ಕಾಫಿ

ಕಾಫಿ ಪ್ರಿಯರ ಸ್ವರ್ಗ: ಕೂರ್ಗ್'ಗೆ ಭೇಟಿ ನೀಡಿದರೆ, ತಪ್ಪದೇ ಈ 5 ಕೆಫೆಗಳಿಗೆ ಭೇಟಿ ನೀಡಿ...
ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿರುವ ಕೊಡಗು (ಕೂರ್ಗ್) ಜಿಲ್ಲೆಯು ತನ್ನ ನೈಸರ್ಗಿಕ ಸೌಂದರ್ಯ, ಕಾಫಿ ತೋಟಗಳು ಮತ್ತು ವಿಶಿಷ್ಟ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಇದನ್ನು "ಭಾರತದ ಸ್ಕಾಟ್ಲೆಂಡ್" ಎಂದು ಕರೆಯಲಾಗುತ್ತದೆ.

ಎಚ್ಚರ... ಅತಿಯಾದ ಕಾಫಿ ಸೇವನೆಯಿಂದ BP, Anxiety ಹೆಚ್ಚಳ!
ಆತಂಕ (Anxiety) ಸಮಸ್ಯೆಯೊಂದಿಗೆ ಆಸ್ಪತ್ರೆಗೆ ಬರುವ ಸಾಕಷ್ಟು ಮಂದಿ ಸಾಮಾನ್ಯವಾಗಿ ಅತಿಯಾದ ಕಾಫಿ ಸೇವನೆ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಆದರೆ, ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿದ್ದರೂ ಗಮನ ಹರಿಸುವುದಿಲ್ಲ.

ಕಾಫಿ ಪ್ರಿಯರಿಗೆ ಬಿಗ್ ಶಾಕ್: ಪ್ರತಿ ಕೆಜಿ ಕಾಫಿ ಪುಡಿ ಬೆಲೆ 100 ರೂ ಏರಿಕೆ..!
ಇಂಡಿಯನ್ ಕಾಫಿ ಟ್ರೇಡ್ ಅಸೋಸಿಯೇಶನ್ (ಐಸಿಟಿಎ) ಕಾಫಿ ಬೆಲೆ ಏರಿಕೆ ಬಗ್ಗೆ ಮಾಹಿತಿ ನೀಡಿದ್ದು, ಒಂದು ವಾರದಲ್ಲಿ ಬೆಲೆ ಏರಿಕೆ ಮಾಡುವುದಾಗಿ ತಿಳಿಸಿದೆ.

ಕಾಫಿ, ಟೀಗೆ ಲಕ್ಷಾಂತರ ವೆಚ್ಚ ಮಾಡುವವರಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕ ಭರಿಸಲಾಗದೇ?: ಸರ್ಕಾರದ ವಿರುದ್ಧ ಹೈಕೋರ್ಟ್ ಆಕ್ರೋಶ
ನಿಮ್ಮ ಕಚೇರಿಯಲ್ಲಿ ಕಾಫಿ, ಟೀಗೆ ಪ್ರತಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಆದರೆ, ಬಡ ಕಾರ್ಮಿಕರ ಪುತ್ರಿಯರ ಶಿಕ್ಷಣದ ಖರ್ಚು ಭರಿಸಲು ನಿಮಗೆ ಆಗದೇ? ಇಂಥ ಮಕ್ಕಳ ಸಹಾಯಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು. ಸೆಸ್ ಸಂಗ್ರಹಿಸಿರುವುದು ಅವರಿಗಾಗಿ ಅಲ್ಲವೇ? ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತು.

ವಿಶ್ವದ ಅಗ್ರ 38 ಕಾಫಿಗಳ ಪಟ್ಟಿಯಲ್ಲಿ ದಕ್ಷಿಣ ಭಾರತದ ಫಿಲ್ಟರ್ ಕಾಫಿಗೆ 2ನೇ ಸ್ಥಾನ!
ಕಾಪಿ ಅತ್ಯಂತ ರುಚಿಕರವಾದ ಪಾನೀಯವಾಗಿದ್ದು, ತನ್ನ ರುಚಿಯಿಂದಲೇ ಹೆಸರುವಾಸಿಯಾಗಿದೆ. ಪ್ರಪಂಚದಾದ್ಯಂತ ವಿವಿಧ ರೀತಿಯ ಕಾಫಿ ಬೀಜಗಳು ಮತ್ತು ತಯಾರಿಕಾ ಶೈಲಿಗಳು ಇವೆ. ಜನಪ್ರಿಯ ಆಹಾರ ಮತ್ತು ಪ್ರಯಾಣ ಮಾರ್ಗದರ್ಶಿ ವೇದಿಕೆಯಾದ ಟೇಸ್ಟ್‌ಅಟ್ಲಾಸ್ ಇತ್ತೀಚೆಗೆ 'ವಿಶ್ವದ ಟಾಪ್ 38 ಕಾಫಿಗಳು' ಹೊಸ ರೇಟಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಯುವ ಜನತೆಯಲ್ಲಿ ಕಾಫಿ ಮೇಲಿನ ಒಲವು ಹೆಚ್ಚುತ್ತಿದೆ: ಕಾಫಿ ಬೋರ್ಡ್ ಸಿಇಒ ಡಾ. ಕೆ.ಜೆ. ಜಗದೀಶ್ (ಸಂದರ್ಶನ)
ಜನರು ಸೇವಿಸುವ ಕಾಫಿಗೆ ಭಾರತದಲ್ಲಿ ಅವಕಾಶಗಳು ಹೆಚ್ಚು. ಹೆಚ್ಚಿನ ಬೆಲೆಯ ಹೊರತಾಗಿಯೂ, ಭಾರತೀಯ ಕಾಫಿಯನ್ನು ಜಾಗತಿಕವಾಗಿ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಹೆಚ್ಚುತ್ತಿರುವ ಕೆಫೆಗಳು ಮತ್ತು ಕಾಫಿ ಜಾಯಿಂಟ್‌ಗಳು ಕಾಫಿ ಕೇವಲ ಪಾನೀಯವಲ್ಲ, ಅದೊಂದು ಸುಮಧುರ ಅನುಭವ ಎಂದು ಹೇಳಲಾಗುತ್ತಿದೆ.

ಬೆಂಗಳೂರು: ಕಾಫಿ ಬೋರ್ಡ್'ನಲ್ಲಿರುವ ಮಿಟ್ಟಿ ಕೆಫೆಗೆ ಜರ್ಮನ್ ಚಾನ್ಸೆಲರ್ ಭೇಟಿ, ಸಿಬ್ಬಂದಿಗಳೊಂದಿಗೆ ಕಾಫಿ ಸವಿದ ಓಲಾಫ್ ಸ್ಕೋಲ್ಜ್
ಡಾ ಅಂಬೇಡ್ಕರ್ ರಸ್ತೆಯಲ್ಲಿರುವ ಇಂಡಿಯಾ ಕಾಫಿ ಬೋರ್ಡ್'ನಲ್ಲಿರುವ ಮಿಟ್ಟಿಕೆಫೆಗೆ ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಭಾನುವಾರ ಭೇಟಿ ನೀಡಿದ್ದು, ಸಿಬ್ಬಂದಿಗಳ ಜೊತೆಗೂಡಿ ಕಾಫಿ ಸವಿದರು.

ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಆಡಳಿತದಿಂದ 'ಕೂರ್ಗ್ ಕಾಫಿ ಫೆಸ್ಟಿವಲ್ ಮತ್ತು ಎಕ್ಸ್‌ಪೋ' ಆಯೋಜನೆ
ಕೂರ್ಗ್ ಕಾಫಿ ಮತ್ತು ಸ್ಥಳೀಯ ಕಾಫಿ ಬಳಕೆಯನ್ನು ಉತ್ತೇಜಿಸುವ ಗುರಿಯೊಂದಿಗೆ ಕೊಡಾಗು ಜಿಲ್ಲಾ ಆಡಳಿತವು ಮಡಿಕೇರಿಯಲ್ಲಿ 'ಕೂರ್ಗ್ ಕಾಫಿ ಫೆಸ್ಟಿವಲ್ ಮತ್ತು ಎಕ್ಸ್‌ಪೋ' ಆಯೋಜಿಸುತ್ತಿದೆ.

ಕಲಬೆರಕೆ ಕಾಫಿ ಮಾರಾಟ ಮಾಡಿದ ವ್ಯಾಪಾರಿಗೆ 6 ತಿಂಗಳ ಜೈಲು ಶಿಕ್ಷೆ
ಕಾಫಿ ಪೌಡರ್‌ನಲ್ಲಿ ಕೆಫೇನ್ ಅಂಶ ಮತ್ತು ಜಲೀಯ ಸಾರ ಮಿಶ್ರಣ ಮಾಡಿ ಮಾರಾಟಕ್ಕೆ ಮುಂದಾಗಿದ್ದ ಸಕಲೇಶಪುರದ ಎಂ.ಎಸ್.ಕಾಫೀ ವರ್ಕ್ಸ್‌ನ ಮಾಲೀಕ ಸಯ್ಯದ್ ಅಹ್ಮದ್ ಎಂಬುವವರಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ 6 ತಿಂಗಳ ಜೈಲು ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

