ ಅನುಭವ ಪಡೆಯುತ್ತೀರಿ.
ಸ್ಥಳೀಯ ರುಚಿ: ಇಲ್ಲಿನ ಕೆಫೆಗಳಲ್ಲಿ ಕೊಡಗಿನ ಸಾಂಪ್ರದಾಯಿಕ ಮಸಾಲೆಗಳನ್ನು ಬಳಸಿದ ಮಾಡಿದ ತಿಂಡಿಗಳು ಮತ್ತು ತಾಜಾ ಕಾಫಿ ಪುಡಿ ಲಭ್ಯವಿರುತ್ತದೆ.
ಛಾಯಾಗ್ರಹಣ (Photography): ಪ್ರಕೃತಿಯ ಹಿನ್ನೆಲೆಯಲ್ಲಿ ಸುಂದರವಾದ ಫೋಟೋಗಳನ್ನು ತೆಗೆದುಕೊಳ್ಳಲು ಇವು ಅತ್ಯುತ್ತಮ ತಾಣಗಳಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


