ಗದಗ: ಇಚ್ಛೆಗೆ ವಿರುದ್ಧವಾಗಿ ಇವಿಎಂ ಬಟನ್ ಒತ್ತಿಸಿದ ಚುನಾವಣಾಧಿಕಾರಿ, ವೃದ್ಧ ಮಹಿಳೆಯಿಂದ ಪ್ರತಿಭಟನೆ
ತಮ್ಮ ಇಚ್ಛೆಗೆ ವಿರುದ್ಧವಾಗಿ ಇವಿಎಂ ಬಟನ್ ಒತ್ತಿಸಿದ್ದಾರೆಂದು ಆರೋಪ ಮಾಡಿರುವ 85 ವರ್ಷದ ವೃದ್ಧ ಮಹಿಳೆಯೊಬ್ಬರು, ಚುನಾವಣಾಧಿಕಾರಿಗಳ ವಿರುದ್ಧ ಪ್ರತಿಭಟನೆ ಬುಧವಾರ ಪ್ರತಿಭಟನೆ ನಡೆಸಿದರು.

ಗದಗ: ತಮ್ಮ ಇಚ್ಛೆಗೆ ವಿರುದ್ಧವಾಗಿ ಇವಿಎಂ ಬಟನ್ ಒತ್ತಿಸಿದ್ದಾರೆಂದು ಆರೋಪ ಮಾಡಿರುವ 85 ವರ್ಷದ ವೃದ್ಧ ಮಹಿಳೆಯೊಬ್ಬರು, ಚುನಾವಣಾಧಿಕಾರಿಗಳ ವಿರುದ್ಧ ಪ್ರತಿಭಟನೆ ಬುಧವಾರ ಪ್ರತಿಭಟನೆ ನಡೆಸಿದರು.
ಮುಕ್ತುಂಬಿ ದೊಡ್ಡಮನಿ (85) ಪ್ರತಿಭಟನೆಗಿಳಿದ ವೃದ್ಧ ಮಹಿಳೆಯಾಗಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಮತಗಟ್ಟೆಯಲ್ಲಿ ಈ ಘಟನೆ ನಡೆದಿದೆ,
ಮತಗಟ್ಟೆಗೆ ಹೋದಾಗ ಸಿಬ್ಬಂದಿಯೊಬ್ಬ ನನ್ನನ್ನು ಇವಿಎಂ ಇರುವ ಕಡೆಗೆ ಕರೆದೊಯ್ದರು. ಈ ವೇಳೆ ನಾನು ಮತ ಚಲಾಯಿಸಲು ಬಯಸುವ ಅಬ್ಯರ್ಥಿಯ ಸಂಖ್ಯೆಯನ್ನು ತೋರಿಸಿದೆ. ಆದರೆ, ಅವರು ನನ್ನ ಕೈ ಹಿಡಿದು ಬಲವಂತವಾಗಿ ಬೇರೊಂದು ಬಟನ್ ಒತ್ತಿಸಿದರು. ಹೀಗಾಗಿ ನನ್ನ ಆಯ್ಕೆಯ ಅಭ್ಯರ್ಥಿಗೆ ಮತ ಹಾಕಲು ಅವಕಾಶ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದೆ ಎಂದು ದೊಡ್ಡಮನಿ ಅವರು ಹೇಳಿದ್ದಾರೆ.
ಉದ್ದೇಶ ಪೂರ್ವಕದಿಂದ ಬಟನ್ ಒತ್ತಲಾಗಿರಲಿಲ್ಲ. ಆಕಸ್ಮಿಕವಾಗಿ ಆಯಿತು. ಮಹಿಳೆಯ ಮನವರಿಕೆ ಮಾಡಲಾಗಿದ್ದು, ಇದೀಗ ಆಕೆಯನ್ನು ಮನೆಗೆ ಕಳುಹಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


