voting

ಮಧ್ಯ ಪ್ರದೇಶ, ಛತ್ತೀಸಗಢದಲ್ಲಿ ವಿಧಾನಸಭೆ ಚುನಾವಣೆ; ಬಿರುಸಿನಿಂದ ಸಾಗಿದ ಮತದಾನ
230 ಸದಸ್ಯ ಬಲದ ವಿಧಾನಸಭೆಗೆ ಶುಕ್ರವಾರ ಬೆಳಗ್ಗೆ ಮತದಾನ ಆರಂಭವಾದ ಮಧ್ಯಪ್ರದೇಶದಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಒಟ್ಟು 10.39 ಪ್ರತಿಶತ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತ್ತೊಂದೆಡೆ, ಬಿಗಿ ಭದ್ರತೆಯಲ್ಲಿ ಛತ್ತೀಸ್‌ಗಢದ ಎರಡನೇ ಹಂತದ ಚುನಾವಣೆಗೆ 70 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 9 ಗಂಟೆಯವರೆಗೆ ಸುಮಾರು ಶೇ 6 ರಷ್ಟು ಮತದಾನವಾಗಿದೆ.

ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗೆ ಮತದಾನ: ಸುಕ್ಮಾದಲ್ಲಿ ಐಇಡಿ ಸ್ಫೋಟ; ಸಿಆರ್‌ಪಿಎಫ್ ಕಮಾಂಡೋಗೆ ಗಾಯ
ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಮತದಾನ ಇಂದು ಬೆಳಿಗ್ಗೆ ಆರಂಭವಾಗಿದೆ. ಈ ನಡುವೆ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ಐಇಡಿ ಸ್ಫೋಟದಲ್ಲಿ ಓರ್ವ ಕೋಬ್ರಾ ಕಮಾಂಡೊ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ ಆರಂಭ: INDIA ಬಣಕ್ಕೆ ಅಗ್ನಿ ಪರೀಕ್ಷೆ
ದೇಶದ 6 ರಾಜ್ಯಗಳಲ್ಲಿನ 7 ವಿಧಾನಸಭೆ ಸ್ಥಾನಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು ಎಲ್ಲ ಕ್ಷೇತ್ರಗಳಲ್ಲೂ ಮತದಾನ ಬಿರುಸುಗೊಂಡಿದೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ.

ಪಶ್ಚಿಮ ಬಂಗಾಳ: 73 ಸಾವಿರ ಪಂಚಾಯತಿಗಳಿಗೆ ಮತದಾನ ಆರಂಭ; ಕಣದಲ್ಲಿ ಎರಡು ಲಕ್ಷ ಅಭ್ಯರ್ಥಿಗಳು!
ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಗೆ ಬಿಗಿ ಭದ್ರತೆಯ ನಡುವೆ ಶನಿವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭಗೊಂಡಿದ್ದು, ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಸುಮಾರು 5.67 ಕೋಟಿ ಜನರು ಮತದಾನಕ್ಕೆ ಅರ್ಹರಾಗಿದ್ದಾರೆ .

ನಕಲಿ ಮತದಾರರಿಂದ ಯತ್ನಾಳ್'ಗೆ ಗೆಲುವು: ತನಿಖೆಗೆ ಕಾಂಗ್ರೆಸ್ ಆಗ್ರಹ
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದಲ್ಲಿ ನಕಲಿ ಮತದಾರರಿಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಗೆಲುವು ಸಾಧಿಸಿದ್ದಾರೆಂದು ಆರೋಪಿಸಿರುವ ಕಾಂಗ್ರೆಸ್, ಈ ಬಗ್ಗೆ ತನಿಖೆ ನಡೆಸುವಂತೆ ಗುರುವಾರ ಆಗ್ರಹಿಸಿದೆ.

ಗದಗ: ಇಚ್ಛೆಗೆ ವಿರುದ್ಧವಾಗಿ ಇವಿಎಂ ಬಟನ್ ಒತ್ತಿಸಿದ ಚುನಾವಣಾಧಿಕಾರಿ, ವೃದ್ಧ ಮಹಿಳೆಯಿಂದ ಪ್ರತಿಭಟನೆ
ತಮ್ಮ ಇಚ್ಛೆಗೆ ವಿರುದ್ಧವಾಗಿ ಇವಿಎಂ ಬಟನ್ ಒತ್ತಿಸಿದ್ದಾರೆಂದು ಆರೋಪ ಮಾಡಿರುವ 85 ವರ್ಷದ ವೃದ್ಧ ಮಹಿಳೆಯೊಬ್ಬರು, ಚುನಾವಣಾಧಿಕಾರಿಗಳ ವಿರುದ್ಧ ಪ್ರತಿಭಟನೆ ಬುಧವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ವಿಧಾನಸಭೆ ಚುನಾವಣೆ: ಸಂಜೆ 5 ಗಂಟೆವರೆಗೆ ಶೇ 65.69 ರಷ್ಟು ಮತದಾನ, ಮತ್ತೆ ರಾಮನಗರದಲ್ಲಿ ಅತಿಹೆಚ್ಚು!
224 ವಿಧಾನಸಭಾ ಕ್ಷೇತ್ರಗಳಿಗೆ ರಾಜ್ಯದಲ್ಲಿ ಬೆಳಗ್ಗೆ 7 ಗಂಟೆಯಿಂದ ಮತದಾನ ನಡೆಯುತ್ತಿದ್ದು, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಾಗಿದೆ. ಸಂಜೆ 5 ಗಂಟೆಯವರೆಗೆ ಶೇ 65.69 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ: ಮಧ್ಯಾಹ್ನ 3 ಗಂಟೆವರೆಗೆ ಶೇ 52.18 ರಷ್ಟು ಮತದಾನ, ರಾಮನಗರದಲ್ಲಿ ಅತಿಹೆಚ್ಚು!
224 ಸ್ಥಾನಗಳಿಗೆ ನಡೆಯುತ್ತಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಮಧ್ಯಾಹ್ನ 3 ಗಂಟೆಯವರೆಗೆ ಶೇ 52.18ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ವಿಧಾನಸಭೆ ಚುನಾವಣೆ: ಕೆಲವು ಅಹಿತಕರ ಘಟನೆ ಹೊರತುಪಡಿಸಿ ಮತದಾನ ಬಹುತೇಕ ಶಾಂತಿಯುತ
ವಿಧಾನಸಭೆ ಚುನಾವಣಾ ಕಣದಲ್ಲಿರುವ ಕರ್ನಾಟಕದಲ್ಲಿ ವಿಜಯಪುರ, ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಕೆಲವು ಅಹಿತಕರ ಘಟನೆಗಳನ್ನು ಹೊರತುಪಡಿಸಿ ಮತದಾನ ಬಹುತೇಕ ಶಾಂತಿಯುತವಾಗಿದೆ. ಮಧ್ಯಾಹ್ನ 1 ಗಂಟೆಯವರೆಗೆ ರಾಜ್ಯದಲ್ಲಿ ಶೇಕಡಾ 37.25 ರಷ್ಟು ಚುರುಕಾದ ಮತದಾನವಾಗಿದೆ.

